ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ಗೆ ವಿದಾಯಕ್ಕೂ ವಿರಾಟ್‌ ಕೊಹ್ಲಿ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ರವಿ ಶಾಸ್ತ್ರಿ!

ಟೆಸ್ಟ್ ನಿವೃತ್ತಿಗೂ ಮುನ್ನ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದರು. ಕೊಹ್ಲಿ ಈ ನಿರ್ಧಾರವನ್ನು ಹಠಾತ್‌ ತೆಗೆದುಕೊಂಡರು. ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ ಮತ್ತು ಅದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ಕೊಹ್ಲಿ ಹೇಳಿದ್ದರು ಎಂಬುದನ್ನು ಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

ವಿರಾಟ್‌ ಕೊಹ್ಲಿಯ ನಿರ್ಧಾರ ನನಗೆ ಅಚ್ಚರಿ ಮೂಡಿಸಿತು: ರವಿ ಶಾಸ್ತ್ರಿ!

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ರವಿ ಶಾಸ್ತ್ರಿ

Profile Ramesh Kote May 15, 2025 11:58 PM

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ ನಿವೃತ್ತಿ ಹೊಂದಿರುವುದರಿಂದ ಭಾರತ ತಂಡದಲ್ಲಿ (Indian Cricket Team) ಒಂದು ಶೂನ್ಯ ಭಾವನೆ ಉಂಟಾಗಿದೆ. ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಸಾಕಷ್ಟು ಶ್ರೇಷ್ಠ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಅವರ ಹಠಾತ್ ನಿವೃತ್ತಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ವಿರಾಟ್ ಕೊಹ್ಲಿ ಇನ್ನು ಮುಂದೆ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಟೀಮ್‌ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ದೊಡ್ಡ ಸಂಗತಿಯೊಂದನ್ನು ರಿವೀಲ್‌ ಮಾಡಿದ್ದಾರೆ. ರವಿ ಶಾಸ್ತ್ರಿ ಮತ್ತು ವಿರಾಟ್‌ ಕೊಹ್ಲಿ ಕಾಂಬಿನೇಷನ್‌ನಲ್ಲಿ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ.

ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ತಮ್ಮೊಂದಿಗೆ ಮಾತನಾಡಿದ್ದರು ಎಂದು ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ. ಟೆಸ್ಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಕೊಹ್ಲಿ ಹೇಳಿದ್ದ ಮಾತುಗಳನ್ನು ರವಿಶಾಸ್ತ್ರಿ ಐಸಿಸಿ ರಿವ್ಯೂವ್‌ನಲ್ಲಿ ಹಂಚಿಕೊಂಡಿದ್ದಾರೆ. ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ ಮತ್ತು ಯಾವುದೇ ವಿಷಾದವಿಲ್ಲ ಎಂದು ಶಾಸ್ತ್ರಿಗೆ ಕೊಹ್ಲಿ ಹೇಳಿದ್ದರು. ವಿರಾಟ್ ಕೊಹ್ಲಿ ನಿವೃತ್ತಿ ಪಡೆಯುವುದಕ್ಕೂ ಒಂದು ವಾರ ಮೊದಲು ರವಿಶಾಸ್ತ್ರಿ ಇದನ್ನು ಹೇಳಿದ್ದರು.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು, ಆದರೆ…!: ಮೊಹಮ್ಮದ್‌ ಕೈಫ್‌

ರವಿ ಶಾಸ್ತ್ರಿಗೆ ಕೊಹ್ಲಿ ಹೇಳಿದ್ದೇನು?

