India-Pak: ನಿಮ್ಮ ದೇಶಭಕ್ತಿಯನ್ನು ಹೆಚ್ಚಿಸುವ ಸಿನಿಮಾಗಳಿವು... ಇಲ್ಲಿದೆ ನೋಡಿ ಲಿಸ್ಟ್
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ (India_ Pak) ಹೆಚ್ಚಾಗಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಚಿತ್ರರಂಗದಲ್ಲಿ (Bollywood) ಭಾರತೀಯ ಸೇನೆ ಹಾಗೂ ದೇಶ ಭಕ್ತಿ ಕುರಿತಾದ ಹಲವು ಸಿನಿಮಾಗಳು ಬಂದಿವೆ. ಅದರಲ್ಲಿ ಕೆಲವು ನಿಜ ಜೀವನಾಧಾರಿತ ಚಿತ್ರಗಳಾಗಿದ್ದರೆ, ಇನ್ನೂ ಕೆಲವು ಯುದ್ಧದ ಸನ್ನಿವೇಶವನ್ನು ಕಟ್ಟಿ ಕೊಡುವ ಚಿತ್ರಗಳಾಗಿವೆ.


ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ (India_ Pak) ಹೆಚ್ಚಾಗಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಚಿತ್ರರಂಗದಲ್ಲಿ (Bollywood) ಭಾರತೀಯ ಸೇನೆ ಹಾಗೂ ದೇಶ ಭಕ್ತಿ ಕುರಿತಾದ ಹಲವು ಸಿನಿಮಾಗಳು ಬಂದಿವೆ. ಅದರಲ್ಲಿ ಕೆಲವು ನಿಜ ಜೀವನಾಧಾರಿತ ಚಿತ್ರಗಳಾಗಿದ್ದರೆ, ಇನ್ನೂ ಕೆಲವು ಯುದ್ಧದ ಸನ್ನಿವೇಶವನ್ನು ಕಟ್ಟಿ ಕೊಡುವ ಚಿತ್ರಗಳಾಗಿವೆ. ಪ್ರೇಕ್ಷಕ ಈ ಎಲ್ಲಾ ಸಿನಿಮಾಗಳಿಗೆ ಮೆಚ್ಚುಗೆ ಸೂಚಿಸಿದ್ದಾನೆ. ಈ ವೀಕೆಂಡ್‌ನಲ್ಲಿ ಸೇನೆಗೆ ಸಂಬಂಧಿಸಿದ ಕೆಲವು ಸಿನಿಮಾಗಳನ್ನು ನೀವು ನೋಡಬೇಕೆಂದೆದಿದ್ದರೆ, ಇಲ್ಲಿದೆ ಮಾಹಿತಿ.
- ಬಾರ್ಡರ್ : ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. 1971ರ ಭಾರತ–ಪಾಕಿಸ್ತಾನ ನಡುವಿನ ಯುದ್ಧದಾಧಾರಿತ ಈ ಚಿತ್ರವು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದೆ. ಜೆ.ಪಿ. ದತ್ತಾ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿದಿಯೋಲ್, ಜ್ಯಾಕಿ ಶ್ರಾಫ್ ಮತ್ತು ಸುನೀಲ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ.
- ಹಿಂದುಸ್ತಾನ್ ಕಿ ಕಸಂ: ಜಿಯೋಹಾಟ್‌ಸ್ಟಾರ್‌ನಲ್ಲಿ ಇದು ಲಭ್ಯವಿದೆ. ಅಜಯ್ ದೇವ್ಗನ್ ಮನೀಷಾ ಕೊಯರಾಲಾ ಮತ್ತು ಅಮಿತಾಬ್ ಬಚ್ಚನ್ ಅಭಿನಯಿಸಿರುವ ಈ ಚಿತ್ರದಲ್ಲಿ ಗರ್ಭದಲ್ಲೇ ಬೇರೆಯಾದ ಜವಳಿ ಸಹೋದರರ ಕಥೆಯಿದೆ. ದೇಶಭಕ್ತಿ, ತ್ಯಾಗ ಮತ್ತು ನಿಷ್ಠೆಯ ವಿಷಯಗಳನ್ನು ಇಲ್ಲಿ ಕಾಣಬಹುದಾಗಿದೆ.
- ಗದರ್: ಏಕ್ ಪ್ರೇಮ್ ಕಥಾ – ಜೀ5 ನಲ್ಲಿ ದೊರಕುತ್ತದೆ. ಇದು ಕೂಡ ಸೇನೆಗೆ ಸಂಬಂಧಿಸಿದ ಚಿತ್ರವೇ ಆಗಿದೆ. ಈ ಚಿತ್ರದ ಹಾಡು ಮೇ ನಿಕಲಾ ಗಡಿ ಲೇಕೆ ಬಹಳ ಪ್ರಸಿದ್ದಿಯನ್ನು ಹೊಂದಿದೆ. ಸನ್ನಿಡಿಯೋಲ್ ಮತ್ತು ಅಮೀಷಾ ಪಟೇಲ್ ಅಭಿನಯದ ಈ ಪ್ರೇಮಕಥೆಯಲ್ಲಿ, ಖ್ಯಾತ ಹ್ಯಾಂಡ್ ಪಂಪ್ ದೃಶ್ಯ ಎಲ್ಲರ ನೆನಪಿನಲ್ಲಿದೆ. ಈ ಚಿತ್ರದ ಎರಡನೇ ಭಾಗ ‘ಗದರ್ 2’ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಯಿತು.
