ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜೈವಿಕ ಇಂಧನವನ್ನು "ಮಾಲಿನ್ಯಕಾರಕವಲ್ಲದ ಇಂಧನದ ಗುಂಪಿಗೆ" ಸೇರಿಸಲು ಕ್ರಮ: ಎಸ್‌.ಈ.ಸುಧೀಂದ್ರ

ಜೈವಿಕ ಇಂಧನವನ್ನು ರಾಜ್ಯದಲ್ಲಿ ಮಾಲಿನ್ಯಕಾರಕವಲ್ಲದ ಇಂಧನ (ವೈಟ್‌ ಕ್ಯಾಟಗರಿ)ಗೆ ಸೇರ್ಪಡೆ ಮಾಡುವ ಕುರಿತು ಸಂವಾದಕರೊಬ್ಬರು ಪ್ರಸ್ತಾಪಿಸಿದರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಎಲ್ಲಾ ಮಾದರಿಯ ಜೈವಿಕ ಇಂಧನವನ್ನು ಮಾಲಿನ್ಯ ಕಾರಕವಲ್ಲದ ಇಂಧನದ ಗುಂಪಿಗೆ ಸೇರಿಸಿದೆ, ರಾಜ್ಯದಲ್ಲೂ ಈ ಕೆಲಸ ಆಗಬೇಕು

"ಮಾಲಿನ್ಯಕಾರಕವಲ್ಲದ ಇಂಧನದ ಗುಂಪಿಗೆ" ಜೈವಿಕ ಇಂಧನ ಸೇರಿಸಲು ಕ್ರಮ

Profile Ashok Nayak May 7, 2025 12:44 PM

ಬೆಂಗಳೂರು: ಪರಿಸರ ಸ್ನೇಹಿ ಜೈವಿಕ ಇಂಧನವನ್ನು "ಮಾಲಿನ್ಯಕಾರಕವಲ್ಲ ಇಂಧನದ ಗುಂಪಿಗೆ" (ವೈಟ್‌ಕ್ಯಾಟಗರಿ) ಸೇರ್ಪಡೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್‌.ಈ. ಸುಧೀಂದ್ರ ಹೇಳಿದರು. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ "ಜೈವಿಕ ಇಂಧನ ನೀತಿ ನಿರೂಪಣೆ ಯಲ್ಲಿನ ಬದಲಾವಣೆ ಹಾಗೂ ನಿಲುವುಗಳ ಕುರಿತು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಾದದ ವೇಳೆ ಜೈವಿಕ ಇಂಧನವನ್ನು ರಾಜ್ಯದಲ್ಲಿ ಮಾಲಿನ್ಯಕಾರಕವಲ್ಲದ ಇಂಧನ (ವೈಟ್‌ ಕ್ಯಾಟಗರಿ)ಗೆ ಸೇರ್ಪಡೆ ಮಾಡುವ ಕುರಿತು ಸಂವಾದಕರೊಬ್ಬರು ಪ್ರಸ್ತಾಪಿಸಿದರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಎಲ್ಲಾ ಮಾದರಿಯ ಜೈವಿಕ ಇಂಧನವನ್ನು ಮಾಲಿನ್ಯ ಕಾರಕವಲ್ಲದ ಇಂಧನದ ಗುಂಪಿಗೆ ಸೇರಿಸಿದೆ, ರಾಜ್ಯದಲ್ಲೂ ಈ ಕೆಲಸ ಆಗಬೇಕು ಎಂದು ಪ್ರಸ್ತಾಪಿಸಿ ದರು.

ಪ್ರಸ್ತುತದಲ್ಲಿ ಜೈವಿಕ ಇಂಧನ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿಸಬೇಕು ಎಂಬುದು ಅನಿವಾರ್ಯ ಹೀಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನೂ ಸಂವಾದನಕ್ಕೆ ಆಹ್ವಾನಿಸಿ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆವು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಕ್ರಮ ಕೈಗೊಳ್ಳುವ ಬಗ್ಗೆ ಆಶ್ವಾಸನೆ ನೀಡಿದರು.

