ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡಕ್ಕೆ ಯುವರಾಜ್‌ ಸಿಂಗ್‌ ನಾಯಕ, ಮೊದಲ ಎದುರಾಳಿ ಪಾಕಿಸ್ತಾನ!

ಜುಲೈ 18 ರಂದು ಇಂಗ್ಲೆಂಡ್‌ನಲ್ಲಿ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್ಸ್‌ ಲೆಜೆಂಡ್ಸ್‌ ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯ ನಿಮಿತ್ತ ಭಾರತ ಚಾಂಪಿಯನ್ಸ್‌ ತಂಡವನ್ನು ಸ್ಟಾರ್‌ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಮುನ್ನಡೆಸಲಿದ್ದಾರೆ. ರಾಬಿನ್‌ ಉತ್ತಪ್ಪ ಸೇರಿದಂತೆ ನಾಲ್ವರು ಕನ್ನಡಿಗರು ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

WCL 2025: ಭಾರತ ಚಾಂಪಿಯನ್ಸ್‌ಗೆ ಯುವರಾಜ್‌ ಸಿಂಗ್‌ ನಾಯಕ!

ಭಾರತ ಚಾಂಪಿಯನ್ಸ್‌ ತಂಡಕ್ಕೆ ಯುವರಾಜ್‌ ಸಿಂಗ್‌ ನಾಯಕ.

Profile Ramesh Kote Jul 4, 2025 4:32 PM

ನವದೆಹಲಿ: ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್ಸ್‌ ಲೆಜೆಂಡ್ಸ್‌ ( WCL 2025) ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್‌ (India Champions) ತಂಡವನ್ನು ಯುವರಾಜ್‌ ಸಿಂಗ್‌ (Yuvraj Singh) ಮುನ್ನಡೆಸಲಿದ್ದಾರೆ. ಜುಲೈ 18 ರಂದು ಈ ಟೂರ್ನಿ ಆರಂಭವಾಗಲಿದ್ದು, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌, ನಾರ್ಥ್‌ಹ್ಯಾಮ್ಟನ್‌ನ ಕೌಂಟಿ ಗ್ರೌಂಡ್‌, ಲೀಸೆಸ್ಟರ್‌ನ ಗ್ರೇಸ್‌ ರೋಡ್‌ ಹಾಗೂ ಲೀಡ್ಸ್‌ ಹೆಡಿಂಗ್ಲೆನಲ್ಲಿ ಪಂದ್ಯಗಳು ನಡೆಯಲಿವೆ. ಭಾರತ ಚಾಂಪಿಯನ್ಸ್‌ ತಂಡದಲ್ಲಿ ರಾಬಿನ್‌ ಉತ್ತಪ್ಪ, ಸ್ಟುವರ್ಡ್‌ ಬಿನ್ನಿ, ವಿನಯ್‌ ಕುಮಾರ್‌ ಹಾಗೂ ಅಭಿಮನ್ಯು ಮಿಥುನ್‌ ಸೇರಿ ನಾಲ್ವರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಚಾಂಪಿಯನ್ಸ್‌ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಶಿಖರ್ ಧವನ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಯೂಸಫ್ ಪಠಾಣ್, ಗುರುಕೀರತ್ ಮಾನ್ ಮತ್ತು ಯುವರಾಜ್ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ. ಇರ್ಫಾನ್ ಪಠಾಣ್ ಮತ್ತು ಸ್ಟುವರ್ಟ್ ಬಿನ್ನಿ ಆಲ್‌ರೌಂಡರ್‌ಗಳಾಗಿದ್ದರೆ, ಹರ್ಭಜನ್ ಸಿಂಗ್, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ವರುಣ್ ಆರನ್, ಅಭಿಮನ್ಯು ಮಿಥುನ್, ಪಿಯೂಷ್ ಚಾವ್ಲಾ ಮತ್ತು ಪವನ್ ನೇಗಿ ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಟೂರ್ನಿಯ ಮೊದಲ ಆವೃತ್ತಿ ಯಶಸ್ವಿಯಾದ ಬಳಿಕ ಎರಡನೇ ಆವೃತ್ತಿಯು ಕೂಡ ತೀವ್ರ ಕುತೂಹಲವನ್ನು ಕೆರಳಿಸಿದೆ.

IND vs ENG: ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವುದು ಅನುಮಾನ! ಏಕೆ ಗೊತ್ತೆ?

ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ತಾನ

ಜುಲೈ 20 ರಂದು ಭಾರತ ಚಾಂಪಿಯನ್ಸ್‌ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್‌ ವಿರುದ್ಧ ಸೆಣಸುವ ಮೂಲಕ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಜುಲೈ 22 ರಂದು ದಕ್ಷಿಣ ಆಫ್ರಿಕಾ ಎದುರು ಕಾದಾಟ ನಡೆಸಲಿದೆ. ಜುಲೈ 26 ರಂದು ಆಸ್ಟ್ರೇಲಿಯಾ ಚಾಂಪಿಯನ್ಸ್‌ ಎದುರು ಯುವರಾಜ್‌ ಸಿಂಗ್‌ ಪಡೆ ಕಾದಾಟ ನಡೆಸಲಿದೆ. ಜುಲೈ 27 ಮತ್ತು ಜುಲೈ 29 ರಂದು ಕ್ರಮವಾಗಿ ಭಾರತ ತಂಡ ಇಂಗ್ಲೆಂಡ್‌ ಚಾಂಪಿಯನ್ಸ್‌ ಹಾಗೂ ವೆಸ್ಟ್‌ ಇಂಡೀಸ್‌ ಚಾಂಪಿಯನ್ಸ್‌ ವಿರುದ್ಧ ಸೆಣಸಲಿದೆ.

ಆರು ತಂಡಗಳ ಈ ಟೂರ್ನಿಯನ್ನು ರೌಂಡ್‌ ರಾಬಿನ್‌ ಮಾದರಿಯಲ್ಲಿ ಆಡಿಸಲಾಗುತ್ತದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಲಿವೆ. ಹಾಲಿ ಚಾಂಪಿಯನ್‌ ಆಗುವ ಮೂಲಕ ಭಾರತ ತಂಡ ಈ ಟೂರ್ನಿಗೆ ಪ್ರವೇಶ ಮಾಡಲಿದೆ. ಮೊದಲನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್‌ ಆಗಿತ್ತು.

IND vs ENG 2nd Test: ಗಿಲ್‌ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

ಭಾರತ ಚಾಂಪಿಯನ್ಸ್‌ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸಫ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ಗುರುಕೀರತ್ ಮಾನ್, ವಿನಯ್ ಕುಮಾರ್, ಸಿದ್ದಾರ್ಥ್ ಕೌಲ್, ಅಭಿಮನ್ಯು ಮಿಥುನ್‌, ವರುಣ್‌ ಆರೋನ್‌, ಪವನ್‌ ನೇಗಿ