- ಎಲ್‌ಒಸಿ ಕಾರ್ಗಿಲ್ – ಪ್ರೈಮ್ ವಿಡಿಯೋದಲ್ಲಿ ಸಿಗುತ್ತದೆ. 1999ರ ಕಾರ್ಗಿಲ್ ಯುದ್ಧದ ಆಧಾರಿತ ಈ ಚಿತ್ರವು ಭಾರತೀಯ ಯೋಧರ ಧೈರ್ಯ ಮತ್ತು ತ್ಯಾಗವನ್ನು ತೋರಿಸುತ್ತದೆ. ಯುದ್ಧದ ಕುರಿತು ತಿಳಿದು ಕೊಳ್ಳುವ ಆಸಕ್ತಿಯಿದ್ದರೆ ಇದನ್ನು ಖಂಡಿತವಾಗಿ ನೋಡಲೇ ಬೇಕು.
- ಲಕ್ಷ್ಯ – ನೆಟ್‌ಫ್ಲಿಕ್ಸ್‌ನಲ್ಲಿ ಸಿಗುತ್ತದೆ. ಫರ್ಹಾನ್ ಅಖ್ತರ್ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಪ್ರೀತಿಜಿಂಟಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬೇಜವಾಬ್ದಾರಿ ಯುವಕನೊಬ್ಬ ಸೇನೆಗೆ ಸೇರಿ ಅಧಿಕಾರಿಯಾಗಿ ಯುದ್ಧದಲ್ಲಿ ಭಾಗವಹಿಸುವ ಕಥೆಯಿದು.
- ಅಬ್ ತುಮ್ಹಾರೆ ಹವಾಲೆ ವತನ್ ಸಾಥಿಯೋ – ಜೀ5, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಮತ್ತು ಬಾಬಿ ದಿಯೋಲ್ ಅಭಿನಯದ ಈ ದೇಶಭಕ್ತಿ ಚಿತ್ರದಲ್ಲಿ ಭಾವೋದ್ರೇಕ ಉಂಟುಮಾಡುವ ಮತ್ತು ಮನ ಮಿಡಿಯುವ ಕೆಲ ದೃಶ್ಯ ಸಂಭಾಷಣೆಗಳಿವೆ.
- ದಿ ಘಾಜಿ ಅಟ್ಯಾಕ್ – ನೆಟ್‌ಫ್ಲಿಕ್ಸ್ , 1971ರ ಯುದ್ಧದ ವೇಳೆ ಪಿಎನ್‌ಎಸ್ ಘಾಜಿ ಜಾಹಜಿನ ಮುಳುಗಡೆಯ ಕುರಿತ ಚಿತ್ರ ಇದಾಗಿದ್ದು ಕೇ ಕೇ ಮೆನನ್, ರಾಣಾ ದಗ್ಗುಬಾಟಿ ಮತ್ತು ತಾಪ್ಸಿ ಪನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
- ರಾಝಿ– ಪ್ರೈಮ್ ವಿಡಿಯೋ, ಆಲಿಯಾ ಭಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುವುದರ ಮೂಲಕ ಮಿಂಚಿದ್ದಾರೆ. ವಿಕ್ಕಿ ಕೌಶಲ್ ಮತ್ತು ಜೈದೀಪ್ ಅಹ್ಲಾವತ್ ಅದ್ಭುತವಾದ ಅಭಿನಯ ನೀಡಿದ್ದಾರೆ. ಭಾರತೀಯ ಹೆಣ್ಣು ಮಗಳೊಬ್ಬಳು ಪಾಕಿಸ್ತಾನದ ಸೇನಾಧಿಕಾರಿಯನ್ನು ಮದುವೆಯಾಗಿ ಗೂಢಾಚಾರದಲ್ಲಿ ಭಾಗವಹಿಸುತ್ತಾಳೆ. ತನ್ನ ತಂದೆಯ ಆಸೆಯಂತೆ ದೇಶಕ್ಕಾಗಿ ತನ್ನ ಸರ್ವಸ್ವನ್ನೇ ತ್ಯಾಗ ಮಾಡುತ್ತಾಳೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದ 4 ಏರ್ ಬೇಸ್ ಉಡೀಸ್, ಭಾರತೀಯ ಸೇನೆ ಸರ್ವ ಸನ್ನದ್ಧ; ಸುದ್ದಿಗೋಷ್ಠಿಯಲ್ಲಿ ಸೇನೆ ಮಾಹಿತಿ
- ಉರಿ: ದ ಸರ್ಜಿಕಲ್ ಸ್ಟ್ರೈಕ್ – ಜೀ5 ನಲ್ಲಿ ಆದಿತ್ಯ ಧರ್ ನಿರ್ದೇಶನದ 2016ರ ಉರಿ ಸರ್ಜಿಕಲ್ ಸ್ಟ್ರೈಕ್‌ನ ಆಧಾರಿತ ಚಿತ್ರ ಇದಾಗಿದ್ದು ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿಗೆ ಭಾರತ ಬಾಲಾಕೋಟ್ ಸೇರಿದಂತೆ ಹಲವು ಕಡೆ ಏರ್‌ಸ್ಟ್ರೈಕ್ ನಡೆಸಿತ್ತು. ಅದೇ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ದಾಳಿಯನ್ನು ನಡೆಸಲಾಗಿದೆ.
- ಶೇರ್‌ಷಾ – ಪ್ರೈಮ್ ವಿಡಿಯೋದಲ್ಲಿ ಲಭ್ಯ.
ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ವಿಕ್ರಮ್ ಬತ್ರಾ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನೋಡಿದವರ ಕಣ್ಣಂಚಲ್ಲಿ ನೀರು ಜಿನುಗುವುದಂತು ಸುಳ್ಳಲ್ಲ.