ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ನಾಸ್ ಕಾಂ ಫೌಂಡೇಷನ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಸ್ಟೆಮ್ ಶಿಕ್ಷಣದ ಪ್ರಾಯೋಗಿಕ ತರಬೇತಿಗೆ ಸಹಯೋಗ

ಸರ್ಕಾರಿ ಶಾಲೆಗಳಲ್ಲಿ ಸ್ಟೆಮ್ ಶಿಕ್ಷಣದ ಪ್ರಾಯೋಗಿಕ ತರಬೇತಿಗೆ ಸಹಯೋಗ

8 ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಲಭ್ಯತೆ ಮತ್ತು ಅನುಭವ ಪೂರ್ವಕ ಕಲಿಕೆಯ ಸದೃಢಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತಗಳ ಪ್ರಾಯೋಗಿಕ ಅರಿವು ನೀಡುತ್ತದೆ. ಶಿಕ್ಷಕರು ಆಧುನಿಕ ಸ್ಟೆಮ್ ಬೋಧನಾ ವಿಧಾನ, ಲ್ಯಾಬ್ ನಿರ್ವಹಣೆ ಮತ್ತು ಡಿಜಿಟಲ್ ಸಾಧನಗಳಲ್ಲಿ ವಿಶೇಷ ತರಬೇತಿ ಪಡೆಯಲಿದ್ದು ಬೋಧನೆಯ ಗುಣಮಟ್ಟ ಮತ್ತು ವಿದ್ಯಾರ್ಥಿ ಫಲಿತಾಂಶಗಳಲ್ಲಿ ಸುಧಾರಣೆ ತರುತ್ತದೆ.

Bangalore News: 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

1984ರಲ್ಲಿ ಜೈಪುರದಲ್ಲಿ ಸ್ಥಾಪನೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ ಮೆಂಟ್ ರಿಸರ್ಚ್ ಸಂಸ್ಥೆಯು ದಕ್ಷಿಣ ಭಾರತದ ಅಂಗ ಸಂಸ್ಥೆಯಾಗಿ ಬೆಂಗಳೂರಿನಲ್ಲಿ 2004ರಲ್ಲಿ ಪ್ರಾರಂಭವಾ ಯಿತು. ಕಳೆದ ಎರಡು ದಶಕಗಳಲ್ಲಿ, ಈ ಸಂಸ್ಥೆ ಆರೋಗ್ಯ ಮತ್ತು ಆಸ್ಪತ್ರೆ ನಿರ್ವಹಣಾ ಶಿಕ್ಷಣ, ಬಹು ಶಾಖಾ ಸಂಶೋಧನೆ. ತರಬೇತಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹಾ ಸೇವೆಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.

Music Mailari: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಯುಟ್ಯೂಬ್‌ ಸ್ಟಾರ್‌ ಮ್ಯೂಸಿಕ್‌ ಮೈಲಾರಿ ಮೇಲೆ ಕೇಸ್

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ, ಯುಟ್ಯೂಬ್‌ ಸ್ಟಾರ್‌ ಮೈಲಾರಿ ಮೇಲೆ ಕೇಸ್

ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು ಎನ್ನಲಾಗಿದೆ. ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.

Vijay Divas: ವಿಜಯ್‌ ದಿವಸ್:‌ ಸೈನಿಕರು ಶೌರ್ಯದ ಸಂಕೇತ

Vijay Divas: ವಿಜಯ್‌ ದಿವಸ್:‌ ಸೈನಿಕರು ಶೌರ್ಯದ ಸಂಕೇತ

ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ ವಿಜಯ್ ದಿವಸ್ ಕೇವಲ ಯುದ್ಧದ ವಿಜಯೋತ್ಸವವಲ್ಲ, ಬದಲಿಗೆ ಧರ್ಮ,ಮಾನವೀಯತೆ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಭಾರತೀಯ ಸೈನಿಕರು ತೋರಿದ ಅಸಾಧಾರಣ ಬಲಿದಾನ ಮತ್ತು ಶೌರ್ಯದ ಸಂಕೇತವಾಗಿದೆ. 1971ರ ಯುದ್ಧಕ್ಕೆ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ನಡೆಯುತ್ತಿದ್ದ ನರಮೇಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮುಖ್ಯ ಕಾರಣ ವಾಗಿತ್ತು.

