1965 Indo-Pak War: ಪಾಕ್ ಸೇನೆ ಮಾಡಿದ ಒಂದು ತಪ್ಪಿಗೆ ಗುಜರಾತ್ ಸಿಎಂ ಸೇರಿ ಆರು ಮಂದಿ ಬಲಿಯಾಗಿದ್ರು! ಏನಿದು ಘಟನೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ( Indo-Pak War) ನಡುವಿನ ಉದ್ವಿಗ್ನತೆ ತೀವ್ರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಈ ನಡುವೆ ಹಿಂದೆ ನಡೆದ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ನಡೆದ ದುಃಖಕರವಾದ ಘಟನೆಯನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಪಾಕಿಸ್ತಾನದೊಂದಿಗೆ ಯುದ್ಧವಾದರೆ ಆ ಘಟನೆಗೆ ಭಾರತ ಪ್ರತಿಕಾರ ತೀರಿಸಲೇಬೇಕು ಎನ್ನುತ್ತಾರೆ.


ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಯಿಂದ (Pahalgam Terrorist attack) 27 ಜನರು ಸಾವನ್ನಪ್ಪಿದ ಬಳಿಕ ಭಾರತ ಸರ್ಕಾರ ಕೈಗೊಂಡ ನಿರ್ಧಾರಗಳಿಂದ ಎರಡು ರಾಷ್ಟ್ರಗಳ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾಗಿದೆ. ಎರಡು ರಾಷ್ಟ್ರಗಳು ಗಡಿಯ ಬಳಿ ಯುದ್ಧದ ತಯಾರಿ ನಡೆಯುತ್ತಿದೆ ಒಂದು ವೇಳೆ ಯುದ್ಧ ಪ್ರಾರಂಭವಾದರೆ ಎಲ್ಲರಲ್ಲೂ ಆತಂಕ ಇದ್ದೇ ಇರುತ್ತದೆ. ಯಾಕೆಂದರೆ ಎಲ್ಲಿ, ಯಾವಾಗ, ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇಂತಹ ಒಂದು ಘಟನೆ 1965ರಲ್ಲಿ (1965 Indo-Pak War) ನಡೆದಿತ್ತು. ಅದು ಇಂದಿಗೂ ಎಲ್ಲರನ್ನೂ ಕಾಡುವ ಕಹಿ ಘಟನೆಯಾಗಿ ಉಳಿದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಈ ನಡುವೆ ಹಿಂದೆ ನಡೆದ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ನಡೆದ ದುಃಖಕರವಾದ ಘಟನೆಯನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಪಾಕಿಸ್ತಾನದೊಂದಿಗೆ ಯುದ್ಧವಾದರೆ ಆ ಘಟನೆಗೆ ಭಾರತ ಪ್ರತಿಕಾರ ತೀರಿಸಲೇಬೇಕು ಎನ್ನುತ್ತಾರೆ.
1965ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗುಜರಾತ್ ಮುಖ್ಯಮಂತ್ರಿ ಬಲವಂತ್ರಾಯ್ ಮೆಹ್ತಾ ಅವರು ಸಾವನ್ನಪ್ಪಿದ್ದರು. ಇದು ಪಾಕಿಸ್ತಾನ ಸೇನೆಯಿಂದ ಆದ ತಪ್ಪು ಎಂದು ಬಳಿಕ ಅದು ಒಪ್ಪಿಕೊಂಡಿತ್ತು.
1965ರ ಸೆಪ್ಟೆಂಬರ್ ತಿಂಗಳ 19ರಂದು ಭಾರತ ಮತ್ತು ಪಾಕಿಸ್ತಾನ ಸೈನ್ಯ ಯುದ್ಧದ ಅಂತಿಮ ಘಟ್ಟದಲ್ಲಿತ್ತು. ಈ ಸಂದರ್ಭದಲ್ಲಿ ಅಹಮದಾಬಾದ್‌ನಿಂದ ಬೀಚ್‌ಕ್ರಾಫ್ಟ್ ವಿಮಾನದಲ್ಲಿ ಭೇಟಿಯ ಸಲುವಾಗಿ ಗುಜರಾತ್ ಮುಖ್ಯಮಂತ್ರಿ ಬಲವಂತ್ರಾಯ್ ಮೆಹ್ತಾ ಅವರು ಮಿಥಾಪುರಕ್ಕೆ ಪ್ರಯಾಣ ಆರಂಭಿಸಿದ್ದರು. ಅವರೊಂದಿಗೆ ಅವರ ಪತ್ನಿ ಸರೋಜ್‌ಬೆನ್, ಸಹಾಯಕರು, ಪತ್ರಕರ್ತೆ ಮತ್ತು ಇಬ್ಬರು ಸಿಬ್ಬಂದಿ ಇದ್ದರು.
ಮೆಹ್ತಾ ಅವರು ಪ್ರಯಾಣಿಸುತ್ತಿದ್ದ ವಿಮಾನವು ಅಂತಾಷ್ಟ್ರೀಯ ಗಡಿಯ ಸಮೀಪವಿರುವ ರಾನ್ ಆಫ್ ಕಚ್ ಬಳಿ ಹಾರುತ್ತಿದ್ದಾಗ ಪಾಕಿಸ್ತಾನದ ರಾಡಾರ್ ಅದನ್ನು ಬೆದರಿಕೆ ಎಂದು ಗುರುತಿಸಿ ದಾಳಿ ಮಾಡಿತ್ತು. ಇದರಿಂದ ವಿಮಾನದಲ್ಲಿದ್ದ ಎಂಟು ಮಂದಿಯೂ ಸಾವನ್ನಪ್ಪಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ತಳಮಟ್ಟದ ಪ್ರಜಾಪ್ರಭುತ್ವದ ಪ್ರತಿಪಾದಕರು ಹಾಗೂ ರಾಜಕೀಯ ನೀತಿ ತಜ್ಞರು ಆಗಿದ್ದ ಮೆಹ್ತಾ ಅವರ ಸಾವು ದೇಶಕ್ಕೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿತ್ತು.
ಇದನ್ನೂ ಓದಿ: Rahul Gandhi: ನ್ಯಾಷನಲ್ ಹೆರಾಲ್ಡ್ ಪ್ರಕರಣ; ರಾಹುಲ್, ಸೋನಿಯಾ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್
ಪಾಕಿಸ್ತಾನವು ಈ ಘಟನೆಯನ್ನು ಯುದ್ಧ ಸನ್ನಿವೇಶದಲ್ಲಿ ನಡೆದ ತಪ್ಪು ಎಂದು ಹೇಳಿತು. ಈ ಘಟನೆಗೆ ಕಾರಣವಾದ ಪಾಕಿಸ್ತಾನ ಸೇನೆಯ ಪೈಲಟ್‌ಗಳಲ್ಲಿ ಒಬ್ಬರು ದಶಕಗಳ ಬಳಿಕ ಬರೆದ ಪತ್ರದಲ್ಲಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದರೂ ಪಾಕಿಸ್ತಾನದಿಂದ ಯಾವುದೇ ಔಪಚಾರಿಕ ಕ್ಷಮೆಯಾಚನೆ ಬರಲಿಲ್ಲ.
ಮೆಹ್ತಾ ಅವರ ಸಾವು ಪಾಕಿಸ್ತಾನದ ತಪ್ಪು ಲೆಕ್ಕಾಚಾರದಿಂದ ನಡೆದಿರುವುದು ಸ್ಪಷ್ಟ. ಯಾಕೆಂದರೆ ಪಾಕಿಸ್ತಾನದ ಯುದ್ಧ ವಿಮಾನವು ನಾಗರಿಕ ವಿಮಾನವನ್ನು ಗುರಿ ಮಾಡಿ ದಾಳಿ ನಡೆಸಿರುವುದು ಇನ್ನು ನೆನಪಾಗಿ ಉಳಿದಿದೆ. ಹೀಗಾಗಿಯೇ ಪ್ರತಿ ಬಾರಿ ಭಾರತ ಪಾಕ್ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾದಾಗ ಈ ಘಟನೆಯೂ ನೆನಪಾಗುತ್ತದೆ.