ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೆಂಡ್ತಿ ಬರ್ತ್‌ಡೇಗೆ ಯಾವ ಗಂಡನೂ ಇಂಥಾ ಸರ್ಪ್ರೈಸ್‌ ಕೊಟ್ಟಿರಲ್ಲ ಕಣ್ರೀ! ಪಾರ್ಟಿಯಲ್ಲಿದ್ದವರು ಫುಲ್‌ ಶಾಕ್‌

ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬ ತನ್ನ ಹುಟ್ಟುಹಬ್ಬದ ಸೆಲೆಬ್ರೆಷನ್ ದಿನವೇ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಹೇಳಿ ನೆರೆದವರಿಗೆ ಶಾಕ್‌ ನೀಡಿದ್ದಾನೆ.ಅದೂ ಅಲ್ಲದೇ, ತನ್ನ ಹೆಂಡತಿಯನ್ನು ಪಾರ್ಟಿಯಿಂದ ಹೊರಹಾಕಿದ್ದಾನೆ. ಕೊನೆಗೆ ಹುಟ್ಟುಹಬ್ಬದ ಪಾರ್ಟಿ ವಿಚ್ಛೇದನ ಪಾರ್ಟಿ ಆಗಿ ಬದಲಾಯಿತು. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೆಂಡ್ತಿ ಬರ್ತ್‌ಡೇಗೆ ಈ ಕೊಟ್ಟ ಸರ್ಪ್ರೈಸ್‌ ಗಿಫ್ಟ್‌ ಏನ್‌ ಗೊತ್ತಾ?

Profile pavithra May 15, 2025 3:57 PM

ನ್ಯೂಜೆರ್ಸಿ: ಅನೈತಿಕ ಸಂಬಂಧದ ಕಾರಣದಿಂದ ಸಾಕಷ್ಟು ಕೊಲೆ ಪ್ರಕರಣಗಳು ನಡೆದಿವೆ. ಇದರ ಕುರಿತ ಸುದ್ದಿ ಆಗಾಗ ಸೋಶಿಯಲ್‌ ಮೀಡಿಯಾ ವೈರಲ್‌ ಆಗುತ್ತಿರುತ್ತವೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲೆಗೈದ ಪತ್ನಿ, ಪ್ರೇಮಿಗಾಗಿ ಹೆಂಡತಿ,ಮಕ್ಕಳಿಗೆ ವಿಷವಿಕ್ಕಿದ ಗಂಡ ಹೀಗೆ ನಾನಾ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ನ್ಯೂಜೆರ್ಸಿಯ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬ ತನ್ನ ಹುಟ್ಟುಹಬ್ಬದ ಸೆಲೆಬ್ರೆಷನ್ ದಿನವೇ ತನ್ನ ಹೆಂಡತಿಯ ದಾಂಪತ್ಯ ದ್ರೋಹದ ಬಗ್ಗೆ ವೇದಿಕೆಯ ಮೇಲೆ ಸಾರ್ವಜನಿಕವಾಗಿ ಪ್ರಶ್ನಿಸಿದ್ದಾನೆ. ಇದನ್ನು ಕಂಡು ಪಾರ್ಟಿಗೆ ಬಂದ ಅತಿಥಿಗಳು ಶಾಕ್‌ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ವೇದಿಕೆಯ ಮೇಲೆ ಮಾತನಾಡುತ್ತಾ , ತನ್ನ ಹುಟ್ಟುಹಬ್ಬದ ದಿನದಂದೇ, ತನ್ನ ಹೆಂಡತಿಗೆ ಸಂತೋಷದ ಸುದ್ದಿಯನ್ನು ನೀಡುವುದಾಗಿ ತಿಳಿಸಿದ್ದಾನೆ. ಬಹುಶಃ ಆತ ಉಂಗುರವನ್ನು ಹೆಂಡತಿಗಾಗಿ ಗಿಫ್ಟ್ ನೀಡಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ! ಅಗ್ನಿಶಾಮಕ ದಳದ ಸಿಬ್ಬಂದಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿ ಅವಳ ಕೈಯಲ್ಲಿದ್ದ ಉಂಗುರವನ್ನು ತೆಗೆಯುವಂತೆ ಹೇಳಿದ್ದಾನೆ. ಅವಳ ಹಣೆಗೆ ಪ್ರೀತಿಯ ಮುತ್ತನಿಟ್ಟ ಆತ ಆಕೆ ಮಾಡಿದ ದಾಂಪತ್ಯ ದ್ರೋಹದ ಕುರಿತು ಹೇಳುತ್ತಾ ತನಗೆ ಆಕೆಯ ಪ್ಲ್ಯಾನ್‍ ಏನು ಎಂಬುದು ಎಲ್ಲಾ ತಿಳಿದಿದೆ ಎಂದಿದ್ದಾನೆ. ಅವನ ಆರೋಪಗಳನ್ನು ಹೆಂಡತಿ ತಳ್ಳಿಹಾಕಿದ್ದಾಳೆ. ಆದರೆ ಆತ ತನ್ನ ಬಳಿ ಪುರಾವೆಗಳಿರುವುದಾಗಿ ತಿಳಿಸಿದ್ದಾನಂತೆ.

