Beauty Secreats: ಮೂಡ್ ಬದಲಿಸುವ ಲಿಪ್‌ಸ್ಟಿಕ್ಸ್ ಕಲರ್‌ಗಳಿವು
Beauty Tips: ಇಂಟರ್‌ನ್ಯಾಷನಲ್ ಬ್ಯೂಟಿ ಇಸ್ಟಿಟ್ಯೂಟ್ ಸಮೀಕ್ಷೆಯೊಂದರ ಪ್ರಕಾರ, ತುಟಿಗೆ ಹಚ್ಚುವ ಲಿಪ್‌ಸ್ಟಿಕ್‌ನ ರಂಗು ಹುಡುಗಿಯರ ಇಮೇಜ್ ಹಾಗೂ ಮೂಡನ್ನು ಬದಲಿಸುತ್ತದಂತೆ! ಯಾವ್ಯಾವ ಬಣ್ಣಗಳು, ಮೂಡನ್ನು ಹೇಗೆಲ್ಲ ಬದಲಿಸುತ್ತವೆ? ಮೇಕೋವರ್ ಹೇಗೆ? ಎಂಬುದರ ಬಗ್ಗೆ ಬ್ಯೂಟಿ ಎಕ್ಸ್‌ಪರ್ಟ್ಸ್ ಇಲ್ಲಿ ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ತುಟಿಯ ಬಣ್ಣಗಳು ನಿಮ್ಮ ಮೂಡನ್ನು ಬದಲಿಸಬಹುದು. ಹೌದು, ಬ್ಯೂಟಿ ಇಸ್ಟಿಟ್ಯೂಟ್ ಸಮೀಕ್ಷೆಯೊಂದರ ಪ್ರಕಾರ, ಮಾನಿನಿಯರ ತುಟಿಯ ರಂಗು ನಿಮ್ಮ ಇಮೇಜ್ ಹಾಗೂ ಮೂಡನ್ನು ಬದಲಿಸಬಹುದಂತೆ. (Beauty Secreats) ಕಲರ್‌ಫುಲ್ ಲಿಪ್‌ಸ್ಟಿಕ್‌ಗಳಿಂದ ನಿಮ್ಮ ಸಪ್ಪೆ ಮೂಡ್ ಕೂಡ ಕಲರ್ ಆಗಬಹುದಂತೆ. ಅದು ಹೇಗೆ? ಅಂತಿರಾ? ನೀವು ಬಳಸುವ ಲಿಪ್‌ಸ್ಟಿಕ್‌ನಿಂದ. ಲಿಪ್‌ಸ್ಟಿಕ್‌ಗೂ ಮೂಡಿಗೂ-ಇಮೇಜ್‌ಗೂ ಏನ್ ಸಂಬಂಧ ಅನ್ನೋದು ನಿಮ್ಮ ಪ್ರಶ್ನೆ ತಾನೇ! ಹಾಗಾದ್ರೆ ಇಲ್ಲಿ ಕೇಳಿ. ಇಂಟರ್‌ನ್ಯಾಷನಲ್ ಕಾಸ್ಮೆಟಿಕ್ ಹಾಗೂ ಬ್ಯೂಟಿ ಸಮೀಕ್ಷೆಯೊಂದರ ಪ್ರಕಾರ, ಲಿಪ್‌ಸ್ಟಿಕ್ ಲೇಪನ ಮಹಿಳೆಯರ ಹಾಗೂ ಅವರ ಜತೆಗಿರುವವರ ಮೂಡ್ ಹಾಗೂ ಇಮೇಜನ್ನು ಬದಲಿಸುತ್ತದೆ ಎಂದಿದೆ.
ಅಂದಹಾಗೆ, ಇಂದು ಮಾರುಕಟ್ಟೆಯಲ್ಲಿ ನೂರಾರು ಶೇಡ್ಸ್‌ನ ಲಿಪ್‌ಸ್ಟಿಕ್ ಲಭ್ಯವಿದೆ. ಹಾಗೆಂದು ಎಲ್ಲವೂ ನಿಮ್ಮ ಮೂಡನ್ನು ಬದಲಿಸುತ್ತದೆ ಎಂದಲ್ಲ. ಅದು ಬಣ್ಣಗಳ ಮೇಲೂ ನಿರ್ಧರಿತವಾಗುತ್ತದೆ. ಹಚ್ಚಿಕೊಳ್ಳುವ ಮಾನಿನಿಯರ ಮೂಡ್-ಇಮೇಜ್ ಎರಡನ್ನೂ ಬದಲಿಸುತ್ತೆ. ಜತೆಗೆ ಇರುವವರ ಮೂಡನ್ನು ಕೂಡ ಬದಲಿಸುತ್ತದೆ. ಸಾಮಾನ್ಯವಾಗಿ ಬಳಸುವ ಯೂನಿವರ್ಸಲ್ ಕಲರ್‌ಗಳೆಂದೇ ಕರೆಯಲ್ಪಡುವ ರೆಡ್, ಪಿಂಕ್, ಬ್ರೌನ್ ಹಾಗೂ ಮೆಜಂತಾ ಬಣ್ಣಗಳಿಂದ ಮಾತ್ರ ಈ ಜಾದೂ ಸಾಧ್ಯವಂತೆ.