Monkey Disease: ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ, 8 ಜನರಲ್ಲಿ ಕೆಎಫ್‌ಡಿ ವೈರಸ್

ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ, 8 ಜನರಲ್ಲಿ ಕೆಎಫ್‌ಡಿ ವೈರಸ್

ಸಾಮಾನ್ಯವಾಗಿ ಈ ಸೋಂಕು (Kyasanur Forest Disease) ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕಂಡುಬರುತ್ತಿತ್ತು. ಆರೋಗ್ಯ ಇಲಾಖೆ ಇದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಸಹ ತೆಗೆದುಕೊಳ್ಳುತ್ತಿತ್ತು. ಆದರೆ ಈ ವರ್ಷ ಡಿಸೆಂಬರ್ ತಿಂಗಳಲ್ಲೇ ಈ ಸೋಂಕು ಕಾಣಿಸಿಕೊಂಡಿದೆ. ಮಲೆನಾಡು ಭಾಗದ ಕಾಡಂಚಿನ ಪ್ರದೇಶಗಳ ಗ್ರಾಮಸ್ಥರ ಜೊತೆಗೆ, ಆರೋಗ್ಯ ಇಲಾಖೆಗೂ ಈಗ ದೊಡ್ಡ ಆತಂಕ ಎದುರಾಗಿದೆ.

Shilpa Shetty: ನಿಯಮ ಉಲ್ಲಂಘನೆ ಆರೋಪ; ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ FIR ದಾಖಲು

ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ FIR!

ನಟಿ ಶಿಲ್ಪಾ ಶೆಟ್ಟಿ ಒಡೆತನದ ಬಾಸ್ಟಿಯನ್ ರೆಸ್ಟೋರಂಟ್‌ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೆ ಹೆಚ್ಚಿನ ಸಮಯ ರೆಸ್ಟೋರಂಟ್‌ ತೆರೆದಿರುವುದು ಹಾಗೂ ನಿಯಮಗಳನ್ನು ಉಲ್ಲಂಘಿಸಿ ತಡರಾತ್ರಿ ಪಾರ್ಟಿಗಳಿಗೆ ಅವಕಾಶ ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಿಯತಮೆಯ ಖಾಸಗಿ ವಿಡಿಯೋ ಗಂಡನಿಗೆ ಕಳಿಸಿದ ಪಾಪಿ, ಪ್ರಿಯಕರನ ಮನೆ ಎದುರೇ ವಿವಾಹಿತೆ ಧರಣಿ

ಪ್ರಿಯತಮೆಯ ಖಾಸಗಿ ವಿಡಿಯೋ ಗಂಡನಿಗೆ ಕಳಿಸಿದ ಪಾಪಿ, ವಿವಾಹಿತೆ ಧರಣಿ

ಅವರಿಬ್ಬರು 4 ವರ್ಷ ಪರಸ್ಪರ ಪ್ರೀತಿಸಿದರೂ ಮದುವೆಯಾಗಲು ಜಾತಿ ಅಡ್ಡ ಬಂದಿತ್ತು. ಕೊನೆಗೆ ಪ್ರಿಯತಮೆ ಮನೆಯವರು ತೋರಿಸಿದ ಯುವಕನನ್ನು ಮದುವೆಯಾಗಿ ಗಂಡನ ಜೊತೆ ಹೋಗಿದ್ದಳು. ಆದರೆ ಮದುವೆಯಾಗಿ 20 ದಿನ ಕಳೆಯುವುದರೊಳಗೆ ಆಕೆಯ ಪ್ರಿಯಕರ ವಿಲನ್‌ ಆಗಿದ್ದು, ತಾವಿಬ್ಬರು ಜೊತೆಯಾಗದ್ದಾಗ ಮಾಡಿಕೊಂಡಿದ್ದ ಖಾಸಗಿ ವಿಡಿಯೋಗಳನ್ನು ಆಕೆಯ ಗಂಡನಿಗೆ ಕಳುಹಿಸಿದ್ದಾನೆ.

