ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hardik Pandya's 'Rivalry: ಟಾಸ್‌ ವೇಳೆ ದರ್ಪ ತೋರಿದ ಗಿಲ್‌ಗೆ ತಕ್ಕ ತಿರುಗೇಟು ಕೊಟ್ಟ ಪಾಂಡ್ಯ

ಪಂದ್ಯದಲ್ಲಿ ನಾಣ್ಯ ಚಿಮ್ಮುಗೆ ಮಾಡಿದ ಬಳಿಕ ಪಾಂಡ್ಯ ಅವರು ಗಿಲ್‌ಗೆ ಹಸ್ತಲಾಘವ ಮಾಡಲು ಮುಂದಾದರು. ಆದರೆ ಗಿಲ್‌ ಇದಕ್ಕೆ ಕ್ಯಾರೆ ಎನ್ನದಂತೆ ಮುಖ ತಿರುಗಿಸಿ ಬದಿಗೆ ಸರಿದರು. ಅದಾಗಲೇ ಸಿಟ್ಟಿಗೆದ್ದಿದ್ದ ಪಾಂಡ್ಯ ಈ ಸೇಡನ್ನು ತೋರಿಸಿಕೊಳ್ಳಲು ಕಾಯುತ್ತಿದ್ದರು. ಚೇಸಿಂಗ್‌ ವೇಳೆ ಬೌಲ್ಟ್‌ ಎಸೆತದಲ್ಲಿ ಗಿಲ್‌ ಒಂದು ರನ್‌ಗೆ ಔಟಾಗುತ್ತಿದ್ದಂತೆ ಪಿಚ್‌ ಬಳಿಗೆ ಓಡಿ ಬಂದ ಪಾಂಡ್ಯ ಗಿಲ್‌ ಮುಂದೆ ಕಿರುಚುತ್ತಾ ಸಂಭ್ರಮಾಚರಣೆ ಮಾಡಿದರು.

ಟಾಸ್‌ ವೇಳೆ ದರ್ಪ ತೋರಿದ ಗಿಲ್‌ಗೆ ತಕ್ಕ ತಿರುಗೇಟು ಕೊಟ್ಟ ಪಾಂಡ್ಯ

Profile Abhilash BC May 31, 2025 11:29 AM

ಮುಲ್ಲಾನ್‌ಪುರ: ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 2025 ರ ಎಲಿಮಿನೇಟರ್( IPL 2025 Eliminator) ಪಂದ್ಯದಲ್ಲಿ ಟಾಸ್ ಪ್ರಕ್ರಿಯೆ ವೇಳೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್‌ ಗಿಲ್(Shubman Gill) ಅವರು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ(Hardik Pandya)ಗೆ ಹಸ್ತಲಾಘವ ನಿರಾಕರಣೆ ಮಾಡಿ ದರ್ಪ ತೋರಿದ್ದರು. ಆದರೆ ಪಂದ್ಯದ ವೇಳೆ ಗಿಲ್‌ ವಿಕೆಟ್‌ ಬಿದ್ದಾಗ ಪಾಂಡ್ಯ(Hardik Pandya's 'Rivalry) ಭಾರೀ ಸಂಭ್ರಮಾಚರಣೆ ಮಾಡಿ ಸೇಡು ತೀರಿಸಿಕೊಂಡರು. ಈ ಘಟನೆಯ ವಿಡಿಯೊ ಇದೀಗ ವೈರಲ್‌ ಆಗಿದೆ.

ಪಂದ್ಯದಲ್ಲಿ ನಾಣ್ಯ ಚಿಮ್ಮುಗೆ ಮಾಡಿದ ಬಳಿಕ ಪಾಂಡ್ಯ ಅವರು ಗಿಲ್‌ಗೆ ಹಸ್ತಲಾಘವ ಮಾಡಲು ಮುಂದಾದರು. ಆದರೆ ಗಿಲ್‌ ಇದಕ್ಕೆ ಕ್ಯಾರೆ ಎನ್ನದಂತೆ ಮುಖ ತಿರುಗಿಸಿ ಬದಿಗೆ ಸರಿದರು. ಅದಾಗಲೇ ಸಿಟ್ಟಿಗೆದ್ದಿದ್ದ ಪಾಂಡ್ಯ ಈ ಸೇಡನ್ನು ತೋರಿಸಿಕೊಳ್ಳಲು ಕಾಯುತ್ತಿದ್ದರು. ಚೇಸಿಂಗ್‌ ವೇಳೆ ಬೌಲ್ಟ್‌ ಎಸೆತದಲ್ಲಿ ಗಿಲ್‌ ಒಂದು ರನ್‌ಗೆ ಔಟಾಗುತ್ತಿದ್ದಂತೆ ಪಿಚ್‌ ಬಳಿಗೆ ಓಡಿ ಬಂದ ಪಾಂಡ್ಯ ಗಿಲ್‌ ಮುಂದೆ ಕಿರುಚುತ್ತಾ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದವರು ಉಭಯ ಆಟಗಾರರ ಈ ಗಲಾಟೆ ಪಂದ್ಯಕ್ಕೂ ಮುನ್ನವೇ ಆರಂಭಗೊಂಡಿತ್ತು. ಇದೀಗ ಕೊನೆಗೊಂಡಿದೆ ಎಂದು ಹೇಳಿದರು.



ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಆರಂಭಿಕ ಜೋಡಿ ರೋಹಿತ್ (81) ಮತ್ತು ಜಾನಿ ಬೆಸ್ಟೊ (47) ಮೊದಲ ವಿಕೆಟ್‌ ಜತೆಯಾಟದಲ್ಲಿ 84 ರನ್ ಸೇರಿಸಿದರು. ಈ ಜತೆಯಾಟದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 208 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಚೇಸಿಂಗ್‌ ವೇಳೆ ಸಾಯಿ ಸುದರ್ಶನ್ (80) ಮತ್ತು ವಾಷಿಂಗ್ಟನ್ ಸುಂದರ್ (48) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ್ದು ತಂಡದ ಸೋಲಿಗೆ ಪ್ರಮುಖ ಕಾರಣ.ಈ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. ಆದರೆ ಆ ಬಳಿಕ ಬಂದ ಬ್ಯಾಟರ್‌ಗಳು ಸತತವಾಗಿ ವಿಕೆಟ್‌ ಕಳೆದುಕೊಂಡರು. ನಾಯಕ ಶುಭಮನ್‌ ಗಿಲ್‌ ಕನಿಷ್ಠ 25 ರನ್‌ ಬಾರಿಸುತ್ತಿದ್ದರೂ ತಂಡ ಆರಾಮವಾಗಿ ಗೆಲುವು ಸಾಧಿಸುತ್ತಿತ್ತು. ಆದರೆ ಗಿಲ್‌ ಕೇವಲ ಒಂದು ರನ್‌ಗೆ ಸೀಮಿತರಾದರು.

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