ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ ತಂಡ ಪ್ರಕಟಕ್ಕೂ ಮುನ್ನ ಬುಮ್ರಾಗೆ ನಿರಾಸೆ; ಉಪನಾಯಕನ ಸ್ಥಾನದಿಂದ ಕೊಕ್‌!

India vs England: ಆಯ್ಕೆ ಸಮಿತಿಯ ಸಭೆಯಲ್ಲಿ ಬುಮ್ರಾ ಅವರನ್ನು ಟೆಸ್ಟ್ ನಾಯಕತ್ವಕ್ಕೆ ಮತ್ತು ಉಪನಾಯಕನ ಸ್ಥಾನಕ್ಕೂ ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಕಾರಣ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದು. ಹೀಗಾಗಿ ಬುಮ್ರಾ ಆರಂಭಿಕ ಕೆಲವು ಟೆಸ್ಟ್‌ಗೆ ಮಾತ್ರ ಲಭ್ಯರಿರುವುದಾಗಿ ತಿಳಿದುಬಂದಿದೆ.

ಬುಮ್ರಾಗೆ ಟೆಸ್ಟ್‌ ಉಪನಾಯಕನ ಸ್ಥಾನದಿಂದ ಕೊಕ್‌ ಸಾಧ್ಯತೆ!

Profile Abhilash BC May 23, 2025 12:44 PM

ಮುಂಬಯಿ: ಬಿಸಿಸಿಐ(BCCI) ಶನಿವಾರ (ಮೇ 24) ಇಂಗ್ಲೆಂಡ್(India vs England) ಪ್ರವಾಸಕ್ಕಾಗಿ ಭಾರತ ಟೆಸ್ಟ್ ತಂಡವನ್ನು(India Test squad) ಪ್ರಕಟಿಸಲಿದೆ. ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿದ್ದ ಹೆಚ್ಚಿನ ಆಟಗಾರರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಭಾರತ 'ಎ' ತಂಡದಲ್ಲಿರುವ ಕೆಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಭಾರತದ ವೇಗದ ದಾಳಿಯನ್ನು ಜಸ್ಪ್ರೀತ್ ಬುಮ್ರಾ(Jasprit Bumrah) ಮುನ್ನಡೆಸಲಿದ್ದಾರೆ. ಆದರೆ ಅವರು ಪೂರ್ಣ ಸರಣಿಗೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.

ತಂಡ ಪ್ರಕಟಕ್ಕೂ ಮುನ್ನ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಬುಮ್ರಾ ಅವರನ್ನು ಟೆಸ್ಟ್ ನಾಯಕತ್ವಕ್ಕೆ ಮತ್ತು ಉಪನಾಯಕನ ಸ್ಥಾನಕ್ಕೂ ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಕಾರಣ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದು. ಹೀಗಾಗಿ ಬುಮ್ರಾ ಆರಂಭಿಕ ಕೆಲವು ಟೆಸ್ಟ್‌ಗೆ ಮಾತ್ರ ಲಭ್ಯರಿರುವುದಾಗಿ ತಿಳಿದುಬಂದಿದೆ. ಬಳಿಕ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

ಶುಭಮನ್ ಗಿಲ್ ಭಾರತದ ಹೊಸ ಟೆಸ್ಟ್ ನಾಯಕರಾಗುವ ಸಾಧ್ಯತೆಯಿದೆ ಎಂದು ಹಲವು ವರದಿಗಳು ದೃಢಪಡಿಸಿವೆ. ಅವರು ಎಂದಿಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವದ ಗುಂಪಿನ ಭಾಗವಾಗಿರಲಿಲ್ಲ. 2024 ರ ಟಿ20 ವಿಶ್ವಕಪ್ ನಂತರ ಜಿಂಬಾಬ್ವೆ ಪ್ರವಾಸದಲ್ಲಿ ಗಿಲ್‌ ತಮ್ಮ ಟಿ20ಐ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪೂರ್ಣ ಪ್ರಮಾಣದ ಉಪನಾಯಕರಾಗಿ ಅವರನ್ನು ನೇಮಿಸಲಾಯಿತು.

ಇದನ್ನೂ ಓದ IND vs ENG: ಭಾರತ ಟೆಸ್ಟ್‌ ತಂಡದಲ್ಲಿ ಅರ್ಷದೀಪ್‌ ಸಿಂಗ್‌ಗೆ ಸ್ಥಾನ ನೀಡುವ ಸಾಧ್ಯತೆ!

ಬುಮ್ರಾ ಬದಲಿಗೆ ರಿಷಭ್ ಪಂತ್ ಹೊಸ ಉಪನಾಯಕನಾಗುವ ಸಾಧ್ಯತೆಯಿದೆ. ಅವರು ಟಿ20ಐ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 2018ರಿಂದ ರಿಷಭ್, ಭಾರತ ಟೆಸ್ಟ್ ತಂಡದಲ್ಲಿ ನಿಯಮಿತ ಆಟಗಾರರಾಗಿದ್ದಾರೆ.