Seetha Rama Serial: ಮಧ್ಯರಾತ್ರಿ ಮನೆಬಿಟ್ಟು ಹೋದ ಸುಬ್ಬಿ: ಸೀತಾ-ರಾಮ್ನಿಂದ ಹುಡುಕಾಟ
Seetha Rama Kannada Serial: ಸುಬ್ಬಿ ಅಶೋಕ ಹಾಗೂ ಪ್ರಿಯ ಜೊತೆ ಮಲಗಿದ್ದಾಳೆ. ಆದರೆ, ಇವರಿಬ್ಬರು ಮಲಗಿದ ಬಳಿಕ ಸುಬ್ಬಿ ಮನೆಬಿಟ್ಟು ಹೋಗಿದ್ದಾಳೆ. ಸೀತಮ್ಮ ನನ್ನ ಪ್ರೀತಿ ಮಾಡಲ್ಲ ಅಂದ್ರೆ ನಾನಿಲ್ಲಿ ಇರಬಾರದು.. ನಾನು ಈ ಮನೆಗೆ ಸಿಹಿ ಅಂತ ಸುಳ್ಳು ಹೇಳಿಕೊಂಡು ಬಂದಿದ್ದಕ್ಕೆ ಇಷ್ಟೆಲ್ಲ ಆಯ್ತು.. ಇನ್ನು ನಾನಿಲ್ಲಿ ಇರಬಾರದು ಎಂದು ಮನೆಯಿಂದ ಹೊರ ಹೋಗಿದ್ದಾಳೆ.

Seetha Rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮನೆಯಲ್ಲಿರುವುದು ಸಿಹಿ ಅಲ್ಲ ಸುಬ್ಬಿ ಎಂಬ ಬಹುಡೊಡ್ಡ ಸತ್ಯ ಸೀತಾಗೆ ತಿಳಿದಾಗಿದೆ. ಇನ್ನು ಸಿಹಿಯನ್ನು ಕೊಂದಿದ್ದು ಭಾರ್ಗವಿ ಎಂಬ ನಿಜಾಂಶ ರಿವೀಲ್ ಆಗಬೇಕಿದೆಯಷ್ಟೆ. ಇನ್ನೇನು ಕೆಲವೇ ಎಪಿಸೋಡ್ನಲ್ಲಿ ಇದೆಲ್ಲ ಭಾರ್ಗವಿಯ ಕೃತ್ಯ ಎಂಬುದು ಗೊತ್ತಾಗಲಿದೆ. ಮನೆಬಿಟ್ಟು ಹೋಗಿದ್ದ ಸೀತಾ ತನ್ನ ಹಳೇಯ ಮನೆಗೆ ತೆರಳಿದ್ದು, ರಾಮ್ ಕೂಡ ಅಲ್ಲಿಗೆ ಹೋಗಿ ಸೀತಾಳನ್ನು ಸಮಾಧಾನ ಮಾಡಿ ವಾಪಾಸ್ ಕರೆತಂದಿದ್ದಾನೆ. ಆದರೆ, ಅತ್ತ ಯಾರೂ ಇಲ್ಲ ಎಂಬ ಬೇಜಾರಿನಲ್ಲಿದ್ದ ಸುಬ್ಬಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾಳೆ.
ಸಿಹಿ ಸತ್ತು ಹೋಗಿದ್ದಾಳೆ ಹಾಗೂ ಇಲ್ಲಿರುವುದು ಸುಬ್ಬಿ ಎಂಬುದು ಸೀತಾಳಿಗೆ ಬಿಟ್ಟು ಮತ್ತೆಲ್ಲರಿಗೂ ತಿಳಿದಿತ್ತು. ಸೀತಾಳಿಂದ ಈ ರಹಸ್ಯವನ್ನು ಮರೆಮಾಚಲು ರಾಮ್ ಎಲ್ಲಿಲ್ಲದ ಪ್ರಯತ್ನ ಮಾಡಿದ್ದ. ಆದರೆ, ಈ ಒಂದು ಸತ್ಯ ಸೀತಾಗೆ ಗೊತ್ತಾಗಿ ಸಿಹಿಯ ಫೋಟೋ ಹಿಡಿದುಕೊಂಡು ಅಳುತ್ತ ಮನೆಬಿಟ್ಟು ಹೋಗಿದ್ದಾಳೆ. ರಾಮ್ ಎಲ್ಲೆಡೆ ಸೀತಾಳನ್ನು ಹುಡುಕಿದ್ದಾನೆ. ಬಳಿಕ ಎಲ್ಲಾದರು ಸೀತಾ ಮೊದಲಿದ್ದ ಮನೆಗೆ ತೆರಳಿರಬಹುದು ಎಂಬ ಅನುಮಾನ ಮೂಡಿ ಅಲ್ಲಿದ್ದ ಅಜ್ಜನಿಗೆ ಕಾಲ್ ಮಾಡಿದ್ದಾನೆ.
