Viral Video: ವರನ ಸ್ನೇಹಿತರ ಅವಾಂತರಕ್ಕೆ ಮದ್ವೆನೇ ಕ್ಯಾನ್ಸಲ್! ಅಷ್ಟಕ್ಕೂ ಆಗಿದ್ದೇನು?
ಉತ್ತರಾಖಂಡದ ಹರಿದ್ವಾರದಲ್ಲಿ ವರನ ಸ್ನೇಹಿತರು ವಧುವಿನ ಮಹಿಳಾ ಸಂಬಂಧಿಕರ ಬಗ್ಗೆ ಅಸಭ್ಯವಾದ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಕೊನೆಗೆ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಜಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದೆ.


ಡೆಹ್ರಾಡೂನ್: ಮದುವೆ ಕ್ಷುಲಕ ಕಾರಣಕ್ಕೆ ರದ್ದಾಗಿದ್ದ ಘಟನೆ ಈ ಹಿಂದೆ ಹಲವು ವರದಿಯಾಗಿತ್ತು. ಈ ಸುದ್ದಿಗಳು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ಮತ್ತೊಂದು ಮದುವೆ ರದ್ದಾಗಿದೆ. ರಿಬ್ಬನ್ ಕತ್ತರಿಸುವ ಸಂದರ್ಭದಲ್ಲಿ ನಡೆದ ಜಗಳದ ನಂತರ ವಧುವೊಬ್ಬಳು ತನ್ನ ಮದುವೆಯನ್ನು ರದ್ದುಗೊಳಿಸಿ ಮದುವೆ ಮೆರವಣಿಗೆಯನ್ನು ಹಿಂದಿರುಗಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಜಗಳವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಸಮಾರಂಭದಲ್ಲಿದ್ದ ಜನರು ಕಲ್ಲು ತೂರಾಟ ನಡೆಸುವುದು ಸೆರೆಯಾಗಿದೆ. ಮಂಗಳವಾರ (ಏಪ್ರಿಲ್ 22) ರಾತ್ರಿ 10:00 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಧು ಮತ್ತು ವರನ ಕಡೆಯವರ ನಡುವೆ ಜಗಳ ನಡೆದ ನಂತರ ಮದುವೆ ಸಮಾರಂಭದಲ್ಲಿ ಗೊಂದಲ ಉಂಟಾಗಿದೆ ಎನ್ನಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
हरिद्वार में शादी समारोह के दौरान दुल्हा और दुल्हन वर और वधु पक्ष के बीच रिबन काटने की रस्म के दौरान कहासुनी शुरू हो गई। रिबन काटने की रस्म के दौरान लड़के पक्ष की ओर से लड़कियों पर की गई छींटाकशी से विवाद शुरू हुआ। लड़की पक्ष ने इसका विरोध किया तो कहासुनी शुरू हो गई जो जल्दी ही… pic.twitter.com/AarZkp5uk6
— bhUpi Panwar (@askbhupi) April 23, 2025
ವರದಿ ಪ್ರಕಾರ, ಉತ್ತರ ಪ್ರದೇಶದ ಮೊರಾದಾಬಾದ್‍ನಿಂದ ಮದುವೆ ಮೆರವಣಿಗೆಯೊಂದಿಗೆ ವರನು ಸ್ಥಳಕ್ಕೆ ಪ್ರವೇಶಿಸಿದಾಗ, ಅವನ ಕೆಲವು ಸ್ನೇಹಿತರು ರಿಬ್ಬನ್ ಕತ್ತರಿಸುವ ಸಮಾರಂಭದಲ್ಲಿ ವಧುವಿನ ಮಹಿಳಾ ಸಂಬಂಧಿಕರ ಬಗ್ಗೆ ಅಸಭ್ಯವಾದ ಕಾಮೆಂಟ್‍ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಧುವಿನ ಕಡೆಯವರು ಈ ಕಾಮೆಂಟ್ ಬಗ್ಗೆ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಎರಡೂ ಕಡೆಯವರ ನಡುವೆ ವಾಗ್ವಾದ ಭುಗಿಲೆದ್ದಿತು. ಶೀಘ್ರದಲ್ಲೇ ವಾದವು ಹೊಡೆದಾಟಕ್ಕೆ ತಿರುಗಿತಂತೆ. ಹೀಗಾಗಿ ಜನರು ಕುರ್ಚಿಗಳನ್ನು ಒಬ್ಬರ ಮೇಲೆ ಒಬ್ಬರು ಎಸೆಯುತ್ತಾ ಎರಡೂ ಕಡೆಯ ಜನರು ಪರಸ್ಪರ ಹೊಡೆದಾಡಲು ಶುರುಮಾಡಿದ್ದಾರಂತೆ. ಹರಿದ್ವಾರದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಈ ಘಟನೆ ನಡೆದಿದ್ದು, ನಂತರ ಈ ಸ್ಥಳವು ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಡೀ ಘಟನೆಯು ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ, ಭಾಗಿಯಾಗಿದ್ದ ಹೆಚ್ಚಿನ ಜನರು ಅಲ್ಲಿಂದ ಪಲಾಯನ ಮಾಡಿದ್ದರಂತೆ. ಇಲ್ಲಿಯವರೆಗೆ, ಎರಡೂ ಕಡೆಯಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು ದಾಖಲಾದರೆ ತನಿಖೆಯನ್ನು ಪ್ರಾರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮದುವೆಯನ್ನು ರದ್ದುಗೊಳಿಸಲಾಯಿತು ಮತ್ತು ವರನ ಕಡೆಯವರು ಬಂದದಾರಿಗೆ ಸುಂಕವಿಲ್ಲದಂತೆ ಮರಳಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್ ವೈರಲ್
ಈ ಹಿಂದೆ ಉತ್ತರ ಪ್ರದೇಶದ ಮಿರ್ಜಾಪುರದ ಭಿಖಾರಿಪುರ ಗ್ರಾಮದಲ್ಲಿ ಮದುವೆಗೆ ಅಡ್ಡಿಪಡಿಸಿದ್ದಕ್ಕೆ ವಧು ಮತ್ತು ವರನ ಕಡೆಯವರು ಮದುವೆಯ ಮಂಟಪದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿತ್ತು. ಇದರಿಂದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.