President Draupadi Murmu: ಇಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಗಮನ

ಇಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಗಮನ

ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವಕ್ಕೆ ಇಂದು ರಾಷ್ಟ್ರಪತಿ ಅವರು ಆಗಮಿಸುತ್ತಿದ್ದು, ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 3.15ಕ್ಕೆ ಮುರ್ಮು ಅವರು ಜಯಂತಿ ಮಹೋತ್ಸವ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಹಿಸುವರು. ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸುವರು.

Karnataka Weather: ಇಂದು ಬೆಂಗಳೂರಿನಲ್ಲಿ ಮುಂಜಾನೆ ದಟ್ಟ ಮಂಜು, ಉಳಿದೆಡೆ ಒಣ ಹವೆ

ಇಂದು ಬೆಂಗಳೂರಿನಲ್ಲಿ ಮುಂಜಾನೆ ದಟ್ಟ ಮಂಜು, ಉಳಿದೆಡೆ ಒಣ ಹವೆ

ಕರ್ನಾಟಕ ರಾಜ್ಯ ಹವಾಮಾನ: ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಳವಾಗುತ್ತಿದೆ. ಮುಂದಿನ ಎರಡು ದಿನ ಕನಿಷ್ಠ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮುಂದಿನ 5 ದಿನ ಹವಾಮಾಣ ಹೇಗಿರಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಹೂ ಮಾರುಕಟ್ಟೆಯಲ್ಲಿ ಹಸಿದವರಿಗೆ ಅನ್ನದಾನ ಪ್ರಾರಂಭ ಮಾಡಿದ ಯಲುವಹಳ್ಳಿ ರಮೇಶ್

ಹೂ ಮಾರುಕಟ್ಟೆಯಲ್ಲಿ ಹಸಿದವರಿಗೆ ಅನ್ನದಾನ ಪ್ರಾರಂಭ

ಜನರಿಂದ ಗಿಜಿಗುಡುವ ಸ್ಥಳದಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡಬಗ್ಗರಿಗೆ ಅನುಕೂಲವಾಗುವ ಉದ್ದೇಶದಿಂದ ಸೇವಾ ಚಟುವಟಿಕೆಯನ್ನು ಕೈಗೊಳ್ಳುತ್ತಿದ್ದು ಪ್ರತಿ ಸೋಮ ವಾರ ಬೆಳಿಗ್ಗೆ ೯ ಕ್ಕೆ ಊಟವನ್ನು ವಿತರಿಸಲಾಗುತ್ತದೆ ಎಂದು ವಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಟಾನಗಳ ಅಧ್ಯಕ್ಷ  ಯಲುವಹಳ್ಳಿ.ಎನ್. ರಮೇಶ್ ತಿಳಿಸಿದರು.

JDS: ತ್ಯಾಗ ಮುಖ್ಯವೆಂದು ನಂಬಿದ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಟಿ.ಎನ್.ರಾಜಗೋಪಾಲ್ : ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಟಿ.ಎನ್.ರಾಜಗೋಪಾಲ್

ಸಹಕಾರ ಕ್ಷೇತ್ರವಾದ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಯನ್ನು ಉಂಟು ಮಾಡಿದವರು ಹಾಗೂ ನಂದಿನಿ ಉತ್ಪನ್ನಗಳನ್ನು ದೇಶ ವಿದೇಶಕ್ಕೆ ಪರಿಚಯಿಸಿದವರು ಹಾಗೂ ಟೆಟ್ರಾ ಪ್ಯಾಕ್ ಮೂಲಕ ಹಾಲು ಹಲವುದಿನಗಳ ಕಾಲ ಕೆಡದಂತೆ ದಾಸ್ತಾನು ಮಾಡುವ ವಿಧಾನವನ್ನು ಪರಿಚಯಿಸಿದವ ರೆಂದರು.

