ಮಹಿಳಾ ಸಬಲೀಕರಣಕ್ಕೆ ಮನರೇಗಾ ಸಹಕಾರಿ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರ್ಚನಾ
ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ವಾಗಿ ಶಕ್ತಿ ನೀಡಲು ಮನರೇಗಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ವಿಶೇಷ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಂಬಲರಾಗಬೇಕು


ಗುಡಿಬಂಡೆ : ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ನೀಡಲು ಮನರೇಗಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ವಿಶೇಷ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಂಬಲರಾಗಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರ್ಚನಾ ತಿಳಿಸಿದರು. ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಪರಿ ವರ್ತನ ಅಭಿಯಾನ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉಲ್ಲೋಡು ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸ್ತ್ರೀ ಚೇತನ ವಿಶೇಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಖಾತಾ ಆಂದೋಲನ: 211 ಫಲಾನುಭವಿಗಳಿಗೆ ವಿತರಣೆ ಮಾಡಿದ ಶಾಸಕ ಪುಟ್ಟಸ್ವಾಮಿಗೌಡ
ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಮಹಿಳಾ ಸಮುದಾಯ ಕಾಮಗಾರಿ ಆರಂಭಿಸಿ ಮಹಿಳಾ ಕೂಲಿಕಾರರಿಗೆ ಕೆಲಸ ನಿಡಲಾಗುತ್ತದೆ ಈ ಯೋಜನೆಯಡಿಯಲ್ಲಿ ಕಾಯಕ ಬಂದುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಮಹಿಳೆಯರಿಗೆ ಮನರೇಗಾ ಯೋಜನೆಯಡಿಯಲ್ಲಿ ಲಿಂಗ ತಾರತಮ್ಯ ಇಲ್ಲದೆ ಸಮಾನ ಕೂಲಿ ನೀಡಲಾಗುತ್ತಿದೆ. ಖಾಸಗಿ ಬ್ಯಾಂಕ್ ಗಳಲ್ಲಿ ಹೆಚ್ಚು ಬಡ್ಡಿ ವಿಧಿಸ ಲಾಗುತ್ತಿದೆ.ಹಾಗಾಗಿ ಸ್ವ ಸಹಾಯ ಸಂಘಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದುಕೊಂಡು ಕುಟುಂಬ ಹಾಗೂ ಮಕ್ಕಳ ವಿದ್ಯಾಬ್ಯಾಸ ಜೊತೆಗೆ ಕೈಗಾರಿಕೆ, ಉದ್ದಿಮೆಯಲ್ಲಿ ಸೇರಿದಂತೆ ಎಲ್ಲಾ ರಂಗದಲ್ಲೂ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ತಾಲ್ಲೂಕು ಮಾಹಿತಿ ಶಿಕ್ಷಣ ಸಂಯೋಜಕ ರಾಮಾಂಜಿ ಮಾತನಾಡಿ, ಮನರೇಗಾ ಯೋಜನೆಯಡಿ ಯಲ್ಲಿ ಮಹಿಳಾ ಕೂಲಿಕಾರರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಹಾಗೂ ಮ-ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕ ಮಹಿಳೆಯರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡುವ ಪ್ರತಿ ಪಂಚಾಯಿತಿಯಲ್ಲಿ ಕೂಸಿನ ಮನೆ ಪ್ರಾರಂಭ ಮಾಡಲಾಗಿದೆ ಇಲ್ಲಿ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಪೋಷಣೆ, ರಕ್ಷಣೆ, ಪಾಲನೆ ಹಾಗೂ ಪೌಷ್ಠಿಕತೆ ಹೆಚ್ಚಳಕ್ಕೆ ಈ ಕೇಂದ್ರ ಬಹುದೊಡ್ಡ ಹೆಜ್ಜೆಯನ್ನಿರಿಸಿದೆ. ಬೆಳಗ್ಗೆ ೯ ರಿಂದ ಸಂಜೆ ೫ರ ವರೆಗೆ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಇರಿಸಿ ನೆಮ್ಮದಿಯಿಂದ ಕೂಲಿ ಮಾಡಬಹುದಾಗಿದೆ.
