ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Army: ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ? ಭಾರತಕ್ಕೆ ಎಷ್ಟನೇ ಸ್ಥಾನ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರವು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಮಣಿಸಲು ಕೆಲವೊಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಇದು ಎರಡು ರಾಷ್ಟ್ರಗಳ ನಡುವೆ ಯುದ್ಧ ಸನ್ನಿವೇಶವನ್ನೂ ಸೃಷ್ಟಿಸಿದೆ. ಒಂದು ವೇಳೆ ಯುದ್ಧವಾದರೆ ಭಾರತದ ಸೇನೆಯ ಮುಂದೆ ಪಾಕಿಸ್ತಾನ ಮಂಡಿಯೂರುವುದರಲ್ಲಿ ಸಂದೇಹವಿಲ್ಲ. ವಿಶ್ವವಾದ ಅತ್ಯಂತ ಹತ್ತು ಶಕ್ತಿಶಾಲಿ ಸೇನೆಯಲ್ಲಿ ಒಂದಾಗಿ ಭಾರತೀಯ ಸೇನೆಯು ಗುರುತಿಸಿಕೊಂಡಿದೆ. ಇದರಲ್ಲಿ ಭಾರತಕ್ಕೆ ಯಾವ ಸ್ಥಾನವಿದೆ. ಉಳಿದ ಒಂಬತ್ತು ದೇಶಗಳು ಯಾವುದು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ?

ಬೆಂಗಳೂರು: ವಿಶ್ವದ ಅತ್ಯಂತ ಶಕ್ತಿಶಾಲಿಯಾದ ಸೇನೆಯಲ್ಲಿ ಭಾರತದ ಸೈನ್ಯವೂ (Indian army) ಗುರುತಿಸಿಕೊಂಡಿದೆ. ಈ ಕುರಿತು ಗ್ಲೋಬಲ್ ಫೈರ್‌ಪವರ್ (Global Firepower) ನೀಡಿರುವ ಸೂಚ್ಯಂಕ 2025ರಲ್ಲಿ ವಿಶ್ವದ ಒಟ್ಟು 145 ದೇಶಗಳ ಮಿಲಿಟರಿ ಸಾಮರ್ಥ್ಯದ (military strength) ವಿವರವನ್ನು ನೀಡಲಾಗಿದೆ. ಇದರಲ್ಲಿ ಹೆಚ್ಚು ಶಕ್ತಿಶಾಲಿಯಾದ ಸೇನೆಯನ್ನು ಹೊಂದಿರುವ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸೇನೆಯೂ ಸೇರಿರುವುದು ಭಾರತದ ಮಿಲಿಟರಿ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿದಂತಾಗಿದೆ. ಮೊದಲ ಐದು ಸ್ಥಾನಗಳಲ್ಲಿ ಅಮೆರಿಕ, ರಷ್ಯಾ, ಚೀನಾ, ಭಾರತ ಮತ್ತು ದಕ್ಷಿಣ ಕೊರಿಯಾ ಸೇನೆಗಳು ತಮ್ಮ ಸ್ಥಾನಗಿಟ್ಟಿಸಿಕೊಂಡಿವೆ.

ಗ್ಲೋಬಲ್ ಫೈರ್‌ಪವರ್ 2025ರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಒಟ್ಟು 145 ದೇಶಗಳಲ್ಲಿ ಮಿಲಿಟರಿ ಬಲದ ಸಮಗ್ರ ಮೌಲ್ಯಮಾಪನವನ್ನು ನೀಡಲಾಗಿದೆ. ಈ ಸೂಚ್ಯಂಕವು ಮಿಲಿಟರಿ ಬಲದ ಸಂಖ್ಯೆಗಳನ್ನು ಮಾತ್ರವಲ್ಲದೆ ಇಂದಿನ ಜಾಗತಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಯತಂತ್ರ, ತಾಂತ್ರಿಕ, ಭೌಗೋಳಿಕ ಮತ್ತು ರಾಜಕೀಯ ಅಂಶಗಳು, ಮಿಲಿಟರಿ ಗಾತ್ರ, ಮಾನವಶಕ್ತಿ, ಉಪಕರಣಗಳು, ಆರ್ಥಿಕ ಸ್ಥಿರತೆ, ಯೋಜನಾ ಸಾಮರ್ಥ್ಯ ಮತ್ತು ಭೌಗೋಳಿಕ ಸೇರಿದಂತೆ 60ಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಲಾಗಿದೆ.

ಹತ್ತು ಶಕ್ತಿಶಾಲಿ ಸೈನ್ಯಗಳು

ವಿಶ್ವವಾದ ಅತ್ಯಂತ ಹತ್ತು ಶಕ್ತಿಶಾಲಿ ಸೇನೆಯಲ್ಲಿ ಒಂದಾಗಿ ಭಾರತೀಯ ಸೇನೆಯು ಗುರುತಿಸಿಕೊಂಡಿದೆ. ಇದರಲ್ಲಿ ಭಾರತಕ್ಕೆ ಯಾವ ಸ್ಥಾನವಿದೆ, ಉಳಿದ ಒಂಬತ್ತು ದೇಶಗಳು ಯಾವುದು ? ಇಲ್ಲಿದೆ ಮಾಹಿತಿ.

