ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Production No 1 Movie: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮೊದಲ ಹಂತದ ಚಿತ್ರೀಕರಣ‌ ಪೂರ್ಣ

Golden Star Ganesh Movie: ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ ಸಮಾರಂಭ ಕಳೆದ ತಿಂಗಳು ಅದ್ದೂರಿಯಾಗಿ ನೆರವೇರಿತ್ತು. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದೆ. ಈ ಕುರಿತ ವಿವರ ಇಲ್ಲಿದೆ.

ʼಪ್ರೊಡಕ್ಷನ್ ನಂ 1ʼ ಚಿತ್ರದ ಮೊದಲ ಹಂತದ ಚಿತ್ರೀಕರಣ‌ ಪೂರ್ಣ

Profile Siddalinga Swamy May 5, 2025 2:58 PM

ಬೆಂಗಳೂರು: ಎಸ್‌ಎನ್‌ಟಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಸ್.ಸಿ. ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಕಳೆದ ತಿಂಗಳು ಅದ್ದೂರಿಯಾಗಿ ನೆರವೇರಿತ್ತು. ಬಹು ನಿರೀಕ್ಷಿತ ಹಾಗೂ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದೆ. ʼಚಿತ್ರತಂಡದ ಸಹಕಾರದಿಂದ ನಮ್ಮ ʼಪ್ರೊಡಕ್ಷನ್ ನಂ 1ʼ ಚಿತ್ರದ (Production No 1 Movie) ಮೊದಲ ಹಂತದ ಚಿತ್ರೀಕರಣ ನಿಗದಿತ ಯೋಜನೆಯಂತೆ ಪೂರ್ಣವಾಗಿದೆ. ನಾಯಕ ಗಣೇಶ್, ನಾಯಕಿ ಅಮೃತ ಅಯ್ಯರ್, ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆʼ ಎಂದು ನಿರ್ಮಾಪಕ ರವಿ ಭದ್ರಾವತಿ ತಿಳಿಸಿದ್ದಾರೆ.

ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನವಿರುವ ಈ ಚಿತ್ರಕ್ಕೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಂಭಾಷಣೆ ಹಾಗೂ ಮಹೇಶ್ ದೇವು ಡಿಎನ್ ಪುರ ಚಿತ್ರಕಥೆ ಸಹಾಯವಿದೆ. ರಾಕೇಶ್ ಹಾಗೂ ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನ ಈ ನೂತನ ಚಿತ್ರಕ್ಕಿದೆ.

ಈ ಸುದ್ದಿಯನ್ನೂ ಓದಿ | Oxidised Jewel Fashion: ಡಿಫರೆಂಟ್‌ ಲುಕ್‌ ನೀಡುವ ಆಕ್ಸಿಡೈಸ್ಡ್‌ ಜ್ಯುವೆಲರಿಗಳಿವು

ಪ್ರೊಡಕ್ಷನ್ ನಂ 1ʼ ಚಿತ್ರದ ನಾಯಕ ಗಣೇಶ್, ನಾಯಕಿ ಅಮೃತ ಅಯ್ಯರ್, ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.