ಒಂದು ಉದ್ಯೋಗ ಚೀಟಿಯಲ್ಲಿ ಜೀವಿತಾವಧಿಯಲ್ಲಿ ೫ ಲಕ್ಷವರೆಗೆ ಪ್ರೋತ್ಸಾಹ ಹಣ ನೀಡಲಾಗು ತ್ತಿದೆ. ಗಂಡು ಹೆಣ್ಣಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಪ್ರತಿ ವರ್ಷ 100 ದಿನ ಮಾನವ ದಿನಗಳ ಲೆಕ್ಕದಲ್ಲಿ ವರ್ಷಕ್ಕೆ ರೂ. ೩೭ ಸಾವಿರ ಹಣ ನೀಡಲಾಗುತ್ತದೆ. ನರೇಗಾ ದುಡಿ ಯುವ ಕೈಗಳಿಗೆ ಕೆಲಸ ನೀಡುವ ಜತೆಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಹೊಂದಿಲಾಗಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಸಮುದಾಯದ ಅಭಿವೃದ್ಧಿಯೊಂದಿಗೆ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ದಿನನಿತ್ಯದ ನಿರ್ವಹಣೆ ಜವಾಬ್ದಾರಿಯನ್ನು ಮಹಿಳೆಯರು ವಹಿಸಿಕೊಂಡಿರುತ್ತಾರೆ. ತಮ್ಮ ಕುಟುಂಬಕ್ಕೆ ಅನುಕೂಲ ಆಗುವಂತಹ ವೈಯಕ್ತಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾ ಯೋಜನೆ ಅವಕಾಶ ಕಲ್ಪಿಸುತ್ತದೆ. ನಿಮ್ಮ ದುಡಿಮೆಗೆ ತಕ್ಕ ಕೂಲಿಯನ್ನು ನೀಡುವುದಲ್ಲದೇ ಕಾಮಗಾರಿಯ ವೆಚ್ಚವನ್ನು ಭರಿಸುವತ್ತ ಸಹಾಯಹಸ್ತ ಚಾಚು ತ್ತದೆ. ಅಲ್ಲದೆ ಪಂಚತಂತ್ರ ಹಾಗೂ ಕುಡಿಯುವ ನೀರು ಮತ್ತು ಮನರೇಗಾ ಯೋಜನೆಯ ಸಮಸ್ಯಗೆ ಏಕಿಕೃತ ಸಹಾಯವಾಣಿ ೮೨೭೭೫೦೬೦೦೦ ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಎನ್.ಆರ್.ಎಲ್.ಎಂ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆಂಜನೇಯಪ್ಪ ರವರು ಮಾತನಾಡಿ, ಶ್ರೀ ಅಂಜಲಿ ಸಂಜೀವಿನಿ ಪಂಚಾಯಿತಿ ಮಟ್ಟದ ಒಕ್ಕೂಟ ಪ್ರಾರಂಭವಾಗಿ ೫ ವರ್ಷಗಳಾಗಿದೆ ಇಲ್ಲಿ ೬೩ ಮಹಿಳಾ ಸ್ವ ಸಹಾಯ ಸಂಘಗಳಲ್ಲಿ 1254 ಸದಸ್ಯರಿದ್ದು ಸಮುದಾಯ ಬಂಡವಾಳ ನಿಧಿ ೨೧ ಲಕ್ಷ ೨೫ ಸಾವಿರ ಬಿಡುಗಡೆಯಗಿದೆ ಸುತ್ತು ನಿಧಿ ೮೦ ಸಾವಿರ ಬಂದಿದ್ದು ಈ ಎಲ್ಲಾ ಹಣವನ್ನು ಚಾರ್ಟೆಡ್ ಅಕೌಂಟ್ ಮೂಲಕ ವರದಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಹಳ್ಳಿಗಳ ಮಹಿಳೆಯರಲ್ಲಿ ಅಪಾರ ಪ್ರತಿಭೆ ಇದೆ ಆದ್ದರಿಂದ ಮಹಿಳಾ ಸ್ವಸಹಾಯ ಸಂಘಗಳು ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಗೃಹ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮಲ, ಎನ್ ಆರ್ ಎಲ್ ಎಂ. ವಲಯ ಮೇಲ್ವಿಚಾರಕಿ ಡಿ.ಎ.ಮೀನ, ಕೃಷಿಯೇತರ ವ್ಯವಸ್ಥಾಪಕ ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತ ರಿದ್ದರು.