ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI BCCI sacks coaching staff: ಕೋಚಿಂಗ್‌ ಸಿಬ್ಬಂದಿಗಳ ಕಡಿತ; ಅಭಿಷೇಕ್‌ ನಾಯರ್‌, ದಿಲೀಪ್‌ಗೆ ಗೇಟ್ ಪಾಸ್

ಎಂಟು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಸಹಾಯಕ ಕೋಚ್ ಅಭಿಷೇಕ್ ನಾಯರ್(Abhishek Nayar) ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಅವರ ಜತೆಗೆ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್(T. Dilip) ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ(Soham Desai) ಅವರನ್ನು ಸಹ ವಜಾಗೊಳಿಸಲಾಗಿದೆ.

ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ಗೆ ಗೇಟ್‌ ಪಾಸ್‌

Profile Abhilash BC Apr 17, 2025 11:49 AM

ನವದೆಹಲಿ: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತಂಡದ ಸಹಾಯಕ ಸಿಬ್ಬಂದಿಯ ಹಲವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವಜಾಗೊಳಿಸಿದೆ. ಎಂಟು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಸಹಾಯಕ ಕೋಚ್ ಅಭಿಷೇಕ್ ನಾಯರ್(Abhishek Nayar) ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಅವರ ಜತೆಗೆ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್(T. Dilip) ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ(Soham Desai) ಅವರನ್ನು ಸಹ ವಜಾಗೊಳಿಸಲಾಗಿದೆ. 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಕಾರಣ ಬಿಸಿಸಿಐ ಈ ಕ್ರಮ ಕೈಗೊಂಡಿದೆ.

ಜೂನ್ 20 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ನಿರ್ಣಾಯಕ ಟೆಸ್ಟ್ ಸರಣಿಗೆ ಮುಂಚಿತವಾಗಿ ಹೊಸ ರೂಪದ ಸಹಾಯಕ ಸಿಬ್ಬಂದಿ ಭಾರತೀಯ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಹುದ್ದೆಯಿಂದ ನಿವೃತ್ತರಾದ ಬಳಿಕ ಗಂಭೀರ್ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು. ಈ ವೇಳೆ ಅವರು ಇಬ್ಬರು ಸಹಾಯಕ ತರಬೇತುದಾರರು ಮತ್ತು ಬೌಲಿಂಗ್ ತರಬೇತುದಾರರನ್ನು ತಮ್ಮೊಂದಿಗೆ ಕರೆತಂದಿದ್ದರು.

ಇದನ್ನೂ ಓದಿ IPL 2025: ಓವರ್‌ ಪೂರ್ತಿಗೊಳಿಸಲು 11 ಎಸೆತ ಎಸೆದು ಅನಗತ್ಯ ದಾಖಲೆ ಬರೆದ ಸಂದೀಪ್‌ ಶರ್ಮ

ರವಿಶಾಸ್ತ್ರಿ ಮತ್ತು ದ್ರಾವಿಡ್ ಅವರ ಅವಧಿಯಲ್ಲಿನ ಪೂರ್ಣ ಪ್ರಮಾಣದ ಭಾರತೀಯ ಬೆಂಬಲ ಸಿಬ್ಬಂದಿಯಿಂದ ದೂರ ಸರಿದು, ಭಾರತವು ರಯಾನ್ ಟೆನ್ ಡೆಶ್ಕೋಟ್ ಮತ್ತು ಅಭಿಷೇಕ್ ನಾಯರ್ ಅವರನ್ನು ಸಹಾಯಕ ತರಬೇತುದಾರರನ್ನಾಗಿ ನೇಮಿಸಿಕೊಂಡಿತ್ತು. ಅದೇ ಸಮಯದಲ್ಲಿ, ಮಾರ್ನೆ ಮಾರ್ಕೆಲ್ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ಪರಾಸ್ ಮಾಂಬ್ರೆ ಅವರಿಂದ ವಹಿಸಿಕೊಂಡರು.

ಆದರೆ, ತವರಿನ ನ್ಯೂಜಿಲ್ಯಾಂಡ್‌ ವಿರುದ್ಧದ ಮತ್ತು ಆಸೀಸ್‌ ಪ್ರವಾಸದಲ್ಲಿ ಭಾರತ ಹೀನಾಯ ಸೋಲು ಕಂಡು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ ಹೆಚ್ಚುವರಿ ಕೋಚಿಂಗ್‌ ಸಿಬ್ಬಂದಿಗಳನ್ನು ಇದೀಗ ಬಿಸಿಸಿಐ ವಜಾಗೊಳಿಸಿದೆ.