Rinku Singh engaged: ಜೂನ್ 8ಕ್ಕೆ ಸಂಸದೆ ಪ್ರಿಯಾ ಸರೋಜ್ ಜತೆ ರಿಂಕು ಸಿಂಗ್ ನಿಶ್ಚಿತಾರ್ಥ
Rinku Singh and Priya Saroj: "ರಿಂಕು ಮತ್ತು ಪ್ರಿಯಾ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬರಿಗೊಬ್ಬರು ತಿಳಿದಿದ್ದಾರೆ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಸಂಬಂಧಕ್ಕೆ ಅವರ ಕುಟುಂಬಗಳ ಒಪ್ಪಿಗೆ ಅಗತ್ಯವಾಗಿತ್ತು. ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಕೊಂಡಿವೆ" ಎಂದು ತೂಫಾನ್ ಸರೋಜ್ ಹೇಳಿದ್ದಾರೆ.


ಲಕ್ನೋ: ಟೀಂ ಇಂಡಿಯಾದ ಆಟಗಾರ ರಿಂಕು ಸಿಂಗ್(Rinku Singh) ಹಸೆಮಣೆ ಏರಲು ಸಜ್ಜಾಗಿದ್ದು, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್(Priya Saroj) ಅವರೊಂದಿಗೆ ಜೂನ್ 8 ರ ಭಾನುವಾರ ನಿಶ್ಚಿತಾರ್ಥ(Rinku Singh engaged) ಮಾಡಿಕೊಳ್ಳಲಿದ್ದಾರೆ. ನಿಶ್ಚಿತಾರ್ಥ ಲಕ್ನೋದ ಹೋಟೆಲ್ ಒಂದರಲ್ಲಿ ನಡೆಯಲಿದೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಆಡಿದ ನಂತರ ರಿಂಕು ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರವೇಶಿಸಲಿದ್ದಾರೆ.
ಕಳೆದ ವರ್ಷವೇ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪ್ರಿಯಾ ಸರೋಜ್ ಅವರ ತಂದೆ ತೂಫಾನ್ ಸರೋಜ್ ನಾವಿನ್ನೂ ನಿರ್ಧಾರ ಮಾಡಿಲ್ಲ. ಮಾತುಕತೆಯ ಹಂತದಲ್ಲಿದೆ ಅಷ್ಟೇ. ಅದು ಬಿಟ್ಟರೆ ಬೇರೆ ಏನೂ ನಡೆದಿಲ್ಲ ಎಂದು ತಿಳಿಸಿದ್ದರು. ಇದೀಗ ನಿಶ್ಚಿತಾರ್ಥ ವಿಚಾರವನ್ನು ಖಚಿತಪಡಿಸಿದ್ದಾರೆ.
"ರಿಂಕು ಮತ್ತು ಪ್ರಿಯಾ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬರಿಗೊಬ್ಬರು ತಿಳಿದಿದ್ದಾರೆ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಸಂಬಂಧಕ್ಕೆ ಅವರ ಕುಟುಂಬಗಳ ಒಪ್ಪಿಗೆ ಅಗತ್ಯವಾಗಿತ್ತು. ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಕೊಂಡಿವೆ" ಎಂದು ತೂಫಾನ್ ಸರೋಜ್ ಹೇಳಿದ್ದಾರೆ.
ಪ್ರಿಯಾ ಸರೋಜ್ ಬಗ್ಗೆ
26 ವರ್ಷದ ಪ್ರಿಯಾ ಸರೋಜ್ ದೇಶದ ಹಾಲಿ 2ನೇ ಅತಿ ಕಿರಿಯ ಸಂಸದೆ ಎನಿಸಿದ್ದಾರೆ. 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತೂಫಾನ್ ಸರೋಜ್ ಪುತ್ರಿಯಾಗಿರುವ ಪ್ರಿಯಾ, 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಲಿಶಹರ್ ಕ್ಷೇತ್ರದಿಂದ ಚುನಾಯಿತರಾಗಿದ್ದರು. ವಾರಣಸಿಯಲ್ಲಿ ಜನಿಸಿರುವ ಪ್ರಿಯಾ, ವೃತ್ತಿಯಲ್ಲಿ ವಕೀಲೆ ಆಗಿದ್ದಾರೆ.
ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ರಿಂಕು ಸಿಂಗ್. ಈ ಪ್ರದರ್ಶನದ ಮೂಲಕವೇ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.