ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Babil Khan; ಬಾಲಿವುಡ್‌ಗೆ ಬೈಯ್ದು ಕಣ್ಣೀರಿಟ್ಟ ಖ್ಯಾತ ನಟನ ಪುತ್ರ! ಈ ಬಗ್ಗೆ ಕುಟುಂಬದ ಸ್ಪಷ್ಟನೆ ಏನು?

ನಟ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ ಕಲಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೆಚ್ಚುಗೆ ಪಡೆದಿದ್ದರು. ಪ್ರತಿಭಾವಂತ ನಟ ಇರ್ಫಾನ್ ಖಾನ್‌ನಂತೆ ದೊಡ್ಡ ಮಟ್ಟದಲ್ಲಿ ಅವರ ಪುತ್ರ ಬಾಬಿಲ್ ಖಾನ್ ಕೂಡ ಚಲನ ಚಿತ್ರೋದ್ಯಮದಲ್ಲಿ ಬೆಳೆಯುತ್ತಾರೆ ಎಂಬ ನಿರೀಕ್ಷೆಗಳಿತ್ತು ಆದರೆ ತಕ್ಕ ಮಟ್ಟಿಗೆ ಇನ್ನು ಅವಕಾಶ ಅವರ ಪಾಲಿಗೆ ಬಂದಿರಲಿಲ್ಲ. ಇದೀಗ ಬಾಲಿವುಡ್ ಕರಾಳತೆ ಬಗ್ಗೆ ನಟ ಬಾಬಿಲ್ ಖಾನ್ ಹೇಳಿಕೆವೊಂದನ್ನು ನೀಡಿ, ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬಾಲಿವುಡ್ ಕರಾಳತೆ ಬಗ್ಗೆ ಬಾಯ್ಬಿಟ್ಟು ಟೀಕೆಗೆ ಗುರಿಯಾದ ನಟ ಬಾಬಿಲ್ ಖಾನ್ !

Profile Pushpa Kumari May 5, 2025 1:50 PM

ನವದೆಹಲಿ: ಬಾಲಿವುಡ್ ಹಿರಿಯ ನಟ ಇರ್ಫಾನ್ ಖಾನ್ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಪ್ರತಿಭಾವಂತ ನಟನಾಗಿದ್ದು ಅಪಾರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ.  ಅವರು ನಿಧನರಾಗಿ 5 ವರ್ಷ ಕಳೆದಿದ್ದು ಇಂದಿಗೂ ಅವರ ಅಗಲುವಿಕೆ ಸಿನಿ ಕ್ಷೇತ್ರಕ್ಕೆ ತುಂಬಲಾಗದ ನಷ್ಟ ಎಂದರೂ ತಪ್ಪಾಗದು. ಸಾಮಾನ್ಯವಾಗಿ ಸಿನಿಮಾ ತಾರೆಯರ ಮಕ್ಕಳು ಕೂಡ ಸಿನಿ ರಂಗವನ್ನೇ ವೃತ್ತಿಜೀವನವಾಗಿ ಆಯ್ಕೆ ಮಾಡುತ್ತಾರೆ. ನಟ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ (Babil Khan) ಕಲಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೆಚ್ಚುಗೆ ಪಡೆದಿದ್ದರು. ಪ್ರತಿಭಾವಂತ ನಟ ಇರ್ಫಾನ್ ಖಾನ್ ನಂತೆ ದೊಡ್ಡ ಮಟ್ಟದಲ್ಲಿ ಅವರ ಪುತ್ರ ಬಾಬಿಲ್ ಖಾನ್ ಕೂಡ ಚಲನಚಿತ್ರೋದ್ಯಮದಲ್ಲಿ ಬೆಳೆಯುತ್ತಾರೆ ಎಂಬ ನಿರೀಕ್ಷೆಗಳಿತ್ತು ಆದರೆ ತಕ್ಕ ಮಟ್ಟಿಗೆ ಇನ್ನು ಅವಕಾಶ ಅವರ ಪಾಲಿಗೆ ಬಂದಿರಲಿಲ್ಲ. ಇದೀಗ ಬಾಲಿವುಡ್ ಕರಾಳತೆ ಬಗ್ಗೆ ನಟ ಬಾಬಿಲ್ ಖಾನ್ ಹೇಳಿಕೆವೊಂದನ್ನು ನೀಡಿ, ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೆ ನಿಷ್ಕ್ರಿಯವಾಗಿದ್ದ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಇದೀಗ ಸಕ್ರಿಯಗೊಳಿಸಿದ್ದಾರೆ.

ಬಾಬಿಲ್ ಖಾನ್ ಅವರು ಇತ್ತೀಚೆಗಷ್ಟೆ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆ ಹೊಂದಿರುವ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ತುಂಬಾ ಕೊಳಕಾಗಿ, ಕ್ರೂರವಾಗಿದೆ. ಇಲ್ಲಿ ನಕಲಿ ಚಿತ್ರರಂಗ ವ್ಯವಸ್ಥೆ ಇದೆ. ಬಾಲಿವುಡ್ ರಂಗ ಚೆನ್ನಾಗಿ ಇರಬೇಕು ಎಂದು ಬಯಸುವವರು ಕೆಲವೇ ಕೆಲವು ಜನರು ಮಾತ್ರ ಇದ್ದಾರೆ. ಅಲ್ಲದೇ ಅನನ್ಯಾ ಪಾಂಡೆ, ಶನಾಯಾ ಕಪೂರ್, ಆದರ್ಶ್ ಗೌರವ್, ಸಿದ್ಧಾಂತ್ ಚತುರ್ವೇದಿ, ಅರಿಜಿತ್ ಸಿಂಗ್, ರಾಘವ್ ಜುಯಲ್, ಅರ್ಜುನ್ ಕಪೂರ್​ ಮೊದಲಾದವರು ವೈಯಕ್ತಿಕವಾಗಿ ತುಂಬಾ ಒರಟು ಸ್ವಭಾವದವರು, ಚಲನಚಿತ್ರೋದ್ಯಮದಲ್ಲಿ ತಾನು ಒಂಟಿ ಎಂಬರ್ಥದಲ್ಲಿ ಮಾತನಾಡಿದ್ದ ನಟ ಬಾಬಿಲ್ ಖಾನ್ ಅವರು ಹೇಳಿಕೆ ನೀಡಿ ಕಣ್ಣೀರು ಹಾಕಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು.

babil Khan

ಈ ಸ್ಟೋರಿ ಇನ್ ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದ ಸ್ವಲ್ಪ ಸಮಯದಲ್ಲೆ ವೈರಲ್ ಆಗಿದ್ದು ಅತೀ ಹೆಚ್ಚು ಶೇರ್ ಮಾಡಲಾಗಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಬಹುದು ಎಂದು ನಟ ಬಾಬಿಲ್ ಖಾನ್ ಆ ವಿಡಿಯೊ ಕೂಡಲೇ ಡಿಲೀಟ್ ಮಾಡಿ ಇನ್ ಸ್ಟಾ ಗ್ರಾಮ್ ಖಾತೆ ನಿಷ್ಕ್ರಿಯ ಮಾಡಿದ್ದರು. ಆದರೆ ಸೋಶಿಯಲ್ ಮಿಡಿಯಾದಲ್ಲಿ ಈಗಾಗಲೇ ಕೆಲವು ಜನರು ಈ ಡೌನ್‌ಲೋಡ್ ವಿಡಿಯೊ ಶೇರ್ ಮಾಡಿಕೊಂಡ ಕಾರಣ ನಟ ಬಾಬಿಲ್ ಖಾನ್ ಟೀಕೆಗೆ ಗುರಿಯಾಗಬೇಕಾಯ್ತು.