ಇದನ್ನೂ ಓದಿ: Vishweshwar Bhat Column: ಆತ್ಮಹತ್ಯೆಯಲ್ಲೂ ಮುಂದು

ಇನ್ನು, ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ ಆರಂಭಕ್ಕೆ ವಿಫುಲ ಅವಕಾಶಗಳಿದ್ದು, ಹೂಡಿಕೆದಾರರು ಮುಂದೆ ಬರಬೇಕು. ನಮ್ಮಲ್ಲಿ ಮೂಲಸೌಕರ್ಯ, ತೆರಿಗೆ ಪದ್ಧತಿ, ಕಚ್ಛಾವಸ್ತುಗಳ ಲಭ್ಯತೆ, ನೇಪಿಯರ್‌ ಗ್ರಾಸ್‌, ಕೃಷಿ ತ್ಯಾಜ್ಯ ಸೇರಿದಂತೆ ಜೈವಿಕ ಇಂಧನ ಉತ್ಪಾದನೆಗೆ ಸಾಕಷ್ಟು ಪೂರಕ ವಾತಾವರಣವಿದ್ದು, ಹೂಡಿಕೆದಾರರಿಗೆ ರಾಜ್ಯ ಸೂಕ್ತ ಸ್ಥಳವಾಗಿದೆ ಎಂದು ಹೇಳಿದರು.

ಕ್ರಿಯಾಶೀಲ ಮಹಿಳಾ ಉದ್ಯಮಿಗಳೂ ಕೂಡ ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿಚ್ಚು ತೊಡಗಿಕೊಳ್ಳ ಬೇಕು, ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ತಮ್ಮ ಪಾತ್ರದ ಪ್ರಾಮುಖ್ಯತೆ ಎತ್ತಿ ಹಿಡಿದಿದ್ದಾರೆ, ಈ ಕ್ಷೇತ್ರವು ಮಹಿಳೆಯರು ಸಬಲೀಕರಣಗೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದು ಆಹ್ವಾನಿಸಿದರು.

ಇನ್ನು, ಸಂವಾದದಲ್ಲಿ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಮಂಡಳಿಯು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡಲು ಕಟಿಬದ್ಧವಾಗಿದ್ದು ಎಲ್ಲಾ ಕೈಗಾರಿಕಾ ಪ್ರತಿನಿಧಿಗಳು ನೀಡಿರುವ ಸಲಹೆಗಳನ್ನು ಕ್ರೋಢೀಕರಿಸಿ ಉದ್ದೇಶಿತ ಜೈವಿಕ ಇಂಧನ ನೀತಿಯಲ್ಲಿ ಅಳವಡಿಸಿಕೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಇಂದಿನ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜನೆಯಾಗಿದ್ದು ಇದೇ ಸಂದರ್ಭದಲ್ಲಿ ಶುಭ ಕೋರುವ ವಿಶ್ವವಿದ್ಯಾನಿಲಯದೊಂದಿಗೆ ಜೈವಿಕ ಇಂಧನ ಕ್ಷೇತ್ರದಲ್ಲಿ ಕೈಜೋಡಿಸಲು ಶೀಘ್ರ ದಲ್ಲಿಯೇ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆದಿದ್ದು ಮುಂಬರುವ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು, ಕೃಷಿ ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರತರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳು ಪ್ರಧಾನ ಪಾತ್ರ ವಹಿಸಲಿದ್ದು ಜೈವಿಕ ಇಂಧನ ಕ್ಷೇತ್ರದಲ್ಲಿ ಕೆಲವೇ ತಿಂಗಳ ಗಳಲ್ಲಿ ಮಹತ್ತರ ಬದಲಾವಣೆಯನ್ನು ತರಲು ಮುನ್ನುಡಿ ಬರೆದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಮಂಡಳಿಯ ಲೋಹಿತ್ ಬಿ.ಆರ್. ತಾಂತ್ರಿಕ ಅಧಿಕಾರಿಗಳು, ಯೋಜನಾ ಸಲಹೆಗಾರರಾದ ಡಾ. ದಯಾನಂದ ಜಿ ಎನ್, ಅಧ್ಯಕ್ಷರ ಸಲಹೆಗಾರರಾದ, ನಿಮೇನ್ ದೀಪ್ ಸಿಂಗ್, ತಾಂತ್ರಿಕ ಸಲಹೆಗಾರರಾದ ಪ್ರಸಾದ್, ರಾಜೀವ್, ಸುಜಯ್ ಮಂಡಳಿಯ ಅಧಿಕಾರಿಗಳು ಭಾಗವಹಿಸಿ ದ್ದರು.