Bhagya Lakshmi Serial: ಪಾರ್ಕ್ನಲ್ಲಿ ತಾಂಡವ್ ಕಣ್ಣಿಗೆ ಬಿದ್ದ ಪೂಜಾ-ಕಿಶನ್: ಕಾದಿದೆ ದೊಡ್ಡ ಗಂಡಾಂತರ?
ದಾರಿಯಲ್ಲಿ ಪೂಜಾ ಹೋಗುತ್ತಿರುವಾಗ ಕಿಶನ್ ಬಂದು ಪೂಜಾ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಾನೆ. ರೋಡ್ನಲ್ಲಿ ಕಿಶನ್ ಹೀಗೆ ಹೇಳುತ್ತಿರುವಾಗ ಇದನ್ನು ತಾಂಡವ್ ಗಮನಿಸಿದ್ದಾನೆ. ಅರೇ.. ಇದು ಪೂಜಾ ಅಲ್ವಾ.. ಹೋ ಇದೆಲ್ಲ ನಡಿತಿದ್ಯಾ ಇವಾಗ.. ಒಳ್ಳೆ ಟೈಮ್ನಲ್ಲಿ ಸಿಕ್ಕಾಕಿಕೊಂಡಳು ಎಂದು ಹೇಳುತ್ತಾ ಅವರಿಬ್ಬರು ತಾಂಡವ್ ಫಾಲೋ ಮಾಡಿದ್ದಾನೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿ ಪೂಜಾಗೆ ಮದುವೆ ಮಾಡಲು ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧವೂ ಮುರಿದು ಹೋಯಿತು. ಇದಕ್ಕೆ ಕಾರಣವಾಗಿದ್ದು ತಾಂಡವ್. ಆರಂಭದಲ್ಲಿ ಹುಡುಗನ ಕಡೆಯವರಿಗೆ ಪೂಜಾ ಒಪ್ಪಿಗೆ ಆಗಿರುತ್ತಾರೆ. ಆದರೆ, ಇದೇವೇಳೆ ಅವರಿಗೆ ಭಾಗ್ಯಾಳ ವೈಯಕ್ತಿಕ ಜೀವನದ ವಿಷಯ ಗೊತ್ತಾಗಿದೆ. ತಾಂಡವ್ ಬಂದು ಎಲ್ಲ ವಿಚಾರ ಹೇಳಿ ಈ ಸಂಬಂಧವನ್ನು ಹಾಳು ಮಾಡಿದ್ದಾನೆ. ಗಂಡನಿಗೆ ತಾಳಿ ತೆಗೆದುಕೊಟ್ಟು ಬಂದವಳು ಎಂಬುದು ಹುಡುಗನ ಕಡೆಯವರಿಗೆ ತಿಳಿದಿದೆ.
ಗಂಡಿನ ಕಡೆಯವರು ಈ ಸಂಬಂಧ ನಮಗೆ ಬೇಡ ಎಂದು ಹೇಳುತ್ತಾರೆ. ಅಕ್ಕ ಹೀಗೆ ಇದ್ದಾಳೆ.. ಇನ್ನು ತಂಗಿ ಹೇಗೆ ಆಗುತ್ತಾಳೊ ಎಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ಪೂಜಾ, ನನ್ನ ಅಕ್ಕನಿಗೆ ಮರಿಯಾದೆ ಇರದೆ ಇರುವ ಜಾಗದಲ್ಲಿ ನನ್ನ ಚಪ್ಪಲಿ ಕೂಡ ಬಿಡಲ್ಲ ಎಂದು ಅವರನ್ನು ಗೆಟ್ ಲಾಸ್ಟ್ ಎಂದು ಅವರನ್ನು ಕಳಿಸುತ್ತಾಳೆ. ಇದಾದ ಬಳಿಕ ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಮಾತು ಕೊಡುತ್ತಾಳೆ.
ಆರೆ, ಮನೆಗೆ ಬಂದ ಗಂಡಿನ ಕಡೆಯವರು ರಿಜೆಕ್ಟ್ ಮಾಡಿದ್ದಕ್ಕೆ ಪೂಜಾ ಬೇಸರಗೊಂಡಿದ್ದಾಳೆ. ಇದೇ ದುಃಖದಲ್ಲಿ ಕೆಲಸಕ್ಕೆ ತೆರಳಿದ್ದಾಳೆ. ಆದರೆ, ಅಲ್ಲಿ ಪೂಜಾಗೆ ಆಘಾತ ಉಂಟಾಗಿದೆ. ಆಫೀಸ್ನ ಎಂಡಿ, ಕಾಲೇಜು ಸೀನಿಯರ್ ಕಿಶನ್ ಅವರು ಪೂಜಾಗೆ ಪ್ರಪೋಸ್ ಮಾಡಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನ ಮೇಲೆ ಲವ್ ಹೇಗಾಯಿತು ಅಂತ ಗೊತ್ತಿಲ್ಲ. ನಂಗೆ ನೀನಂದ್ರೆ ತುಂಬಾ ಇಷ್ಟ ಎಂದು ಪೂಜಾಳನ್ನು ತಬ್ಬಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಪೂಜಾ ಆಫೀಸ್ ತೊರೆದು ಹೊರಬಂದಿದ್ದಾಳೆ.
ಪೂಜಾ ಹೋದ ಬಳಿಕ ಕಿಶನ್ ತುಂಬಾ ಡಿಸ್ಟರ್ಬ್ ಆಗುತ್ತಾನೆ. ಇದನ್ನು ಗಮನಿಸಿದ ಆಫೀಸ್ನ ಸಹಾಯಕಿ ಪೂಜಾಗೆ ಕಾಲ್ ಮಾಡಿ ವಿಷಯ ಹೇಳುತ್ತಾಳೆ. ಆಗ ಕಿಶನ್ ಫೋನ್ ಕಿತ್ತುಕೊಂಡು ಇವಳು ನಿನ್ನ ಬಳಿ ಏನು ಹೇಳಿದ್ದಾಳೊ ಗೊತ್ತಿಲ್ಲ.. ಅದಕ್ಕಾಗಿ ನಾನು ಸ್ವಾರಿ ಕೇಳುತ್ತೇನೆ ಎಂದು ಹೇಳುತ್ತಾನೆ. ಇದರಿಂದ ಮತ್ತೆ ಕೋಪಗೊಂಡ ಪೂಜಾ, ಇದೆಲ್ಲ ನಿನ್ನ ಪ್ಲ್ಯಾನ್ ಅಂತ ನನ್ಗೆ ಗೊತ್ತು ಎಂದು ಕಾಳ್ ಕಟ್ ಮಾಡುತ್ತಾಳೆ.
ಇದೇ ವಿಚಾರಕ್ಕೆ ಇವರ ಮಧ್ಯೆ ಸಂಘರ್ಷ ಮುಂದುವರೆದಿದೆ. ಹೀಗಿರುವಾಗ ದಾರಿಯಲ್ಲಿ ಪೂಜಾ ಹೋಗುತ್ತಿರುವಾಗ ಕಿಶನ್ ಬಂದು ಪೂಜಾ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಾನೆ. ರೋಡ್ನಲ್ಲಿ ಕಿಶನ್ ಹೀಗೆ ಹೇಳುತ್ತಿರುವಾಗ ಇದನ್ನು ತಾಂಡವ್ ಗಮನಿಸಿದ್ದಾನೆ. ಅರೇ.. ಇದು ಪೂಜಾ ಅಲ್ವಾ.. ಹೋ ಇದೆಲ್ಲ ನಡಿತಿದ್ಯಾ ಇವಾಗ.. ಒಳ್ಳೆ ಟೈಮ್ನಲ್ಲಿ ಸಿಕ್ಕಾಕಿಕೊಂಡಳು ಎಂದು ಹೇಳುತ್ತಾ ಅವರಿಬ್ಬರು ತಾಂಡವ್ ಫಾಲೋ ಮಾಡಿದ್ದಾನೆ. ಪೂಜಾ-ಕಿಶನ್ ಇಬ್ಬರೂ ಮಾತನಾಡಲು ಅಲ್ಲೇ ಇದ್ದ ಪಾರ್ಕ್‌ಗೆ ತೆರಳಿದ್ದಾರೆ. ಇಲ್ಲಿ ಮದುವೆ ಆಗುವಂತೆ ಪೂಜಾಳನ್ನು ಕಿಶನ್ ಪೀಡಿಸುತ್ತಿದ್ದ. ಅದೇ ಸಮಯಕ್ಕೆ ಅಲ್ಲಿದ್ದ ಹಿರಿಯರು ಬಂದು, ನೀವು ಲವ್ ಮಾಡ್ತಿದೀರಾ. ನಿಮಗೆಲ್ಲ ಮದುವೆ ಮಾಡಿಸಿ ಬುದ್ಧಿ ಕಲಿಸುತ್ತೇವೆ ಎಂದು ಹೇಳಿದ್ದಾರೆ.
ಈ ಮಾತು ಕೇಳಿ ಕಿಶನ್‌ಗೂ, ಪೂಜಾಗೂ ಶಾಕ್ ಆಗಿದೆ. ಮತ್ತೊಂದೆಡೆ ತಾಂಡವ್ ಇದೆನ್ನೆಲ್ಲ ಗಮನಿಸಿ ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸದ್ಯ ಇವರ ಮದುವೆ ಇಲ್ಲೇ ಆಗುತ್ತ?, ಅತ್ತ ಭಾಗ್ಯ ಏನು ಮಾಡುತ್ತಾಳೆ?, ತಾಂಡವ್ ಭಾಗ್ಯ ಬಳಿ ಹೋಗಿ ಈ ಎಲ್ಲ ವಿಚಾರವನ್ನು ಹೇಳಿ ಮತ್ತೆ ಮರಿಯಾದೆ ತೆಗೆಯುವ ಕೆಲಸ ಮಾಡುತ್ತಾನ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.