US

ಯುನೈಟೆಡ್ ಸ್ಟೇಟ್ಸ್

ಯುನೈಟೆಡ್ ಸ್ಟೇಟ್ಸ್ 2,127,500 ಸಿಬ್ಬಂದಿ, 13,043 ವಿಮಾನ ಮತ್ತು 4,640 ಟ್ಯಾಂಕ್‌ಗಳನ್ನು ಹೊಂದಿದ್ದು, ಮಿಲಿಟರಿ ಶಕ್ತಿಯಲ್ಲಿ ಜಗತ್ತನ ಹೆಚ್ಚು ಶಕ್ತಿ ಶಾಲಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ವಿಶ್ವದ ಅತಿದೊಡ್ಡ ರಕ್ಷಣಾ ಸಾಮರ್ಥ್ಯ ಹೊಂದಿರುವ ಯುಎಸ್ ನ ವಾಯು ಸೈನ್ಯವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಗರೋತ್ತರ ಮಿಲಿಟರಿ ನೆಲೆಗಳ ಮೂಲಕ ವಿಶಾಲ ಜಾಲವನ್ನು ಹೊಂದಿದೆ.

ರಷ್ಯಾ

3,570,000 ಮಿಲಿಟರಿ ಸಿಬ್ಬಂದಿ, 4,292 ವಿಮಾನ ಮತ್ತು 5,750 ಟ್ಯಾಂಕ್‌ಗಳೊಂದಿಗೆ ರಷ್ಯಾ ಎರಡನೇ ಸ್ಥಾನದಲ್ಲಿದೆ. ಟ್ಯಾಂಕ್ ಫ್ಲೀಟ್ ಮತ್ತು ಪರಮಾಣು ಶಸ್ತ್ರಾಗಾರಕ್ಕೆ ಹೆಸರುವಾಸಿಯಾಗಿರುವ ರಷ್ಯಾ ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ತನ್ನ ಬಲವನ್ನು ತೋರಿಸಿದೆ. ಅಮೆರಿಕಕ್ಕೆ ಸವಾಲು ಹಾಕುತ್ತಿರುವ ರಷ್ಯಾ ಚೀನಾದೊಂದಿಗೆ ತನ್ನ ಸ್ಥಾನವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಲೇ ಇದೆ.

ಚೀನಾ

ರಷ್ಯಾಕ್ಕೆ ಸಮಾನಾಗಿರುವ ಚೀನಾ, 3,170,000 ಸಿಬ್ಬಂದಿ, 3,309 ವಿಮಾನ ಮತ್ತು 6,800 ಟ್ಯಾಂಕ್‌ಗಳನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಟ್ಯಾಂಕ್ ಫ್ಲೀಟ್ ಆಗಿದೆ. ಚೀನಾದ ಮಿಲಿಟರಿ, ತಾಂತ್ರಿಕ ಪ್ರಗತಿ ಮತ್ತು ಆರ್ಥಿಕತೆಯು ವಿಶ್ವ ವೇದಿಕೆಯಲ್ಲಿ ಅದರ ಪ್ರಭಾವವನ್ನು ಬಲಪಡಿಸುತ್ತಿದೆ.

india

ಭಾರತ

ಗ್ಲೋಬಲ್ ಫೈರ್‌ಪವರ್ 2025ರ ಸೂಚ್ಯಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತವು 5,137,550 ಸಿಬ್ಬಂದಿ, 2,229 ವಿಮಾನ ಮತ್ತು 4,201 ಟ್ಯಾಂಕ್‌ಗಳ ಬೃಹತ್ ಸೇನೆಯನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಸಶಸ್ತ್ರ ಪಡೆಗಳಲ್ಲಿ ಒಂದಾದ ಭಾರತವು ಏಷ್ಯಾದಾದ್ಯಂತ ತನ್ನ ರಕ್ಷಣಾ ಉತ್ಪಾದನಾ ಸಾಮರ್ಥ್ಯ, ಪರಮಾಣು ಶಸ್ತ್ರಾಗಾರ ಮತ್ತು ಕಾರ್ಯತಂತ್ರವನ್ನು ವಿಸ್ತರಿಸುತ್ತಿದೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ 3,820,000 ಸಿಬ್ಬಂದಿ, 1,592 ವಿಮಾನಗಳು ಮತ್ತು 2,236 ಟ್ಯಾಂಕ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಬಲವಾದ ಮೈತ್ರಿಯಿಂದ ಅದರ ರಕ್ಷಣಾ ಸಾಮರ್ಥ್ಯಗಳು ಬಲಗೊಂಡಿವೆ. ಇದರ ಹೆಚ್ಚಿನ ಪಡೆಗಳನ್ನು ಉತ್ತರ ಕೊರಿಯಾದ ಗಡಿಯ ಬಳಿ ನಿಯೋಜಿಸಲಾಗಿದೆ.

