Viral Video: ಒಬ್ಬರಲ್ಲ ಇಬ್ಬರಲ್ಲ, 6 ಯುವಕರೊಂದಿಗೆ ಡೇಟಿಂಗ್! ಈ ಕಿʻಲೇಡಿʼ ಸಿಕ್ಕಿಬಿದ್ದಿದ್ದೇ ರೋಚಕ!
ಒಬ್ಬ ಯುವತಿ ಏಕಕಾಲದಲ್ಲಿ 6 ಮಂದಿ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಅವಳ ಸತ್ಯ ಬಯಲಾದಾಗ 6 ಮಂದಿ ಯುವಕರು ಒಟ್ಟಿಗೆ ಆಕೆ ಇದ್ದ ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಅವರನ್ನು ಕಂಡು ಆಕೆ ಶಾಕ್ ಆಗಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಢಾಕಾ: ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲುವ ಮಹಿಳೆಯರು ಒಂದುಕಡೆಯಾದರೆ, ಪ್ರಿಯತಮೆಗಾಗಿ ಹೆಂಡತಿ-ಮಕ್ಕಳ ಕತ್ತು ಹಿಸುಕಿಕೊಲ್ಲುವ ಪುರುಷರು ಇನ್ನೊಂದು ಕಡೆ. ಇದೆಲ್ಲದರ ನಡುವೆ ನಿಷ್ಕಲ್ಮಶ ಪ್ರೀತಿಯ ಸುದ್ದಿ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅದು ಅಲ್ಲದೇ ಈಗ ಡೇಟಿಂಗ್(Dating App) ಅಪ್ಲಿಕೇಶನ್‌ಗಳ ಜಮಾನ! ಒಂದೇ ಸಮಯದಲ್ಲಿ ಅನೇಕ ಜನರೊಂದಿಗೆ ಡೇಟಿಂಗ್ ಮಾಡುವುದು ಕೂಡ ಈಗ ಫ್ಯಾಷನ್ ಆಗಿಬಿಟ್ಟಿದೆ. ಈಗ ಅಂತಹದ್ದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಬಾಂಗ್ಲಾದೇಶದ ಢಾಕಾದಲ್ಲಿ ಯುವತಿಯೊಬ್ಬಳು ಏಕಕಾಲದಲ್ಲಿ 6 ಮಂದಿ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು. ಆದರೆ ಕೊನೆಗೆ ಆಕೆ ಸಿಕ್ಕಿಹಾಕಿಕೊಂಡ ಘಟನೆ ಮಾತ್ರ ರೋಚಕವಾಗಿದೆ.
ನಡೆದಿದ್ದೇನು?
ಯುವತಿಯೊಬ್ಬಳು ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರೀ 6 ಜನ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಳಂತೆ. ಆದರೆ ಈ ವಿಷಯ ಆ ಯುವಕರಿಗೆ ಗೊತ್ತಾಗಿ ಅವಳು ಒಂದು ರೆಸ್ಟೋರೆಂಟ್‌ನಲ್ಲಿ ಇರುವಾಗ 6 ಜನ ಯುವಕರು ಒಬ್ಬೊಬ್ಬರಾಗಿ ಅಲ್ಲಿ ಅವಳ ಎದುರು ಬಂದು ನಿಂತರಂತೆ. ಇದನ್ನು ನೋಡಿ ಆಕೆ ಶಾಕ್ ಆಗಿದ್ದಾಳೆ. ಆ ಯುವಕರ ಗುಂಪು ಆಕೆಯ ಮೇಲೆ ಸಿಟ್ಟಿನಿಂದ ಕೂಗಾಡಿದ ದೃಶ್ಯ ಸೆರೆಯಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಯುವತಿಯ ಕೃತ್ಯಗಳನ್ನು ಟೀಕಿಸಿದರೆ, ಇನ್ನು ಕೆಲವರು ಅವಳ ಪರ ದನಿ ಎತ್ತಿದ್ದಾರೆ. "ಅದು ಅವಳ ಆಯ್ಕೆ" ಎಂದು ಹೇಳಿದ್ದಾರೆ. "ಪುರುಷರು 4 ಹೆಂಡತಿಯರನ್ನು ಮದುವೆಯಾಗಬಹುದು, ಆದರೆ ಮಹಿಳೆಗೆ 6 ಗೆಳೆಯರು ಇರಬಾರದಾ"? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.ಮತ್ತೊಬ್ಬರು,"ಅವಳು ಅವರೊಂದಿಗೆ ಡೇಟಿಂಗ್ ಮಾಡುತ್ತಿರಲಿಲ್ಲ. ಪುರುಷರ ಮಾನಸಿಕ ಆರೋಗ್ಯದ ಅಧ್ಯಯನ ನಡೆಸುತ್ತಿದ್ದಳು" ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತರಗತಿಯಲ್ಲಿ ಫ್ಯಾಷನ್ ಶೋ ನಡೆಸಿದ ಶಿಕ್ಷಕ; ಮಕ್ಕಳ ಕಣ್ಣಲ್ಲಿ ಖುಷಿಯ ಕಾಮನಬಿಲ್ಲು! ವಿಡಿಯೊ ನೀವೂ ನೋಡಿ
ಪ್ರಿಯಕರನಿಗಾಗಿ ಯಾತ್ರೆ ಕೈಗೊಂಡ ಪ್ರೇಯಸಿ
ಪ್ರಿಯತಮೆಯೊಬ್ಬಳು, ಭಾರತೀಯ ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದ ತನ್ನ ಪ್ರಿಯಕರನಿಗಾಗಿ ಹರಿದ್ವಾರಕ್ಕೆ ಯಾತ್ರೆ ಕೈಗೊಂಡು ಅಲ್ಲಿ 81 ಲೀಟರ್ ಗಂಗಾಜಲವನ್ನು ತಂದು ಶಿವರಾತ್ರಿಯ ದಿನದಂದು ಪಾರ್ತಪುರದ ಶಿವಲಿಂಗಕ್ಕೆ ಅದನ್ನು ಅರ್ಪಿಸಲು ಯೋಜಿಸಿದ್ದಾಳೆ. ಪ್ರಿಯಕರನಿಗಾಗಿ ಆಕೆ ಮಾಡಿದ ಈ ಕಾರ್ಯ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈಕೆಯ ಗೆಳೆಯ ಭಾರತೀಯ ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದಾನೆ ಮತ್ತು ಕಳೆದ ಒಂದು ವರ್ಷದಿಂದ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾನೆ. ಆದರೆ ಇನ್ನೂ ಯಶಸ್ವಿಯಾಗಲಿಲ್ಲ. ಅವನ ಕನಸನ್ನು ಈಡೇರಿಸಲು ಆಕೆ ಈ ಯಾತ್ರೆಯನ್ನು ಕೈಗೊಂಡಿದ್ದಳಂತೆ.ಮಾಹಿತಿ ಪ್ರಕಾರ, ತನ್ನ ಗೆಳೆಯನ ಆಕಾಂಕ್ಷೆಗಳು ಈಡೇರಲಿ ಎಂದು ಪ್ರಾರ್ಥಿಸುತ್ತಾ,ಸಂಗ್ರಹಿಸಿದ ಗಂಗಾಜಲವನ್ನು ಶಿವರಾತ್ರಿಯ ದಿನದಂದು ಪಾರ್ತಪುರದ ಶಿವಲಿಂಗಕ್ಕೆ ಅರ್ಪಿಸಲು ಲಕ್ಷ್ಮಿ ಯೋಜಿಸಿದ್ದಾಳೆ. ಅವಳ ಪ್ರೀತಿ ಮತ್ತು ಪ್ರಯತ್ನವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.