ಕಾಂಗ್ರೆಸ್ನಿಂದ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ: ಜೋಶಿ ಪ್ರಶ್ನೆ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆಯಲ್ಲೇ ಮಿಂದೇಳುತ್ತಿರುವ ಕಾಂಗ್ರೆಸ್ ಅದ್ಯಾವ ಪುರುಷಾರ್ಥಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಇಳಿಯುತ್ತಿದೆ? ರಾಜ್ಯದ ಆರ್ಥಿಕ ದುರಾವಸ್ಥೆಯನ್ನು ಜನರಿಂದ ಮರೆಮಾಚಲೇ? 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ತನ್ನ ವಿರುದ್ಧವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.