ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naxal Encounter: ಭದ್ರತಾ ಪಡೆಗಳಿಂದ ದೊಡ್ಡ ಕಾರ್ಯಾಚರಣೆ; ಲೀಡರ್‌ ಸೇರಿ 3.33 ಕೋಟಿ ರೂ. ಬಹುಮಾನ ಹೊಂದಿದ್ದ 27 ನಕ್ಸಲರ ಹತ್ಯೆ

ಛತ್ತೀಸ್‌ಗಢದ (Chhattisgarh) ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲ್‌ರನ್ನು (Naxal Encounter) ಬೇಟೆಯಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ 27 ಮಾವೋವಾದಿಗಳಲ್ಲಿ 12 ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹತರಾದ 27 ಮಾವೋವಾದಿಗಳು 3.33 ಕೋಟಿ ರೂ. ಬಹುಮಾನ ಹೊಂದಿದ್ದರು ಎಂದು ತಿಳಿದು ಬಂದಿದೆ.

3.33 ಕೋಟಿ ರೂ. ಬಹುಮಾನ ಹೊಂದಿದ್ದ 27 ನಕ್ಸಲ್‌ರ ಹತ್ಯೆ

Profile Vishakha Bhat May 23, 2025 11:54 AM

ರಾಯ್ಪುರ್‌: ಛತ್ತೀಸ್‌ಗಢದ (Chhattisgarh) ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲ್‌ರನ್ನು (Naxal Encounter) ಬೇಟೆಯಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ 27 ಮಾವೋವಾದಿಗಳಲ್ಲಿ 12 ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹತರಾದ 27 ಮಾವೋವಾದಿಗಳು 3.33 ಕೋಟಿ ರೂ. ಬಹುಮಾನ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಿಜಾಪುರ-ನಾರಾಯಣಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯ ಪ್ರದೇಶ ಅಭುಜ್ಮದ್‌ನಲ್ಲಿ ಬುಧವಾರ ಈ ಎನ್‌ಕೌಂಟರ್‌ ನಡೆದಿದೆ. ನಿಷೇಧಿತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ದ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದಂತೆ 27 ಜನರನ್ನು ಹೊಡೆದುರುಳಿಸಲಾಗಿದೆ.

ಹತರಾದವರ ಪೈಕಿ ಬಸವರಾಜು ಈತ ಛತ್ತೀಸ್‌ಗಢದ ಮೋಸ್ಟ್‌ ವಾಂಟೆಂಡ್‌ ಮಾವೋವಾದಿ ಆಗಿದ್ದ. ಈತನ ಹತ್ಯೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಿ ತಿಳಿಸಿದ್ದಾರೆ. ಮಾವೋವಾದಿಗಳ ಕೇಂದ್ರ ಸಮಿತಿ ಮತ್ತು ಪಾಲಿಟ್‌ಬ್ಯೂರೋ ಸದಸ್ಯರು, ಹಿರಿಯ ಮಾಡ್ ವಿಭಾಗದ ಕಾರ್ಯಕರ್ತರು ಮತ್ತು ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಸದಸ್ಯರು ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಮೇ 18 ರಂದು ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿಯನ್ನು ಒಳಗೊಂಡ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಎನ್‌ಕೌಂಟರ್ ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳು, ನಾಲ್ಕು ಸೆಲ್ಫ್ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಆರು ಇನ್ಸಾಸ್ ರೈಫಲ್‌ಗಳು, ಒಂದು ಕಾರ್ಬೈನ್, ಆರು .303 ರೈಫಲ್‌ಗಳು, ಒಂದು ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್), ಎರಡು ರಾಕೆಟ್ ಲಾಂಚರ್‌ಗಳು, ಎರಡು 12 ಬೋರ್ ಗನ್‌ಗಳು, ಒಂದು ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಮಜಲ್ ಲೋಡಿಂಗ್ ಗನ್‌ಗಳು ಮತ್ತು ಸ್ಫೋಟಕಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Jyoti Malhotra: ಪಾಕಿಸ್ತಾನ ಪರ ಬೇಹುಗಾರಿಕೆ- ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪೊಲೀಸ್ ಕಸ್ಟಡಿ 4 ದಿನಗಳವರೆಗೆ ವಿಸ್ತರಣೆ

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಕ್ಸಲ್‌ರನ್ನು ಬೇಟೆಯಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ 27 ಮಾವೋವಾದಿಗಳಲ್ಲಿ 12 ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹತರಾದ 27 ಮಾವೋವಾದಿಗಳು 3.33 ಕೋಟಿ ರೂ. ಬಹುಮಾನ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಿಜಾಪುರ-ನಾರಾಯಣಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯ ಪ್ರದೇಶ ಅಭುಜ್ಮದ್‌ನಲ್ಲಿ ಬುಧವಾರ ಈ ಎನ್‌ಕೌಂಟರ್‌ ನಡೆದಿದೆ. ನಿಷೇಧಿತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ದ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದಂತೆ 27 ಜನರನ್ನು ಹೊಡೆದುರುಳಿಸಲಾಗಿದೆ.