Actor and social activist Chetan: ಸಮ ಸಮಾಜದ ನಿರ್ಮಾಣಕ್ಕೆ ಯುವ ಜನತೆ ಪಣತೊಡಬೇಕು ಎಂದು ನಟ ಚೇತನ್ ಕರೆ

ಸಮ ಸಮಾಜದ ನಿರ್ಮಾಣಕ್ಕೆ ಯುವ ಜನತೆ ಪಣತೊಡಬೇಕು

ಒಳ್ಳೆ ಕೆಲಸಗಳನ್ನು ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಉತ್ತಮ ಸಮಾಜ ವನ್ನು ಕಟ್ಟಲು ಹೋರಾಟವೇ ಮುಖ್ಯ.  ಸಮ ಸಮಾಜ ನಿರ್ಮಾಣಕ್ಕೆ ಜನರ ಬೆಂಬಲ ಬೇಕು. ನಾವು ಬೆಳೆಯುವು ದಲ್ಲದೆ ನಮ್ಮೊಡನೆ ಜನರು ಬದಲಾಗಬೇಕು ಸಮ ಸಮಾಜ ನಿರ್ಮಾಣ ವಾಗಬೇಕೆಂದು ತಿಳಿಸಿದರು.

Poor Quality Helmet: ಚಿಂತಾಮಣಿಯಲ್ಲಿ ಕಳಪೆ ಹೆಲ್ಮೆಟ್ ಮಾರಾಟ: ಹೆಸರಿಗೆ ಹೆಲ್ಮೆಟ್ ಸವಾರರ ಸುರಕ್ಷತೆಗಿಲ್ಲ ಗ್ಯಾರಂಟಿ

ಚಿಂತಾಮಣಿಯಲ್ಲಿ ಕಳಪೆ ಹೆಲ್ಮೆಟ್ ಮಾರಾಟ

ಹೆಲ್ಕೆಟ್‌ಗಾಗಿ ಶೋರೂಮ್, ಅಂಗಡಿಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ತಹಸೀಲ್ದಾ‌ರ್ ಕಚೇರಿ,ಬೆಂಗಳೂರು ರಸ್ತೆ,ಚೇಳೂರು ವೃತ್ತ,ಬಾಗೇಪಲ್ಲಿ ಸರ್ಕಲ್ ಸೇರಿದಂತೆ ಬೀದಿ ಬದಿಯಲ್ಲಿ ವ್ಯಾಪಾರಿಗಳು ಹೆಲ್ಮೆಟ್ ಮಾರಾಟ ಮಾಡುತ್ತಿದ್ದು ಮೊದಲ ದಿನ ಯಾವುದೋ ಒಂದು ಹೆಲ್ಮೆಟ್ ಲಭಿಸಿದರೆ ಆನಂತರ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡೋಣ ಎಂದು ಗುಣಮಟ್ಟ ಲೆಕ್ಕಿಸದೆ ಬೀದಿಬದಿ ಹೆಲ್ಮೆಟ್ ಖರೀದಿಸುತ್ತಿದ್ದಾರೆ

Chinthamani Crime:  ITC ನಕಲಿ ಕಂಪನಿಯ ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ಸಿಗರೇಟ್ ಮಾರಾಟ: ಮೂವರು ಆರೋಪಿಗಳ ಸಮೇತ ಕಾರು ವಶಕ್ಕೆ

ಚಿಂತಾಮಣಿ ನಗರದ ಟಿಎಪಿಎಂಸಿ ಮಾರುಕಟ್ಟೆಯ ಆವರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ ಐ ಟಿ ಸಿ ಕಂಪನಿಯ ಹೆಸರಿನ ನಕಲಿ ಸಿಗರೇಟ್ ಪ್ಯಾಕೆಟ್ ಮತ್ತು ಮೂವರು ಆರೋಪಿಗಳ ಸಮೇತ ಒಂದು ಬಲೆನೋ ಕಾರು ವಶಪಡಿಸಿಕೊಳ್ಳುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿ ಯಾಗಿದ್ದಾರೆ.