ಅಲ್ಲಿ ನೆರೆದಿದ್ದ ಇಡೀ ಜನಸಮೂಹವು ನಡೆದ ಘಟನೆಯನ್ನು ಕಂಡು ಶಾಕ್‌ ಆಗಿದೆ. ಇದರ ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ತನ್ನ ಹೆಂಡತಿಯನ್ನು ಪಾರ್ಟಿಯಿಂದ ಹೊರಹಾಕಿದ್ದಾನೆ. ಹುಟ್ಟುಹಬ್ಬದ ಪಾರ್ಟಿ ವಿಚ್ಛೇದನ ಪಾರ್ಟಿ ಆಗಿ ಬದಲಾಯಿತು.

ಹೆಂಡತಿ ಮಕ್ಕಳಿಗೆ ಗುಂಡಿಟ್ಟ ಗಂಡ

ಈ ಹಿಂದೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಿಜೆಪಿ ನಾಯಕ ಯೋಗೇಶ್‌ ರೋಹಿಲ್ಲಾ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಜೊತೆಗೆ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದನು. ಸಗತೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಪಿ ಯೋಗೇಶ್ ರೋಹಿಲ್ಲಾ ತನ್ನ ಕುಟುಂಬಕ್ಕೆ ಗುಂಡು ಹಾರಿಸಿರುವುದಾಗಿ ಖುದ್ದಾಗಿ ಪೊಲೀಸರಿಗೆ ತಿಳಿಸಿ ಶರಣಾಗಿದ್ದನು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೋರ್ವ ಪುತ್ರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಗಂಗೋ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಶ್ವಾನದ ವಿಚಾರಕ್ಕೆ ಕಿತ್ತಾಡಿಕೊಂಡ ನೆರೆಹೊರೆಯವರು; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ!

ಯೋಗೇಶ್‌ ರೋಹಿಲ್ಲಾ, ತನ್ನ ಪತ್ನಿ ನೇಹಾ ವಿವಾಹೇತರ ಸಂಬಂಧ ಹೊಂದಿದ್ದಳು. ಹಲವಾರು ಬಾರಿ ಆಕೆಗೆ ತಿಳಿ ಹೇಳಿದ್ದೆ, ಆದರೂ ಆಕೆ ತನ್ನನ್ನು ತಾನು ಸರಿ ಪಡಿಸಿಕೊಳ್ಳಲಿಲ್ಲ. ಅವಳ ಈ ನಡೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಆಕೆಯ ಅಕ್ರಮ ಸಂಬಂಧಗಳು ಸಮಾಜದಲ್ಲಿ ನನಗೆ ಮುಜುಗರ ತಂದಿದೆ. ಖ್ಯಾತಿಗೆ ಧಕ್ಕೆಯಾಗಿದೆ, ಇದರಿಂದ ಕೋಪಗೊಂಡು ತಾನು ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ್ದೇನೆ ಎಂದು ಆರೋಪಿ ಪೊಲೀಸರ ಬಳಿ ಹೇಳಿದ್ದನು.