ಇದೀಗ ತಮ್ಮ ಇನ್ ಸ್ಟಾ ಗ್ರಾಮ್ ಖಾತೆ ನಿಷ್ಕ್ರಿಯ ಮಾಡಿದ್ದ ಕೆಲವೇ ಗಂಟೆ ಬಳಿಕ ನಟ ಬಾಬಿಲ್ ಖಾನ್ ಮತ್ತೆ ಇನ್ ಸ್ಟಾ ಗ್ರಾಮ್ ಖಾತೆ ಸಕ್ರಿಯಗೊಳಿಸಿದ್ದಾರೆ. ನಾನು ಸಂವಹನ ನಡೆಸಲು ಸರಿಯಾಗಿ ಸಿದ್ಧವಾಗಿರಲಿಲ್ಲ, ವಿಡಿಯೋ ಮಾಡುವಾಗ ನನಗೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಿಡಿಯೋ ಪೋಸ್ಟ್ ಮಾಡುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿ ಕೊಳ್ಳದೆ ಇರುವ ಕಾರಣ ಸಾಕಷ್ಟು ಮುಜುಗರವಾಯಿತು ಎಂದು ತನ್ನ ಹೇಳಿಕೆಯಿಂದ ಉಂಟಾದ ಪ್ರಮಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.



ಇದನ್ನು ಓದಿ: Vidyapati Movie: ಸದ್ದಿಲ್ಲದೆ ಒಟಿಟಿಗೆ ಬಂದ ʼವಿದ್ಯಾಪತಿʼ; ಎಲ್ಲಿ, ಯಾವಾಗ ಸ್ಟ್ರೀಮಿಂಗ್‌?

ಬಾಬಿಲ್ ಖಾನ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಅವರು ಬಾಲಿವುಡ್ ಮತ್ತು ಸಿನಿಮಾ ಕಲಾವಿದರ ಬಗ್ಗೆ ಮೆಚ್ಚುಗೆಯನ್ನು ಹೇಳಹೊರಟಿದ್ದರು. ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದಿಂದ ಕಳೆದ ಕೆಲ ವರ್ಷದಿಂದ‌ ಮಾನಸಿಕ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಶೀಘ್ರವೇ ಅವರು ಚೇತರಿಕೆಯಾಗಲಿದ್ದಾರೆ. ಹೀಗಾಗಿ ಅವರನ್ನು ಅನಗತ್ಯ ಟೀಕೆ ಮಾಡಬಾರದು ಎಂದು ನಟ ಬಾಬಿಲ್ ಖಾನ್ ಕುಟುಂಬವು ಈ ಹೇಳಿಕೆ ನೀಡಿ ಸ್ಪಷ್ಟೀಕರಿಸಿದ್ದಾರೆ.

ಬಾಬಿಲ್ ಖಾನ್ ವಿಡಿಯೋ ಬಾಲಿವುಡ್ ನ ಅನೇಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅವರ ಮಾನಸಿಕ ಆರೋಗ್ಯದ ಸ್ಥಿತಿ ಸರಿ ಇಲ್ಲ ಇರಬೇಕು ಈ ಬಗ್ಗೆ ಬಾಲಿವುಡ್‌ ಗಮನ ಕೊಡಬೇಕು ಎನ್ನುವ ಕಮೆಂಟ್ ಗಳ ಮೂಲಕ ಈ ವಿಡಿಯೋಗೆ ಅಭಿ ಪ್ರಾಯ ವ್ಯಕ್ತವಾಗುತ್ತಿದೆ. ಸದ್ಯ ತಮ್ಮ ಸೋಶಿಯಲ್ ಮಿಡಿಯಾಕ್ಕೆ ಮರಳಿದ್ದ ನಟ ಮುಂದಿನ ದಿನದಲ್ಲಿ ಇಂತಹ ಕಾಂಟ್ರ ವರ್ಸಿಯಿಂದ ದೂರ ಇರಲಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ..