ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Foods: ಅಪ್ಪಿ ತಪ್ಪಿಯೂ ಬೇಸಿಗೆಯಲ್ಲಿ ಈ ತರಕಾರಿಗಳನ್ನು ಸೇವಿಸಲೇಬೇಡಿ

ಅತಿಯಾದ ಬಿಸಿಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಕೆಲವು ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನುವುದು ಅಪಾಯಕಾರಿ. ಯಾವೆಲ್ಲ ತರಕಾರಿಯನ್ನು ಬೇಸಿಗೆಯಲ್ಲಿ ಕಡಿಮೆ ಬಳಸಬೇಕು ಎನ್ನುವ ವಿವರ ಇಲ್ಲಿದೆ.

ಬೇಸಿಗೆಯಲ್ಲಿ ಈ ತರಕಾರಿಗಳನ್ನು ತಪ್ಪಿಸಿ

Avoid Eating These Vegetables

Profile Pushpa Kumari Apr 17, 2025 6:00 AM

ಹೊಸದಿಲ್ಲಿ: ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನುಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು (Summer Tips). ಅತಿಯಾದ ಬಿಸಿಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಕೆಲವು ಸಮಸ್ಯೆಯನ್ನು ಕೂಡ ಉಂಟು ಮಾಡುತ್ತದೆ. ಹಾಗಾಗಿ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನುವುದು ಜೀರ್ಣಕಾರಿ, ಚರ್ಮದ ದದ್ದುಗಳು ಮತ್ತು ಸಾಮಾನ್ಯ ಅಸ್ವಸ್ಥತೆಗೆ ಕಾರಣವಾಗಬಹುದು. ಹಾಗಾಗಿ ಈ ಸಮಯದಲ್ಲಿ ಕೆಲವೊಂದು ತರಕಾರಿಗಳನ್ನು ತಪ್ಪಿಸಬೇಕಾಗುತ್ತದೆ (Health Tips). ಬೇಸಿಗೆಯಲ್ಲಿ ಈ ತರಕಾರಿಗಳಿಂದ ದೂರ ಇರುವುದೇ ಉತ್ತಮ.

ಬದನೆ ಕಾಯಿ

ಬದನೆ ಕಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿದ್ದರೂ, ಇದು ಬೇಸಿಗೆಯಲ್ಲಿ ಚರ್ಮದ ದದ್ದುಗಳು ಅಥವಾ ಆಮ್ಲೀಯತೆಯಂತಹ ಶಾಖ-ಸಂಬಂಧಿತ ಸಮಸ್ಯೆಯನ್ನುಉಲ್ಬಣಗೊಳಿಸುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಬೇಸಿಗೆಯ ಸಂದರ್ಭ ಬದನೆಕಾಯಿಯನ್ನು ಮಿತವಾಗಿ ಸೇವಿಸುವುದು ಉತ್ತಮ.

ಆಲೂಗಡ್ಡೆ

ಬೇಸಿಗೆಯಲ್ಲಿ ಆಲೂಗಡ್ಡೆ ಅಥವಾ ಇತರ ಬೇರು ತರಕಾರಿಗಳನ್ನು ತಿನ್ನದಿರುವುದು ಉತ್ತಮ. ಆಲೂಗಡ್ಡೆಯ ಸೇವನೆ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಇವುಗಳನ್ನು ಬಳಸಿ ಅಡುಗೆ ಮಾಡದಿರುವುದು ಉತ್ತಮ.

ಎಲೆಕೋಸು

ಎಲೆಕೋಸು ಮತ್ತು ಕೇಲ್‌ನಂತಹ ಕ್ರೂಸಿಫೆರಸ್ ತರಕಾರಿಗಳು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಇವು ದೇಹದಲ್ಲಿ ಕ್ಯಾನ್ಸರ್ ತಡೆಗಟ್ಟಲು ಬಹಳ ಸಹಕಾರಿ. ಆದರೆ ಬೇಸಿಗೆಯಲ್ಲಿ ಎಲೆಕೊಸು ಸೇವನೆ ಉತ್ತಮವಲ್ಲ. ಇದು ಹೊಟ್ಟೆ ಉಬ್ಬರ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಎಲೆಕೋಸು ಮತ್ತು ಹೂಕೋಸು ತಿನ್ನದಿರುವುದು ಉತ್ತಮ.

ಮೂಲಂಗಿ

ಮೂಲಂಗಿಯು ದೇಹಕ್ಕೆ ಹಲವು ರೀತಿಯ ಪ್ರಯೋಜನ ಉಂಟು ಮಾಡಿದರೂ ಬೇಸಿಗೆಯಲ್ಲಿ ಇದರ ಸೇವನೆ ಉತ್ತಮವಲ್ಲ. ಇದು ಜೀರ್ಣಕ್ರಿಯೆಗೆ ಉತ್ತಮವಾಗಿದ್ದರೂ, ಬೇಸಿಗೆಯಲ್ಲಿ ಮೂಲಂಗಿಯನ್ನು ತಿನ್ನುವುದು ಉಬ್ಬುವುದು ಮತ್ತು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು. ನೀವು ತಿನ್ನಲೇ ಬೇಕಾದ ಸಂದರ್ಭ ಬಂದಾಗ ಸರಿಯಾಗಿ ಬೇಯಿಸಿ ಮಿತವಾಗಿ ಸೇವನೆ ಮಾಡಿ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಪೌಷ್ಟಿಕವಾಗಿದ್ದರೂ, ಬೇಸಿಗೆಯಲ್ಲಿ ಅತಿಯಾಗಿ ಸೇವಿಸುವುದರಿಂದ ಅದರ ಹೆಚ್ಚಿನ ಆಕ್ಸಲೇಟ್ ಅಂಶದಿಂದಾಗಿ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ ಉಂಟು ಮಾಡಬಹುದು. ಹಾಗಾಗಿ ಹೆಚ್ಚಿನ ತಾಪಮಾನದಲ್ಲಿ ಇದನ್ನು ಬೇಯಿಸುವ ಬದಲು ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿ ಸೇವಿಸುವುದು ಉತ್ತಮ.

ಬೀಟ್ರೂಟ್

ಚಳಿಗಾಲದಲ್ಲಿ ಬೀಟ್ರೂಟ್‌ಗಳು ಹೆಚ್ಚಾಗಿ ಲಭ್ಯವಿರುತ್ತವೆ. ಶೀತ ವಾತಾವರಣದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ಬೇಸಿಗೆಯಲ್ಲಿ ಇದು ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಇದರ ಸೇವನೆಯು ನಿರ್ಜಲೀಕರಣ ಉಂಟು ಮಾಡುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಚರ್ಮದ ದದ್ದುಗಳಿಗೂ ಕಾರಣವಾಗಬಹುದು.

ಇದನ್ನು ಓದಿ: Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?

ಹಾಗಲಕಾಯಿ

ಹಾಗಲಕಾಯಿ ದೇಹಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದರೂ ಬೇಸಿಗೆಯಲ್ಲಿ ಇದರ ಸೇವನೆ ‌ಉತ್ತಮವಲ್ಲ. ಇದರ ಸೇವನೆ ನಿರ್ಜಲೀಕರಣದಂತಹ ಸಮಸ್ಯೆ ಯನ್ನು ಉಂಟು ಮಾಡುತ್ತದೆ.

ಯಾವ ತರಕಾರಿ ತಿನ್ನಬೇಕು?

ಬೇಸಿಗೆಯಲ್ಲಿ ಸೌತೆಕಾಯಿ ಮತ್ತು ಟೊಮೆಟೋಗಳಂತಹ ತರಕಾರಿಯನ್ನು ಆಯ್ಕೆ ಮಾಡಿಕೊಳ್ಳಿ. ನೀರಿನ ಅಂಶವಿರುವ ತರಕಾರಿಗಳನ್ನು ನೀವು ಹೆಚ್ಚಾಗಿ ಸೇವಿಸಬೇಕು. ಅಲ್ಲದೆ ಕಲ್ಲಂಗಡಿ, ಸಿಟ್ರಸ್ ಹಣ್ಣುಗಳು, ಕಿವಿ ಇತ್ಯಾದಿ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ‌ ಸೇರಿಸಬೇಕು. ಇವೆಲ್ಲವೂ ದೇಹವನ್ನು ತಣ್ಣಗಾಗಿಸಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡುತ್ತದೆ.