ಐಸಿಸಿ ರಿವ್ಯೂನಲ್ಲಿ ಸಂಜನಾ ಗಣೇಶನ್ ಅವರೊಂದಿಗಿನ ಸಂಭಾಷಣೆಯಲ್ಲಿ ರವಿಶಾಸ್ತ್ರಿ, "ಕೊಹ್ಲಿಯ ಮನಸ್ಸು ಸಂಪೂರ್ಣವಾಗಿ ಸ್ಪಷ್ಟವಾಗಿತ್ತು. ನಿವೃತ್ತಿಯ ನಿರ್ಧಾರದ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೊಹ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಕೊಹ್ಲಿಯ ಮನಸ್ಸು ಈಗ ಸಾಕು ಎಂದು ಹೇಳುತ್ತಿತ್ತು. ಕೊಹ್ಲಿ ನಿರ್ಧಾರದಿಂದ ತಮಗೆ ಆಶ್ಚರ್ಯವಾಯಿತು. ಕೊಹ್ಲಿ ಇನ್ನೂ ಎರಡು-ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದು ಎಂದು ಅವರು ಭಾವಿಸಿದ್ದರು. ಆದರೆ ನೀವು ಮಾನಸಿಕವಾಗಿ ದಣಿದಾಗ, ನಿಮ್ಮ ದೇಹವೂ ಸಹ ಬಿಟ್ಟುಕೊಡುತ್ತದೆ. ನೀವು ದೈಹಿಕವಾಗಿ ಎಷ್ಟೇ ಸದೃಢರಾಗಿದ್ದರೂ, ಮಾನಸಿಕವಾಗಿ ದಣಿದಿದ್ದರೆ, ಅದು ನಿಮ್ಮ ದೇಹಕ್ಕೆ ಸಾಕು ಎಂಬ ಸಂದೇಶವನ್ನು ರವಾನಿಸುತ್ತದೆ," ಎಂದು ತಿಳಿಸಿದ್ದಾರೆ.

"ತಾತ್ವಿಕವಾಗಿ ಅವರು ಮುಂದುವರಿಯಬೇಕೆಂದು ಎಲ್ಲರೂ ಬಯಸಬಹುದು. ಆದರೆ, ನಂತರ ಅವರು ದೊಡ್ಡ ಚಿತ್ರಣವನ್ನು ನೋಡುತ್ತಾರೆ. ಏಕದಿನ ಕ್ರಿಕೆಟ್‌ಗೆ ದೊಡ್ಡದಾಗಿ ಕೊಡುಗೆ ನೀಡಬಹುದೆಂದು ಅವರು ಭಾವಿಸುತ್ತಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಇನ್ನೂ ಸಾಕಷ್ಟು ಫ್ರಾಂಚೈಸಿ ಕ್ರಿಕೆಟ್‌ ಇದೆ," ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ನೀಡಿಲ್ಲ: ಮೈಕಲ್‌ ವಾನ್‌!

"ಕೊಹ್ಲಿಯ ಜನಪ್ರಿಯತೆಯೂ ಅವರ ಆಯಾಸಕ್ಕೆ ಕಾರಣ. ಅವರಿಗೆ ಪ್ರಪಂಚದಾದ್ಯಂತ ಗೌರವ ಸಿಕ್ಕಿದೆ. ಕಳೆದ ದಶಕದಲ್ಲಿ ಅವರಷ್ಟು ಅಭಿಮಾನಿಗಳು ಬೇರೆ ಯಾರಿಗೂ ಇರಲಿಲ್ಲ. ಅದು ಆಸ್ಟ್ರೇಲಿಯಾ ಆಗಿರಲಿ ಅಥವಾ ದಕ್ಷಿಣ ಆಫ್ರಿಕಾ ಆಗಿರಲಿ, ಜನರು ಅವರನ್ನು ನೋಡಲು ಬರುತ್ತಿದ್ದರು. ಜನರು ಅವನೊಂದಿಗೆ ಪ್ರೀತಿ ಮತ್ತು ದ್ವೇಷದ ಸಂಬಂಧವನ್ನು ಹೊಂದಿದ್ದರು. ಪ್ರೇಕ್ಷಕರನ್ನು ಕೆರಳಿಸುವ ಸಾಮರ್ಥ್ಯ ಅವನಲ್ಲಿತ್ತು ಎಂಬ ಕಾರಣಕ್ಕೆ ಜನರು ಅವನ ಮೇಲೆ ಕೋಪಗೊಂಡರು. ಅವರು ಆಚರಿಸಿದ ರೀತಿಯಲ್ಲಿ ಅವರ ತೀವ್ರತೆ ಎದ್ದು ಕಾಣುತ್ತಿತ್ತು," ಎಂದು ಮಾಜಿ ಹೆಡ್‌ ಕೋಚ್‌ ತಿಳಿಸಿದ್ದಾರೆ.