Anti national slogan: ಉಡುಪಿಯಲ್ಲಿ ದೇಶವಿರೋಧಿ ಗೋಡೆಬರಹ; ವಿದ್ಯಾರ್ಥಿನಿಗಾಗಿ ಹುಡುಕಾಟ
ಉಡುಪಿ ಜಿಲ್ಲೆಯ (Udupi news) ಕಾರ್ಕಳ ತಾಲೂಕಿನ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ (Engineering College) ವಸತಿ ನಿಲಯದ ಗೋಡೆಯ ಮೇಲೆ ದೇಶ ವಿರೋಧಿ (Anti-national slogan) ಬರಹ ಬರೆದ ವಿದ್ಯಾರ್ಥಿನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.

ದೇಶವಿರೋಧಿ ಬರಹ

ಉಡುಪಿ: ಉಡುಪಿ ಜಿಲ್ಲೆಯ (Udupi news) ಕಾರ್ಕಳ ತಾಲೂಕಿನ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ (Engineering College) ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿಯೊಬ್ಬಳು ʼಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ ಬೋಲ್ʼ ಎಂದು ಗೋಡೆಯ ಮೇಲೆ ಬರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. "Hindustan nahi muslim sthan bola Muslim zindabad Hindu fuck off" ಎಂದು ವಿದ್ಯಾರ್ಥಿ ಬರೆದಿರುವ ಬರಹ ಈಗ ಎಲ್ಲರ ಕೋಪಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಶ ವಿರೋಧಿ (Anti-national slogan) ಬರಹ ಬರೆದ ವಿದ್ಯಾರ್ಥಿನಿಗಾಗಿ ತೀವ್ರ ಶೋಧ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಳವಳ್ಳಿಯ ಜಾವೀದ್ ಸೆರೆ
ಮಂಡ್ಯ : ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (Social media) ಅವಹೇಳನಕಾರಿ ಪೋಸ್ಟ್ (Derogatory post) ಶೇರ್ ಮಾಡಿದ ಆರೋಪದಲ್ಲಿ ಮಳವಳ್ಳಿ (Mandya news) ತಾಲ್ಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಆರೋಪಿ ಜಾವೀದ್ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ (Imran Khan) ಮೋದಿ ಶೂ ಧರಿಸುವಂತೆ ತೋರಿಸುವ ಎಡಿಟ್ ಮಾಡಿದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ವಿಕೃತಿ ಮೆರೆದಿದ್ದ ಎನ್ನಲಾಗಿದೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಬಿಜೆಪಿ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್) ಕಲಂ 152, 192, ಮತ್ತು 340 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ವ್ಯಕ್ತಿ ವಿರುದ್ಧ ಕೇಸ್