Chikkaballapur News: ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ

ದೇಶದ ಅಖಂಡತೆಗೆ ರಾಷ್ಟೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಬಲಗೈಜಾತಿಗಳ ಒಕ್ಕೂಟ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದ್ದಾರೆ. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಯಸುವ ರಾಷ್ಟ್ರವಾಗಿದ್ದು ಇಂತಹ ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ ಹೆಸರು ಚಿರಸ್ಥಾಯಿ ಆಗಿಸಲು ಸಿಎಂ ಕ್ರಮವಹಿಸಲಿ: ಬಿ.ವೈ. ವಿಜಯೇಂದ್ರ

ಶಾಮನೂರು ಶಿವಶಂಕರಪ್ಪ ಹೆಸರು ಚಿರಸ್ಥಾಯಿ ಆಗಿಸಲು ಸಿಎಂ ಕ್ರಮವಹಿಸಲಿ: ಬಿವೈವಿ

Shamanur Shivashankarappa: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಬಂದಾಗಲೂ ಪಕ್ಷವನ್ನು ಮರೆತು ಸಮಾಜ ಒಗ್ಗೂಡಿಸುವ ಕೆಲಸ ಅವರ ನೇತೃತ್ವದಲ್ಲಿ ಆಗಿತ್ತು. ಅವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ: ಎಚ್.ಡಿ. ದೇವೇಗೌಡ

HD Deve Gowda: ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕಷ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು ಎಂದು ಕೈ ನಾಯಕರ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಿಡಿಕಾರಿದ್ದಾರೆ.

Ramanagara News: ಕೌಟುಂಬಿಕ ಕಲಹ; ಪತ್ನಿಯನ್ನು ಕತ್ತುಹಿಸುಕಿ ಕೊಂದು ಪತಿಯೂ ಆತ್ಮಹತ್ಯೆ!

ಕೌಟುಂಬಿಕ ಕಲಹ; ಪತ್ನಿಯನ್ನು ಕತ್ತುಹಿಸುಕಿ ಕೊಂದು ಪತಿಯೂ ಆತ್ಮಹತ್ಯೆ!

ರಾಮನಗರ ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ದಂಪತಿ ಗಲಾಟೆ ಮಾಡಿಕೊಂಡು ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ಸೋಮವಾರ ಗಲಾಟೆ ವಿಕೋಪಕ್ಕೆ ತಿರುಗಿದ ವೇಳೆ ಪತ್ನಿಯನ್ನು ಕೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರ

ದಾವಣಗೆರೆಯಲ್ಲಿ ನೆರವೇರಿದ ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರ

Shamanur shivashankarappa: ದಾವಣಗೆರೆ ನಿವಾಸದಿಂದ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಸಾರ್ವಜನಿಕರು ದರ್ಶನ ಪಡೆದ ಬಳಿಕ ಕಲ್ಲೇಶ್ವರ ಮಿಲ್ ಆವರಣದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

Karnataka Weather: ದಾವಣಗೆರೆ ಸೇರಿ ಮೂರು ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆ; ಮುಂದಿನ ಎರಡು ದಿನ ಹೇಗಿರಲಿದೆ ಹವಾಮಾನ?

ದಾವಣಗೆರೆ ಸೇರಿ ಮೂರು ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಮುಖ್ಯವಾಗಿ ಸ್ಪಷ್ಟ ಆಕಾಶ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿಗ್ರಿ ಸೆ. ಮತ್ತು 14 ಡಿಗ್ರಿ ಸೆ. ಇರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Hardware Hackathon: ಸಿಲಿಕಾನ್ ಸಿಟಿಯ ಎಂಜಿನಿಯರ್‌ಗಳಿಗೆ 'ಜರ್ನಿ ಟು ಮಾರ್ಸ್' ಸವಾಲು; ಜಯನಗರದಲ್ಲಿ ₹2 ಲಕ್ಷ ಬಹುಮಾನದ ಹ್ಯಾಕಥಾನ್!