ರೆಡ್: ಕಲರ್ ಆಫ್ ಫ್ಯಾಷನ್
ಬ್ರೈಟ್ ರೆಡ್ ಬಣ್ಣ ಎಂದರೆ, ಆಕರ್ಷಕ ಬಣ್ಣ. ಅಂದ ಹಾಗೆ, ಇದು ಎಲ್ಲರಿಗೂ ಸೂಟ್ ಆಗುವ ಬಣ್ಣವಲ್ಲ. ಈ ಕಲರ್ ಹಚ್ಚಿಕೊಳ್ಳುವವರಿಗೆ ಶೇಡ್ಸ್ ಬಗ್ಗೆ ಪರಿಜ್ಞಾನ ಇದ್ದರೆ ಒಳ್ಳೆದು. ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದು ಒಂದು ಕಲೆ. ರೆಡ್ ಲಿಪ್‌ಸ್ಟಿಕ್ ಲೈಟಾಗಿ, ಡಾರ್ಕಾಗಿ ನಿಮ್ಮ ಚರ್ಮಕ್ಕೆ ಸೂಟ್ ಆಗುವಂತೆ ಲೇಪಿಸಿಕೊಂಡು ರೂಢಿಸಿಕೊಂಡರೆ ಒಕೆ. ಈ ಬಣ್ಣ ಹೆಚ್ಚು-ಕಡಿಮೆಯಾದರೆ ಒಳ್ಳೆಯ ಹಾಗೂ ಕೆಟ್ಟ ಇಮೇಜ್ ಬದಲಿಸುವುದರಲ್ಲಿ ಎರಡು ಮಾತಿಲ್ಲ!
ಗ್ಲಾಮರಸ್ ಬ್ಲಾಕ್-ಬ್ಲ್ಯೂ ಮತ್ತು ಬೂದು ಬಣ್ಣದ ಪಾರ್ಟಿವೇರ್ ಡ್ರೆಸ್‌ಗಳಿಗೆ ಸಕತ್ ಮ್ಯಾಚ್ ಆಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ನೈಟ್ ಪಾರ್ಟಿಗಳಿಗೆ ಗುಡ್ ಕಲರ್.

ಪಿಂಕ್: ಖುಷಿಯ ಸಂಕೇತ
ಬಬ್ಲಿ ಹುಡುಗಿಯರ ಎವರ್‌ಗ್ರೀನ್ ಫೇವರೀಟ್ ಕಲರ್ ಇದು. ಟಿನೇಜ್ ಹುಡುಗಿಯರಿಗಂತೂ ಪರ್ಫೆಕ್ಟ್ ಕಲರ್. ಈ ಬಣ್ಣ ಖುಷಿ ಹಾಗೂ ಸಂತೋಷದ ಸಿಂಬಲ್. ಲೈಟ್ ಕಲರ್, ಪ್ರಿಂಟೆಡ್ ಉಡುಪುಗಳಿಗೆ ಪಕ್ಕಾ ಸೂಟ್ ಆಗುತ್ತದೆ. ದಿನವಿಡೀ ಉಲ್ಲಾಸವಿಡುವ ಕಲರ್ ಎಂದರೂ ತಪ್ಪಿಲ್ಲ. ಯಂಗ್‌ಲುಕ್ ನೀಡುವ ಬಣ್ಣವೆಂದು ಪರಿಗಣಿಸಲಾಗುತ್ತದೆ.
ಬ್ರೌನ್: ಒಲವಿನ ಬಣ್ಣ
ಬ್ರೌನ್- ಫ್ಯಾಷನಿಸ್ಟಾಗಳು ಬಳಸೋ ಪದ ಸ್ಟನ್ನಿಂಗ್ ಕಲರ್. ಅಷ್ಟೇ ಅಲ್ಲ, ಈ ಕಲರ್ ಲಕ್ಷುರಿ ಲೈಫ್‌ನ ಸಂಕೇತ. ಹೈ ಕ್ಲಾಸ್ ಹೆಂಗಸರು ಬಳಸುವ ಬಣ್ಣವಿದು. ಇದರಲ್ಲೂ ತಿಳಿ-ಗಾಢ ಎಂದೆಲ್ಲಾ ಶೇಡ್ಸ್ ಪ್ರಯೋಗ ಮಾಡಬಹುದು. ಪ್ರೆಸ್ಟೀಜಿಯಸ್ ಬಣ್ಣ ಎಂದೇ ಕರೆಯಲಾಗುವ ಈ ಬಣ್ಣ ಯಾವುದೇ ಡಾರ್ಕ್ ಉಡುಪಿಗೂ, ಬಾರ್ಡರ್ ಸೀರೆಗಳಿಗೂ ಮ್ಯಾಚ್ ಆಗುತ್ತದೆ.

ಮೆಜಂತಾ: ವೈಭವದ ಧ್ಯೋತಕ
ಇದು ರಿಚ್ ಕಲರ್. ವೈನ್ ಕಲರ್ ಎಂದು ಪ್ರಚಲಿತದಲ್ಲಿರುವ ಈ ಬಣ್ಣದಲ್ಲಿ ಕಡಿಮೆ ಎಂದರೂ ಹತ್ತಕ್ಕೂ ಹೆಚ್ಚು ಶೇಡ್ಸ್ ಪ್ರಯೋಗಿಸಬಹುದಂತೆ. ಕೋರಲ್ ಹಾಗೂ ಆಯಿಲ್ ರೆಡ್ ಉಡುಪುಗಳು ಸಕತ್ ಮ್ಯಾಚಿಂಗ್. ಗ್ಲಾಮರ್ ಹಾಗೂ ಬ್ಯೂಟಿಯನ್ನು ಹೆಚ್ಚಿಸುವ ಬಣ್ಣ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Sling Bag Fashion: ಯುವತಿಯರ ಟ್ರಾವೆಲ್ ಫ್ಯಾಷನ್‌ಗೆ ಸಾಥ್ ನೀಡುವ ಶೋಲ್ಡರ್ ಸ್ಲಿಂಗ್ ಬ್ಯಾಗ್