Earthquake: ದಕ್ಷಿಣ ಅಮೆರಿಕ, ಅರ್ಜೆಂಟೀನಾದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ
ದಕ್ಷಿಣ ಅಮೆರಿಕಾ, ಅರ್ಜೆಂಟೀನಾ ಸೇರಿದಂತೆ ಕೆಲವು ಕಡೆ ಶುಕ್ರವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ರ ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಅರ್ಜೆಂಟೀನಾದ ಉಶುವಾಯಾದಿಂದ 219 ಕಿ.ಮೀ ದಕ್ಷಿಣದಲ್ಲಿರುವ ಡ್ರೇಕ್ ಪ್ಯಾಸೇಜ್‌ನಲ್ಲಿ ಭೂಕಂಪ ಸಂಭವಿಸಿದೆ.


ವಾಷಿಂಗ್ಟನ್: ದಕ್ಷಿಣ ಅಮೆರಿಕಾ, ಅರ್ಜೆಂಟೀನಾ ಸೇರಿದಂತೆ ಕೆಲವು ಕಡೆ ಶುಕ್ರವಾರ ಭೂಕಂಪ (Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ರ ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಅರ್ಜೆಂಟೀನಾದ ಉಶುವಾಯಾದಿಂದ 219 ಕಿ.ಮೀ ದಕ್ಷಿಣದಲ್ಲಿರುವ ಡ್ರೇಕ್ ಪ್ಯಾಸೇಜ್‌ನಲ್ಲಿ 12:58:26 (UTC) (ಬೆಳಿಗ್ಗೆ 9 ಗಂಟೆಗೆ ಸ್ವಲ್ಪ ಮೊದಲು ET) ಕ್ಕೆ ಕಂಪನಗಳು ಅನುಭವಕ್ಕೆ ಬಂದಿವೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಕರಾವಳಿಯಿಂದ ದೂರ ಸರಿದು ಎತ್ತರದ ಸ್ಥಳಕ್ಕೆ ತಲುಪುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಅರ್ಜೆಂಟೀನಾ ಮತ್ತು ಚಿಲಿಯ ಕೆಲವು ಭಾಗಗಳು ಸೇರಿದಂತೆ ಭೂಕಂಪದ ಕೇಂದ್ರಬಿಂದುದಿಂದ 300 ಕಿಲೋಮೀಟರ್ ವ್ಯಾಪ್ತಿಯ ಕರಾವಳಿ ಪ್ರದೇಶಗಳಿಗೆ ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆಯಿಂದ "ಅಪಾಯಕಾರಿ ಅಲೆಗಳು ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಅರ್ಜೆಂಟೀನಾ ಮತ್ತು ಚಿಲಿಯ ಕೆಲವು ಭಾಗಗಳು ಸೇರಿದಂತೆ ಭೂಕಂಪದ ಕೇಂದ್ರಬಿಂದುದಿಂದ 300 ಕಿಲೋಮೀಟರ್ ವ್ಯಾಪ್ತಿಯ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಚಿಲಿಯ ಕರಾವಳಿಯ ಕೆಲವು ಭಾಗಗಳಿಗೆ ಸಾಮಾನ್ಯ ಉಬ್ಬರವಿಳಿತದ ಮಟ್ಟಕ್ಕಿಂತ 3 ರಿಂದ 10 ಅಡಿಗಳಷ್ಟು ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಸಿದೆ.
Alerta de tsunami Puerto Williams pic.twitter.com/oEpCBsQBGC
— andrea belen pedrero (@AndreaPedrerooo) May 2, 2025
ಅಂದಾಜು ಆಗಮನದ ಸಮಯಕ್ಕೆ ಸಂಬಂಧಿಸಿದಂತೆ, ಚಿಲಿಯಲ್ಲಿರುವ ಪೋರ್ಟೊ ವಿಲಿಯಮ್ಸ್‌ಗೆ ಇಂದು ETA 18:55 UTC ಎಂದು ಎಚ್ಚರಿಕೆ ತಿಳಿಸಿದೆ. ಸುನಾಮಿ ಆರಂಭಕ್ಕೂ ಮೊದಲು ಅಷ್ಟೊಂದು ಭೀಕರತೆ ಇಲ್ಲದೆ ಇರಬಹುದು. ಆದರೆ ಸುನಾಮಿ ಅಲೆಗಳು 24 ಗಂಟೆಗಳ ಬಳಿಕ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಸಿದ್ದಾರೆ. ಕರಾವಳಿ ಪ್ರದೇಶಗಳಲ್ಲಿನ ಸರ್ಕಾರಿ ಸಂಸ್ಥೆಗಳು ಅಪಾಯದಲ್ಲಿರುವ ಜನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ನಿರೂಪಕಿ ಸುದ್ದಿ ಓದುತ್ತಿರುವಾಗಲೇ ರಣಭೀಕರ ಭೂಕಂಪ; ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಮೇ 1 ರ ರಾತ್ರಿ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ರಾತ್ರಿ 9 ಗಂಟೆ 58 ನಿಮಿಷಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ (Richter Scale) 4.4 ತೀವ್ರತೆ ದಾಖಲಾಗಿದೆ. ಕಂಪನದ ಅನುಭವ ಆಗುತ್ತಿದ್ದಂತೆ ಜನ ಭಯಗೊಂಡು ಹೊರಗಡೆ ಓಡಿ ಬಂದಿದ್ದಾರೆ. ಖೈಬರ್ ಪಖ್ತುನ್ಖ್ವಾದ ಸ್ವಾತ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಭಾನುವಾರ 4.4 ತೀವ್ರತೆಯ ಭೂಕಂಪ ಸಂಭವಿಸಿ, ಪ್ರದೇಶದಾದ್ಯಂತ ಕಂಪನ ಉಂಟಾದ ಕೇವಲ ಎರಡು ದಿನಗಳ ನಂತರ ಮತ್ತೆ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.