ಡಿ.19ರಿಂದ ಹಾರ್ಡ್‌ವೇರ್ ಹ್ಯಾಕಥಾನ್ 2.0 – ಜರ್ನಿ ಟು ಮಾರ್ಸ್'

Bengaluru News: ಬೆಂಗಳೂರಿನ ಜಯನಗರದಲ್ಲಿರುವ ಪಾರ್ಸೆಕ್‌ (ParSEC) ಸೆಂಟರ್‌ ಹಾಗೂ ಮೇಕರ್ಸ್‌ ಅಡ್ಡದಲ್ಲಿ 2025ರ ಡಿಸೆಂಬರ್ 19 ರಿಂದ 21ರವರೆಗೆ 'ಹಾರ್ಡ್‌ವೇರ್ ಹ್ಯಾಕಥಾನ್ 2.0 – ಜರ್ನಿ ಟು ಮಾರ್ಸ್' ಹಮ್ಮಿಕೊಳ್ಳಲಾಗಿದೆ. ಇದು 72 ಗಂಟೆಗಳ ಕಾಲ ನಡೆಯುವ ಒಂದು ಸ್ಪೆಷಲ್ ಹಾರ್ಡ್‌ವೇರ್ ಹ್ಯಾಕಥಾನ್ ಆಗಿದೆ.

National Herald case: ದೆಹಲಿ ಪೊಲೀಸ್ ನೋಟೀಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿ.ಕೆ. ಶಿವಕುಮಾರ್

ದೆಹಲಿ ಪೊಲೀಸ್ ನೋಟೀಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆಶಿ

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ದೆಹಲಿ ಪೊಲೀಸರ ನೋಟೀಸ್‌ಗೆ ಉತ್ತರ ನೀಡುವ ಬಗ್ಗೆ ಕೇಳಿದಾಗ, ಸೋಮವಾರ ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಿದ್ದೆ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಅಧಿವೇಶನ ಮುಗಿದ ಬಳಿಕ ಉತ್ತರ ನೀಡಲು ಕಾಲಾವಕಾಶ ಕೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

Bomb threat: ಮಂಗಳೂರಿನ ಆರ್‌ಟಿಒ ಕಚೇರಿ, ಗದಗ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ!

ಮಂಗಳೂರಿನ ಆರ್‌ಟಿಒ ಕಚೇರಿ, ಗದಗ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ!

ಮಂಗಳೂರಿನ ಆರ್‌ಟಿಒ ಕಚೇರಿ ಮತ್ತು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇದರಿಂದ ಎರಡೂ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು, ಬಾಂಬ್‌ ಸ್ಕ್ವಾಡ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Karnataka Winter Session: ಚಳಿಗಾಲದ ಅಧಿವೇಶನ ಅವಧಿ ಒಂದು ವಾರ ವಿಸ್ತರಿಸಿ; ಸ್ಪೀಕರ್‌ಗೆ ಆರ್‌.ಅಶೋಕ್‌ ಪತ್ರ

ಚಳಿಗಾಲದ ಅಧಿವೇಶನ ಅವಧಿ ಒಂದು ವಾರ ವಿಸ್ತರಿಸಿ: ಆರ್‌.ಅಶೋಕ್‌ ಆಗ್ರಹ

ಈ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾಗಿರುವ ಬಹಳಷ್ಟು ವಿಷಯಗಳು ಬಾಕಿಯಿದೆ. ಹೀಗಾಗಿ ತಾವು ಪ್ರಸ್ತುತ ಅಧಿವೇಶನದ ಅವಧಿಯನ್ನು ಒಂದು ವಾರ ವಿಸ್ತರಿಸಬೇಕು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ವಿಪಕ್ಷ ನಾಯಕ ಆ.ಅಶೋಕ್‌ ಒತ್ತಾಯಿಸಿದ್ದಾರೆ.

Loading...