ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: “ಮೋದಿ ಅಮಾಯಕ ಉಗ್ರರನ್ನು ಕೊಂದು ಹಾಕುತ್ತಿದ್ದಾರೆ” ಎಂದ ರಿಪೂರ್ಟರ್‌; ಏನಿದು ವೈರಲ್‌ ವಿಡಿಯೊ

“ಮೋದಿ ಅಮಾಯಕ ಉಗ್ರರನ್ನು ಕೊಂದು ಹಾಕುತ್ತಿದ್ದಾರೆ.” ಎಂದು ವರದಿಗಾರ್ತಿ ಹೇಳಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video)ಆಗಿದೆ.ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.ನೆಟ್ಟಿಗರು ಈ ವಿಡಿಯೊ ನೋಡಿ ನೆಟ್ಟಿಗರು ʼಉಗ್ರವಾದಿಗಳ ಜೀವಕ್ಕೂ ಮಹತ್ವವಿದೆʼ ಎಂದು ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ.

“ಮೋದಿ ಅಮಾಯಕ ಉಗ್ರರನ್ನು ಕೊಂದು ಹಾಕುತ್ತಿದ್ದಾರೆ” ಎಂದ ರಿಪೂರ್ಟರ್‌!

Profile pavithra May 10, 2025 3:03 PM

ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚಿನ ಭಯೋತ್ಪಾದನಾ ದಾಳಿಯಿಂದ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಹೆಚ್ಚಾಗಿದೆ. ಇದರ ಮಧ್ಯದಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೊವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ವಿಡಿಯೊದಲ್ಲಿ ಅಮೇರಿಕಾದ ವೈಟ್‌ಹೌಸ್ ಹೊರಗಡೆ ನಡೆಯುತ್ತಿರುವ ಪ್ರತಿಭಟನೆ ಸೆರೆಯಾಗಿದೆ. ಈ ವಿಡಿಯೊ ಪೋಸ್ಟ್‌ನಲ್ಲಿ “ವೈಟ್ ಹೌಸ್‌ನಲ್ಲಿ ಕಾಶ್ಮೀರದ ಪ್ರತಿಭಟನೆ” ಎಂದು ಬರೆಯಲಾಗಿದೆ.ಈ ವೈರಲ್‌ ವಿಡಿಯೊದಲ್ಲಿ ವರದಿಗಾರಳೊಬ್ಬಳು ಪ್ರತಿಭಟನಕಾರರ ಬಳಿ ಹೋಗಿ ಮಾತನಾಡಿದ್ದಾಳೆ. ನಂತರ ಆಕೆ “ಮೋದಿ ನಿರ್ದೋಷಿ ಉಗ್ರವಾದಿಗಳನ್ನು ಕೊಂದು ಹಾಕುತ್ತಿದ್ದಾರೆ.” ಎಂದು ಹೇಳಿದ್ದಾಳೆ. ಆಕೆಯ ಈ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video)ಆಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೊ ಈಗಾಗಲೇ ನಾಲ್ಕು ಲಕ್ಷದಷ್ಟು ಹೆಚ್ಚು ವ್ಯೂವ್ಸ್ ಗಳಿಸಿದೆ. ಕೆಲವು ನೆಟ್ಟಿಗರು ಈ ವಿಡಿಯೊ "ಬಹಳ ಹಳೆಯದು" ಎಂದು ಹೇಳಿದ್ದಾರೆ. ವಿಡಿಯೊ ನೋಡಿ ಕೆಲವರು "ನಿರ್ದೋಷಿ ಉಗ್ರವಾದಿಗಳು" ಎಂದು ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದರ ಕುರಿತು ಕಾಮೆಂಟ್‌ ಮಾಡಿದ್ದಾರೆ. ಒಬ್ಬರು ಹಾಸ್ಯಾತ್ಮಕವಾಗಿ, “ಉಗ್ರವಾದಿಗಳ ಜೀವಕ್ಕೂ ಮಹತ್ವವಿದೆ!!!" ಎಂದಿದ್ದಾರೆ. ಮತ್ತೊಬ್ಬರು, "ನಿರ್ದೋಷಿ” ಮತ್ತು "ಉಗ್ರವಾದಿಗಳು" ಎಂಬ ಒಂದೇ ವಾಕ್ಯದಲ್ಲಿ ಹೇಳಿದ್ದು ಹಾಸ್ಯಕಾರಿಯಾಗಿದೆ” ಎಂದು ಹೇಳಿದ್ದಾರೆ. “ಉಗ್ರವಾದಿಗಳು ಕೂಡ ನಿರ್ದೋಷಿಗಳಾಗಿರುತ್ತಾರಾ?? ಇದು ನಾನು ಮೊದಲ ಬಾರಿಗೆ ಕೇಳಿದ್ದೇನೆ." ಎಂದಿದ್ದಾರೆ.

ವಿಡಿಯೊ ನೋಡಿ...



ಈ ಸುದ್ದಿಯನ್ನೂ ಓದಿ:Viral Video: ಆಟೋ ಚಾಲಕನ ಮಾನವೀಯತೆಗೆ ಮನಸೋತ ವಿದೇಶಿ ಮಹಿಳೆ; ವಿಡಿಯೊ ವೈರಲ್

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಸಾವನಪ್ಪಿದ್ದ ನಂತರ ಇದಕ್ಕೆ ಪ್ರತಿಯಾಗಿ, ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಅಡಿಯಲ್ಲಿ ಉಗ್ರರ ಸಂಹಾರ ಮಾಡುವುದಾಗಿ ಘೋಷಣೆ ಮಾಡಿತು. ಈ ಕಾರ್ಯಾಚರಣೆಯ ಭಾಗವಾಗಿ, ಕೆಲವು ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಭಾರತ ಬುಧವಾರ(ಮೇ7) ಬೆಳಿಗ್ಗೆ ಕ್ಷಿಪಣಿಗಳ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಕಾಶ್ಮೀರದ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಈ ಶಿಬಿರಗಳು ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳಲ್ಲಿ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹ್ಮದ್ (ಜೆಇಎಮ್) ಮತ್ತು ಹಿಜ್‍ಬುಲ್ ಮಜಾಹೀದೀನಿಗೆ ಸಂಬಂಧಿಸಿದ್ದು ಎಂಬುದಾಗಿ ತಿಳಿದು ಬಂದಿತ್ತು.