ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುಜರಾತ್‌ ಸೋಲಿನ ಬಳಿಕ ಕ್ವಾಲಿಫೈಯರ್‌-1ರ ಲೆಕ್ಕಾಚಾರ ಹೀಗಿದೆ

IPL 2025 Top-Two Qualification Scenarios: ಗುಜರಾತ್‌ಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಇದೀಗ ಸೋಲಿನಿಂದ ತಂಡಕ್ಕೆ ಅಗ್ರ ಸ್ಥಾನ ಕಳೆದುಕೊಳ್ಳುವ ಕಂಟಕ ಎದುರಾಗಿದೆ. ಸದ್ಯ ಸೋಲಿನ ಹೊರತಾಗಿಯೂ ಗುಜರಾತ್‌ ಮೊದಲ ಸ್ಥಾನ ಕಾಯ್ದುಕೊಂಡಿದೆ. 14 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ 18 ಅಂಕಗಳನ್ನು ಹೊಂದಿದೆ.

ಗುಜರಾತ್‌ ಸೋಲಿನ ಬಳಿಕ ಕ್ವಾಲಿಫೈಯರ್‌-1ರ ಸನ್ನಿವೇಶ ಹೀಗಿದೆ

Profile Abhilash BC May 25, 2025 8:59 PM

ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌(CSK) ವಿರುದ್ಧ ಕೊನೆಯ ಲೀಗ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌(GT) ಸೋಲು ಕಂಡ ಕಾರಣ ಇದೀಗ ಉಳಿದ ಮೂರು ತಂಡಗಳಾದ ಮುಂಬೈ, ಆರ್‌ಸಿಬಿ(RCB) ಮತ್ತು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಅಗ್ರ ಎರಡರೊಳಗೆ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್‌(IPL 2025 Top-Two Qualification Scenarios) ಆಡುವ ಅವಕಾಶವೊಂದು ಲಭಿಸಿದೆ. ಆದರೆ ಇಲ್ಲಿಯೂ ಕೆಲವು ಲೆಕ್ಕಾಚಾರಗಳಿಗೆ.

ಗುಜರಾತ್‌ಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಇದೀಗ ಸೋಲಿನಿಂದ ತಂಡಕ್ಕೆ ಅಗ್ರ ಸ್ಥಾನ ಕಳೆದುಕೊಳ್ಳುವ ಕಂಟಕ ಎದುರಾಗಿದೆ. ಸದ್ಯ ಸೋಲಿನ ಹೊರತಾಗಿಯೂ ಗುಜರಾತ್‌ ಮೊದಲ ಸ್ಥಾನ ಕಾಯ್ದುಕೊಂಡಿದೆ. 14 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ 18 ಅಂಕಗಳನ್ನು ಹೊಂದಿದೆ.

ಕ್ವಾಲಿಫೈಯರ್‌-1ರ ಸನ್ನಿವೇಶಗಳು ಹೀಗಿದೆ

ಪಂಜಾಬ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯದ ವಿಜೇತರು ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆಯುತ್ತಾರೆ.

ಆರ್‌ಸಿಬಿ ತಂಡ ಲಕ್ನೋವನ್ನು ಸೋಲಿಸಿದರೆ ಆರ್‌ಸಿಬಿ ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆಯುತ್ತದೆ. ಒಂದೊಮ್ಮೆ ಆರ್‌ಸಿಬಿ ಸೋತರೆ ಆಗ ಗುಜರಾತ್‌ ತಂಡಕ್ಕೆ ಕ್ವಾಲಿಫೈಯರ್‌-1 ಪಂದ್ಯವನ್ನಾಡುವ ಅವಕಾಶ ಸಿಗುತ್ತದೆ.

ಒಂದೊಮ್ಮೆ ಪಂಜಾಬ್‌ ಮತ್ತು ಮುಂಬೈ ನಡುವಿನ ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡರೆ, ಲಕ್ನೋ ತಂಡವನ್ನು ಆರ್‌ಸಿಬಿ ಸೋಲಿಸಿದರೆ, ಆಗ ಆರ್‌ಸಿಬಿ ಮತ್ತು ಗುಜರಾತ್‌ ಕ್ವಾಲಿಫೈಯರ್‌-1 ಪಂದ್ಯವನ್ನಾಡಲಿದೆ.

ಆರ್‌ಸಿಬಿ ಲಕ್ನೋ ವಿರುದ್ಧ ಸೋತರೆ ಎಲಿಮಿನೇಟರ್‌ ಪಂದ್ಯ ಆಡಬೇಕಿದೆ.

ಮೊದಲ ಕ್ವಾಲಿಫೈಯರ್‌ ಮೇ 29ರಂದು ಚಂಡೀಗಡದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಟಿಕೆಟ್ ಪಡೆಯಲಿದೆ. ಮತ್ತೊಂದೆಡೆ ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಸಿಗಲಿದೆ.

ಇದನ್ನೂ ಓದಿ IPL 2025: ಪಂಜಾಬ್‌ಗೆ ಸೋಲು; ಆರ್‌ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