Seetha Rama Serial: ಸೀತಾ ರಾಮ ಮುಕ್ತಾಯದ ಬೆನ್ನಲ್ಲೇ ಮತ್ತೊಂದು ಧಾರಾವಾಹಿ ಒಪ್ಪಿಕೊಂಡ್ರಾ ವೈಷ್ಣವಿ ಗೌಡ?
ಆಗ ಅಜ್ಜ ಸೀತಾ ಇಲ್ಲಿ ಬಂದಿದ್ದಾಳೆ ಆದ್ರೆ ನಮ್ಮ ಮನೆಯಲ್ಲಿಲ್ಲ.. ಅವಳ ಮನೆಗೆ ಹೋಗಿ ಬಾಗಿಲು ಹಾಕೊಂಡು ಕೂತಿದ್ದಾಳೆ.. ಡೋರ್ ತೆಗಿತಿಲ್ಲ ಎಂದಿದ್ದಾರೆ. ರಾಮ್ ಅಲ್ಲಿಗೆ ಬಂದು ಸಮಾಧಾನ ಮಾಡಿ ಊಟಿ ಮಾಡಿಸಿದ್ದಾನೆ. ಬಳಿಕ ಇವತ್ತು ರಾತ್ರಿ ಇಲ್ಲೇ ಇರುವ ನಾಳೆ ಬೆಳಗ್ಗೆ ಹೋಗೋಣ ಎಂದಿದ್ದಾನೆ. ಅತ್ತ ಸುಬ್ಬಿ ಅಶೋಕ ಹಾಗೂ ಪ್ರಿಯ ಜೊತೆ ಮಲಗಿದ್ದಾಳೆ. ಆದರೆ, ಇವರಿಬ್ಬರು ಮಲಗಿದ ಬಳಿಕ ಸುಬ್ಬಿ ಮನೆಬಿಟ್ಟು ಹೋಗಿದ್ದಾಳೆ. ಸೀತಮ್ಮ ನನ್ನ ಪ್ರೀತಿ ಮಾಡಲ್ಲ ಅಂದ್ರೆ ನಾನಿಲ್ಲಿ ಇರಬಾರದು.. ನಾನು ಈ ಮನೆಗೆ ಸಿಹಿ ಅಂತ ಸುಳ್ಳು ಹೇಳಿಕೊಂಡು ಬಂದಿದ್ದಕ್ಕೆ ಇಷ್ಟೆಲ್ಲ ಆಯ್ತು.. ಇನ್ನು ನಾನಿಲ್ಲಿ ಇರಬಾರದು ಎಂದು ಮನೆಯಿಂದ ಹೊರ ಹೋಗಿದ್ದಾಳೆ.
ಮರುದಿನ ಖುಷಿಯಲ್ಲಿ ಸೀತಾ ಮತ್ತು ರಾಮ್ ಮನೆಗೆ ಬಂದಿದ್ದಾರೆ. ಅಶೋಕ ಸುಬ್ಬಿ ಎಲ್ಲ ಕಾಣಿಸ್ತಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸೀತಾ ಟೆನ್ಶನ್ ಆಗಿದ್ದಾಳೆ. ನನ್ನ ಸುಬ್ಬಿ ನನಗೆ ಬೇಕು.. ಅವಳಿಗೆ ಏನೂ ಅನಾಹುತ ಆಗಬಾರದು ಎಂದು ಹೇಳಿದ್ದಾಳೆ. ಬಳಿಕ ಸುಬ್ಬಿಯನ್ನು ಹುಡುಕಲು ಬೀದಿ ಬೀದಿ ಅಲೆದಿದ್ದಾರೆ. ಆದ್ರೆ ಸುಬ್ಬಿ ಮಾತ್ರ ಸಿಕ್ಕಿಲ್ಲ. ಸದ್ಯ ಸುಬ್ಬಿ ಎಲ್ಲಿ ಹೋಗಿದ್ದಾಳೆ ಎಂಬುದು ಕುತೂಹಲ ಕೆರಳಿಸಿದೆ. ಅಲ್ಲದೆ ಅತ್ತ ಭಾರ್ಗವಿ ಇನ್ನೇನು ಮಾಡುತ್ತಾಳೆ ಎಂಬುದು ನೋಡಬೇಕಿದೆ.