Vishwavani Editorial: ಬೈಕ್ ಟ್ಯಾಕ್ಸಿ ಸೇವೆ ಊರ್ಜಿತವಾಗಲಿ
ಕೇಂದ್ರ ಸರಕಾರದ ಅನುಮೋದನೆ ನೀಡಿದ್ದರೂ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ರಾಜ್ಯ ಸರಕಾರಕ್ಕಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಹೆಚ್ಚು ವರಿ ಆದಾಯಕ್ಕಾಗಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಿದ್ದ ಲಕ್ಷಾಂತರ ಯುವಕ-ಯುವತಿಯರಲ್ಲಿ ಆಶಾ ಭಾವನೆ ಮೂಡಿದೆ. ಮಿತವ್ಯಯ ಮತ್ತು ತ್ವರಿತ ಸೇವೆಯ ಕಾರಣಕ್ಕೆ ಈ ವಾಹನಗಳನ್ನು ಆಶ್ರಯಿಸಿದ್ದ ಜನರಿಗೂ ಕೇಂದ್ರದ ಈ ನಿರ್ಧಾರ ಸಂತಸ ತಂದಿದೆ.


ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ರಾಜ್ಯಸರಕಾರ ಸ್ಪಷ್ಟ ಮಾರ್ಗ ಸೂಚಿಗಳನ್ನು ರೂಪಿಸುವವರೆಗೂ ಬೈಕ್ ಟ್ಯಾಕ್ಸಿ ಸೇವೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಇದೀಗ ಕೇಂದ್ರ ಸರಕಾರವು ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿ, ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರಕಾರದ ಅನುಮೋದನೆ ನೀಡಿದ್ದರೂ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ರಾಜ್ಯ ಸರಕಾರಕ್ಕಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರ ದಿಂದ ಹೆಚ್ಚುವರಿ ಆದಾಯಕ್ಕಾಗಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಿದ್ದ ಲಕ್ಷಾಂತರ ಯುವಕ-ಯುವತಿಯರಲ್ಲಿ ಆಶಾಭಾವನೆ ಮೂಡಿದೆ. ಮಿತವ್ಯಯ ಮತ್ತು ತ್ವರಿತ ಸೇವೆಯ ಕಾರಣಕ್ಕೆ ಈ ವಾಹನಗಳನ್ನು ಆಶ್ರಯಿಸಿದ್ದ ಜನರಿಗೂ ಕೇಂದ್ರದ ಈ ನಿರ್ಧಾರ ಸಂತಸ ತಂದಿದೆ.
ಇದನ್ನೂ ಓದಿ: Vishwavani Editorial: ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ
ಈಗ ಬೈಕ್ ಟ್ಯಾಕ್ಸಿ ಮತ್ತು ಆಟೋ ಸವಾರರ ನಡುವಣ ಜಟಾಪಟಿಗೆ ತಾರ್ಕಿಕ ಅಂತ್ಯ ಹೇಳುವ ಹೊಣೆ ರಾಜ್ಯಸರಕಾರದ್ದು. ಇದುವರೆಗೆ ಕಾಯಿದೆಯಡಿ ಅವಕಾಶವಿಲ್ಲ ಎಂದು ಹೇಳುತ್ತಿದ್ದ ರಾಜ್ಯ ಸರಕಾರ ಇನ್ನು ಇದೇ ನೆಪ ಇಟ್ಟುಕೊಂಡು ಕಾಲ ತಳ್ಳುವಂತಿಲ್ಲ. ಬೈಕ್ ಟ್ಯಾಕ್ಸಿ ಸ್ಥಗಿತಗೊಂಡ ಬಳಿಕ ಬಹುತೇಕ ಕಡೆಗಳಲ್ಲಿ ಆಟೋ ಕನಿಷ್ಠ ಬಾಡಿಗೆ ದರ 50 ರು.ಗಳಿಗೇರಿದೆ.
ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ಗೋವಾ ಸೇರಿದಂತೆ ಸುಮಾರು ಎಂಟು ರಾಜ್ಯಗಳು ಈಗಾಗಲೇ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿವೆ. ಬೆಂಗಳೂರು ಮತ್ತು ಇತರ ಮಹಾ ನಗರಗಳ ಜನತೆಗೆ ಅನುಕೂಲವಾಗಿದ್ದ ಬೈಕ್ ಟ್ಯಾಕ್ಸಿ ಸೇವೆಯನ್ನು ಸೂಕ್ತ ಕಾನೂನು ಚೌಕಟ್ಟಿನಡಿ ಮುಂದುವರಿಸಲು ರಾಜ್ಯ ಸರಕಾರ ಅವಕಾಶ ಮಾಡಿಕೊಡಬೇಕು.
ಇದೇ ವೇಳೆ ಪ್ರಯಾಣಿಕರ ಮತ್ತು ಸವಾರರ ಸುರಕ್ಷತೆ ಮತ್ತು ವಿಮಾ ಪರಿಹಾರಕ್ಕೂ ಆದ್ಯತೆ ನೀಡ ಬೇಕು. ರಿಕ್ಷಾ ಚಾಲಕರ ಜತೆಗಿನ ಘರ್ಷಣೆಗೂ ಕಡಿವಾಣ ಹಾಕಬೇಕು. ಇದು ರಾಜ್ಯ ಸರಕಾರದ ಆದ್ಯ ಕರ್ತವ್ಯ.