ಯುನೈಟೆಡ್ ಕಿಂಗ್‌ಡಮ್

ಆರನೇ ಸ್ಥಾನದಲ್ಲಿರುವ ಯುಕೆ 1,108,860 ಸಿಬ್ಬಂದಿ, 631 ವಿಮಾನಗಳು ಮತ್ತು 227 ಟ್ಯಾಂಕ್‌ಗಳನ್ನು ಹೊಂದಿದೆ. ಯುಕೆಯು ವಿಶ್ವದಲ್ಲೇ ಪ್ರಬಲ ನೌಕಾಪಡೆ, ಪರಮಾಣು ಸಾಮರ್ಥ್ಯವನ್ನು ಹೊಂದಿರುವುದರಿಂದ ನ್ಯಾಟೋ ಒಳಗೆ ಅದರ ಪಾತ್ರವನ್ನು ಬಲಪಡಿಸಿದೆ.

ಫ್ರಾನ್ಸ್

3,76,000 ಮಿಲಿಟರಿ ಸಿಬ್ಬಂದಿ, 976 ವಿಮಾನಗಳು ಮತ್ತು 215 ಟ್ಯಾಂಕ್‌ಗಳೊಂದಿಗೆ ಏಳನೇ ಸ್ಥಾನದಲ್ಲಿರುವ ಫ್ರಾನ್ಸ್ ನ್ಯಾಟೋ ಮತ್ತು ಯುರೋಪಿಯನ್ ಭದ್ರತೆಯಲ್ಲಿ ನಿರ್ಣಾಯಕ ಶಕ್ತಿಯಾಗಿದೆ. ಇದು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಪರಮಾಣು ಶಸ್ತ್ರಾಗಾರವನ್ನು ಬೆಂಬಲಿಸುತ್ತಿದೆ.

japan

ಜಪಾನ್

ಎಂಟನೇ ಸ್ಥಾನದಲ್ಲಿರುವ ಜಪಾನ್ 328,150 ಸಿಬ್ಬಂದಿ, 1,443 ವಿಮಾನಗಳು ಮತ್ತು 521 ಟ್ಯಾಂಕ್‌ಗಳನ್ನು ಹೊಂದಿದೆ. ಅದರ ಮಿಲಿಟರಿ ಬಲದಲ್ಲಿ ಸುಧಾರಿತ ತಂತ್ರಜ್ಞಾನ, ಹೆಚ್ಚು ತರಬೇತಿ ಪಡೆದ ಪಡೆ ಮತ್ತು ಸಮರ್ಥ ನೌಕಾಪಡೆ ಮತ್ತು ವಾಯುಪಡೆ ಸೇರಿದೆ.

ಇದನ್ನೂ ಓದಿ: Indus Waters Treaty: ಸಿಂಧೂ ನದಿ ನೀರು ಒಪ್ಪಂದ ಮುರಿಯುವುದರಿಂದ ಪಾಕಿಸ್ತಾನಕ್ಕೆ ಬೀಳುತ್ತಾ ದೊಡ್ಡ ಹೊಡೆತ? ಇಲ್ಲಿದೆ ಡಿಟೇಲ್ಸ್‌?

ಟರ್ಕಿ

883,900 ಮಿಲಿಟರಿ ಸಿಬ್ಬಂದಿ, 1,083 ವಿಮಾನಗಳು ಮತ್ತು 2,238 ಟ್ಯಾಂಕ್‌ಗಳೊಂದಿಗೆ ಟರ್ಕಿ ಒಂಬತ್ತನೇ ಸ್ಥಾನದಲ್ಲಿದೆ. ಯುರೋಪಿಯನ್ ಮತ್ತು ಮಧ್ಯಪ್ರಾಚ್ಯ ಭಾಗಗಳಲ್ಲಿ ಇದು ಬಲವಾದ ಭೂ ಸೇನೆ ಮತ್ತು ವಾಯು ಸೇನೆ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ. ರಕ್ಷಣಾ ಕಾರ್ಯತಂತ್ರದಲ್ಲಿ ಅದರ ಪಾಲುದಾರಿಕೆಗಳು ಜಾಗತಿಕವಾಗಿ ಅದಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡುವಂತೆ ಮಾಡಿದೆ.

ಇಟಲಿ

ಇಟಲಿಯು ಹತ್ತನೇ ಸ್ಥಾನದಲ್ಲಿದ್ದು, 2,80,000 ಸಿಬ್ಬಂದಿ, 729 ವಿಮಾನಗಳು ಮತ್ತು 200 ಟ್ಯಾಂಕ್‌ಗಳನ್ನು ಹೊಂದಿದೆ. ಇಟಲಿಯು ಸಣ್ಣ ಪ್ರಮಾಣ ಸೇನಾ ಸಾಮರ್ಥ್ಯವನ್ನು ಹೊಂದಿದ್ದರೂ ಅದು ನ್ಯಾಟೋದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಯುರೋಪಿಯನ್ ಭದ್ರತೆಗೆ ಬೆಂಬಲಿಸಲು ವಾಯು ಮತ್ತು ನೌಕಾ ಶಕ್ತಿಯ ಮೇಲೆ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದೆ.