ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain: ನೋಡ ನೋಡ್ತಿದ್ದಂತೆ ನದಿ ತೀರದಲ್ಲಿದ್ದ 5 ಅಂತಸ್ತಿನ ಕಟ್ಟಡ ಧರಾಶಾಹಿ- ಶಾಕಿಂಗ್‌ ವಿಡಿಯೊ ವೈರಲ್‌

ಚೀನಾದಲ್ಲಿ ಸುರಿದ ಭಾರಿ ಮಳೆಯ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥವಾಗಿದೆ.ಐದು ಅಂತಸ್ತಿನ ಕಟ್ಟಡವೊಂದು ಕ್ಷಣಮಾತ್ರದಲ್ಲೇ ಹತ್ತಿರದ ನದಿಯ ಪಾಲಾದ ಘಟನೆಯೊಂದು ನಡೆದಿದೆ. ಇದರ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು,ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ನದಿ ತೀರದಲ್ಲಿದ್ದ 5 ಅಂತಸ್ತಿನ ಕಟ್ಟಡ ಧರಾಶಾಹಿ-ಶಾಕಿಂಗ್‌ ವಿಡಿಯೊ ವೈರಲ್‌

Profile pavithra Jul 4, 2025 3:08 PM

ಬೀಜಿಂಗ್: ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆ(Heavy Rain)ಯಿಂದಾಗಿ ಪ್ರವಾಹ ಉಂಟಾಗಿ ದಕ್ಷಿಣ ಚೀನಾ(China)ದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕ್ಷಣಮಾತ್ರದಲ್ಲೇ ಹತ್ತಿರದ ನದಿಯ ಪಾಲಾದ ದಾರುಣವಾದ ಘಟನೆಯೊಂದು ನಡೆದಿದೆ. ಇದರ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಕುಸಿದ ಬಿದ್ದ ಕಟ್ಟಡವು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಈ ಘಟನೆ ಚೀನಾದ ಲೆಂಗ್‌ಶುಯಿ ನದಿಯ ಬಳಿಯ ಕ್ಸಿನ್‌ಝೌ ಪಟ್ಟಣದಲ್ಲಿ ನಡೆದಿದೆ.ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಎಲ್ಲರ ಗಮನಸೆಳೆದು ವೈರಲ್ ಆಗಿದೆ.ಚೀನಾದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಇತ್ತೀಚೆಗೆ ಹೆಚ್ಚಿನ ಮಳೆ ಸುರಿದ ಕಾರಣ ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಯಿತು. ಬೀಜಿಂಗ್‌ಗೆ ಹೋಗುವ ಕೆಲವು ರೈಲುಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ನಗರದಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು. ಧಾರಾಕಾರ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾದ ಕಾರಣ ಐದು ಜನರು ಸಾವನ್ನಪ್ಪಿ, ಇತರ ಮೂವರು ಕಾಣೆಯಾಗಿದ್ದರು. ಹೀಗಾಗಿ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ತೈಪಿಂಗ್ ಪಟ್ಟಣಕ್ಕೆ 1,000 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರನ್ನು ಕಳುಹಿಸಲಾಗಿದೆಯಂತೆ.

ವಿಡಿಯೊ ಇಲ್ಲಿದೆ ನೋಡಿ...



ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಆಗಿದ್ದು, ಶಿಮ್ಲಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದಿದೆ. ಮನೆ ಇಸ್ಪೀಟೆಲೆಗಳಂತೆ ಕುಸಿದು ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದ ನಂತರ ನಾಪತ್ತೆಯಾಗಿರುವ ಆರು ಜನರ ಶೋಧ ಕಾರ್ಯಾಚರಣೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ಪೊಲೀಸ್ ಮತ್ತು ಗೃಹ ರಕ್ಷಕರ ಜಂಟಿ ತಂಡಗಳು ಪ್ರಾರಂಭಿಸಿವೆ. ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ 129 ರಸ್ತೆಗಳು ಮುಚ್ಚಲ್ಪಟ್ಟಿವೆ. ಸಿರ್ಮೌರ್ ಮತ್ತು ಮಂಡಿ ಜಿಲ್ಲೆಗಳಿಂದ ಕ್ರಮವಾಗಿ 57 ಮತ್ತು 44 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಾಂಗ್ರಾ, ಮಂಡಿ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ... ಈಕೆ ಎಂಥಾ ರಾಕ್ಷಸಿ! ತಾನೇ ಸಾಕಿದ್ದ ಬೆಕ್ಕಿನ ಮೇಲೆ ಇದೆಂಥಾ ಕ್ರೌರ್ಯ?

ಮತ್ತೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದರಲ್ಲಿ, ಪೂರ್ವ ಚೀನಾದ 64 ವರ್ಷದ ವ್ಯಕ್ತಿಯೊಬ್ಬನ ಕರುಳಿನಲ್ಲಿ ಹಲ್ಲುಜ್ಜುವ ಬ್ರಷ್ ಪತ್ತೆಯಾಗಿದೆ. ಹೊಟ್ಟೆಯಲ್ಲಿ ವಿಚಿತ್ರ ನೋವುಗಳನ್ನು ಅನುಭವಿಸಲು ಶುರುಮಾಡಿದ ನಂತರ ಅವನಿಗೆ ಅದರ ಬಗ್ಗೆ ತಿಳಿದುಬಂದಿತು. ಆ ವ್ಯಕ್ತಿಯ ಹೆಸರು ಯಾಂಗ್. ಈತ ಬಾಲ್ಯದಲ್ಲಿ ಹಲ್ಲುಜ್ಜುವ ಬ್ರಷ್ ಅನ್ನು ನುಂಗಿದ್ದಾಗಿ ಮತ್ತು ತನ್ನ ಹೆತ್ತವರಿಗೆ ಹೇಳಲು ತುಂಬಾ ಹೆದರುತ್ತಿದ್ದೆ ಎಂದು ವೈದ್ಯರಿಗೆ ಹೇಳಿದ್ದಾನೆ.