ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pulwama Encounter: ಪುಲ್ವಾಮಾ ಎನ್‌ಕೌಂಟರ್‌; ಶೆಡ್‌ನಲ್ಲಿ ಮೂವರು ಉಗ್ರರು ಅಡಗಿಕೊಂಡಿರುವ ವಿಡಿಯೊ ವೈರಲ್

Viral Video: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾದ ತ್ರಾಲ್ ಪ್ರದೇಶದ ನಾದರ್‌ನಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಹತರಾದರು. ಈ ಎನ್‌ಕೌಂಟರ್ ಸಂದರ್ಭದಲ್ಲಿ ಭಯೋತ್ಪಾದಕರು ಒಂದು ಶೆಡ್‌ನಲ್ಲಿ ಅಡಗಿರುವ ದೃಶ್ಯಗಳನ್ನು ತೋರಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಭಾರತದ ದಾಳಿಗೆ ಹೆದರಿ ಅಡಗಿ ಕೂತ  ಭಯೋತ್ಪಾದಕರು; ವಿಡಿಯೊ ವೈರಲ್‌

ಅಡಗಿ ಕೂತ ಭಯೋತ್ಪಾದಕರು.

Profile Sushmitha Jain May 15, 2025 9:25 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾ (Pulwama) ಜಿಲ್ಲೆಯ ಅವಂತಿಪೊರಾದ ತ್ರಾಲ್ ಪ್ರದೇಶದ ನಾದರ್‌ನಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಹತರಾದರು (Pulwama Encounter). ಈ ಎನ್‌ಕೌಂಟರ್ ಸಂದರ್ಭದಲ್ಲಿ ಭಯೋತ್ಪಾದಕರು ಒಂದು ಶೆಡ್‌ನಲ್ಲಿ ಅಡಗಿರುವ ದೃಶ್ಯಗಳನ್ನು ತೋರಿಸುವ ವಿಡಿಯೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚಿನಾರ್ ಕಾರ್ಪ್ಸ್ ಈ ಎನ್‌ಕೌಂಟರ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. “ಅವಂತಿಪೊರಾದ ನಾದರ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಭಯೋತ್ಪಾದಕರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ವಿಶೇಷ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಗುರುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನ ನಾದರ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತೀಯ ಪಡೆಗಳು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಈ ಸುದ್ದಿಯನ್ನು ಓದಿ: Operation Sindoor: ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್

ಆಪರೇಷನ್ ಸಿಂದೂರ್‌ನ ನಂತರ ಆಪರೇಷನ್ ಕೆಲ್ಲರ್

ಭಾರತೀಯ ಸೇನೆಯು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಬಿಎಫ್ ಜತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಿತು. ಆಪರೇಷನ್ ಕೆಲ್ಲರ್ ಅಡಿಯಲ್ಲಿ, ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ (LeT/TRF) ಸ್ಥಳೀಯ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ರೈಫಲ್‌ಗಳು, ದೊಡ್ಡ ಪ್ರಮಾಣದ ಮದ್ದುಗುಂಡು, ಗ್ರೆನೇಡ್‌ಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದವು.

ಭಾರತೀಯ ಸೇನೆಯ ಹೆಚ್ಚುವರಿ ನಿರ್ದೇಶನಾಲಯದ ಸಾರ್ವಜನಿಕ ಮಾಹಿತಿ (ADG PI) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಶೋಪಿಯಾನ್ ಜಿಲ್ಲೆಯ ಕೆಲ್ಲರ್ ಕಾಡಿನಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದ ಮೇಲೆ, ಭಾರತೀಯ ಸೇನೆ, ಜಮ್ಮುಮತ್ತು ಕಾಶ್ಮೀರ ಪೊಲೀಸ್ ಮತ್ತು CRPF 2025ರ ಮೇ 13ರಂದು ಜಂಟಿ ಕಾರ್ಯಾಚರಣೆ ಆರಂಭಿಸಿತು. ತೀವ್ರ ಎನ್‌ಕೌಂಟರ್‌ನ ನಂತರ ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್‌‌ನ ಸ್ಥಳೀಯ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು” ಎಂದು ತಿಳಿಸಿದೆ.

ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಲಾಯಿತು. ಜೈಷ್‌ನ ಪ್ರಧಾನ ಕಚೇರಿಯಾದ ಬಹವಲ್ಪುರ್ ಮತ್ತು ಲಷ್ಕರ್‌ನ ಪ್ರಮುಖ ತರಬೇತಿ ತಾಣವಾದ ಮುರಿದ್ಕೆ ಈ ದಾಳಿಯ ಗುರಿಗಳಲ್ಲಿ ಸೇರಿದ್ದವು.