Viral Video: ಗೋಡೆ ಮೈಮೇಲೆ ಬಿದ್ದು ಗಾಯಗೊಂಡ ಅಣ್ಣ- ಅಂಬ್ಯುಲೆನ್ಸ್ ಸಿಗದೇ ಒದ್ದಾಡಿದ ತಮ್ಮ! ಹೃದಯವಿದ್ರಾವಕ ವಿಡಿಯೊ ವೈರಲ್
ಗೋಡೆಬಿದ್ದು ಗಾಯಗೊಂಡ 13 ವರ್ಷದ ಬಾಲಕನನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ಸಿಗದ ಕಾರಣ ಬಾಲಕನೊಬ್ಬ ಸ್ಕ್ರ್ಯಾಪ್ ಪುಲ್ಲಿಂಗ್ ಗಾಡಿಯಲ್ಲಿ ಹಾಕಿಕೊಂಡು ಎಳೆದು ತಂದು ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ ಗಾಯಗೊಂಡ ಜನರನ್ನು ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕರೆತರುತ್ತಾರೆ. ಆದರೆ ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ, 11 ವರ್ಷದ ಬಾಲಕನೊಬ್ಬ ಗಾಯಗೊಂಡ ತನ್ನ ಹಿರಿಯ ಸಹೋದರನನ್ನು ಸ್ಕ್ರ್ಯಾಪ್ ಪುಲ್ಲಿಂಗ್ ಗಾಡಿಯಲ್ಲಿ ಹಾಕಿಕೊಂಡು ಎಳೆದು ತಂದು ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವರದಿ ಪ್ರಕಾರ, ಉಂಚಹಾರ್ ಪ್ರದೇಶದ ಹಸನ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕನ ಮೇಲೆ ಗೋಡೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಯಾವುದೇ ಪ್ರಯೋಜನವಾಗಲಿಲ್ಲವಂತೆ. ಇದರಿಂದ ಬೇಸತ್ತ 11 ವರ್ಷದ ಕಿರಿಯ ಸಹೋದರ ಗಾಯಗೊಂಡ ತನ್ನ ಅಣ್ಣನನ್ನು ಸ್ಕ್ರ್ಯಾಪ್ ಸಂಗ್ರಹಿಸುವ ಗಾಡಿಯಲ್ಲಿ ಇರಿಸಿಕೊಂಡು ಅವನನ್ನು ಆಸ್ಪತ್ರೆಗೆ ಎಳೆದುಕೊಂಡು ಬಂದಿದ್ದಾನೆ.
ಘಟನೆಯ ವಿಡಿಯೊ ಇಲ್ಲಿದೆ ನೋಡಿ...
🚨 ब्रेकिंग: रायबरेली में स्वास्थ्य व्यवस्था पर सवाल 🚨
— भारत समाचार | Bharat Samachar (@bstvlive) April 12, 2025
❌ कॉल करने के बावजूद एम्बुलेंस नहीं पहुंची
🛑 नाबालिग ने रिक्शे से घायल युवक को अस्पताल पहुंचाया
💔 युवक दीवार गिरने से घायल हुआ था, वीडियो हुआ वायरल
📍 मामला ऊंचाहार कोतवाली क्षेत्र के सीएचसी का#RaeBareli #HealthCrisis… pic.twitter.com/eGL8Al2oNd
ಹೃದಯ ವಿದ್ರಾವಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಕ್ರೋಶದ ನಂತರ, ಅಧಿಕಾರಿಗಳು ಈ ಪರಿಸ್ಥಿತಿಯತ್ತ ಗಮನಹರಿಸಿದ್ದಾರೆ ಮತ್ತು ಗಾಯಗೊಂಡ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಆತ ಚೇತರಿಸಿಕೊಂಡಿದ್ದಾನೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಖಚಿತಪಡಿಸಿದೆ.
ತಳ್ಳು ಗಾಡಿಯಲ್ಲಿ ಪತಿಯನ್ನು ಆಸ್ಪತ್ರೆಗೆ ಕರೆತಂದ ಪತ್ನಿ!
ಉತ್ತರಪ್ರದೇಶದಲ್ಲಿ ಆರೋಗ್ಯ ಮತ್ತು ತುರ್ತು ಸೇವೆಗಳ ಸೌಲಭ್ಯ ಎಷ್ಟು ಕಳಪೆಮಟ್ಟದಲ್ಲಿ ಇದೆ ಎಂದರೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಹಿಳೆಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿಯನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ಸಿಗದ ಕಾರಣ ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊ ನೋಡಿದ ನೆಟ್ಟಿಗರು ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹಸುಗಳ ಮೇಲೆ ಪೈಶಾಚಿಕ ಕೃತ್ಯ- ಇಬ್ಬರು ಅರೆಸ್ಟ್! ಶಾಕಿಂಗ್ ವಿಡಿಯೊ ವೈರಲ್
ಹಾಗೇ ಮತ್ತೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಪದೇ ಪದೇ ಕರೆ ಮಾಡಿದರೂ ಆಂಬ್ಯುಲೆನ್ಸ್ ಬರದ ಕಾರಣ ಕುಟುಂಬ ಸದಸ್ಯರು ರೋಗಿಯನ್ನು ತರಕಾರಿ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಹೃದಯ ವಿದ್ರಾವಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.