Pahalgam Terror Attack: NIAಗೆ ಸಿಕ್ತು ಮಹತ್ವದ ಸುಳಿವು; ದಕ್ಷಿಣ ಕಾಶ್ಮೀರದಲ್ಲಿಯೇ ಅಡಗಿದ್ದಾರಾ ಉಗ್ರರು?
ಏ. 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ತೀವೃಗೊಳಿಸಿವೆ. ದಾಳಿ ನಡೆದು ಒಂದು ವಾರಕ್ಕೂ ಹೆಚ್ಚು ಸಮಯ ಕಳೆದರೂ, ಘಟನೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ತನಿಖಾ ಅಧಿಕಾರಿಗಳಿಗೆ ಸೂಚನೆ ದೊರಕಿದೆ.


ಶ್ರೀನಗರ: ಏ. 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ (Pahalgam Terror Attack) ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ತೀವೃಗೊಳಿಸಿವೆ. ದಾಳಿ ನಡೆದು ಒಂದು ವಾರಕ್ಕೂ ಹೆಚ್ಚು ಸಮಯ ಕಳೆದರೂ, ಘಟನೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ತನಿಖಾ ಅಧಿಕಾರಿಗಳಿಗೆ ಸೂಚನೆ ದೊರಕಿದೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, 500 ಕ್ಕೂ ಅಧಿಕ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಸಮಯದಲ್ಲಿ ಬದುಕಿ ಬಂದವರನ್ನೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮೂಲಗಳು, ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಅಡಗಿಕೊಂಡಿರುವ ಸಾಧ್ಯತೆ ಇದೆ ಹೇಳಿದೆ. ದಾಳಿಕೋರರು ತಮ್ಮ ಆಹಾರ ಸಾಮಗ್ರಿ ಸೇರಿದಂತೆ ಉಪಯುಕ್ತವಾದ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯಬಹುದು ಎಂದು ಹೇಳಿವೆ. ಇದರಿಂದಾಗಿ ಬಾಹ್ಯ ಲಾಜಿಸ್ಟಿಕ್ ಬೆಂಬಲವಿಲ್ಲದೆ ದೂರದ ಭೂಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅವರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ವಿಚಾರಣೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ. ದಾಳಿಗೂ ಒಂದು ವಾರ ಮೊದಲು ಉಗ್ರರು ಬೈಸರ್ ಕಣಿವೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತ್ತು. ದಾಳಿಯ ಸಮಯದಲ್ಲಿ ಭಯೋತ್ಪಾದಕರು ಅತಿ ಸುರಕ್ಷಿತ ಸಂವಹನ ವ್ಯವಸ್ಥೆಯನ್ನು ಬಳಸುತ್ತಿದ್ದರು ಎಂದು ವರದಿಯಾಗಿದ್ದು, ಭದ್ರತಾ ಪ್ರಯತ್ನಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ಚೀನಾ ನಿರ್ಮಿತ ಸ್ಯಾಟ್‌ಲೈಟ್ ಬಳಕೆ ಮಾಡಿದ್ದು ಖಚಿತಗೊಂಡಿದೆ. ಇದು ಎನ್‌ಕ್ರಿಪ್ಟ್ ಮಾಡಿದ ಸಂವಹನವನ್ನು ಸುಗಮಗೊಳಿಸುತ್ತದೆ, ಇದರಿಂದಾಗಿ ಅಧಿಕಾರಿಗಳಿಗೆ ಅವರ ಸಂದೇಶಗಳನ್ನು ಟ್ರಾಕ್ ಮಾಡಲು ಕಷ್ಟವಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್ ದಾಳಿ ಮಾಸ್ಟರ್ ಮೈಂಡ್ ಹಫೀಜ್‌ಗೆ ಪಾಕ್ ಸರ್ಕಾರದಿಂದ ಬಿಗಿ ಭದ್ರತೆ; ಸೇನೆ, ಡ್ರೋನ್ ಕಣ್ಗಾವಲಲ್ಲಿರುವ ಉಗ್ರ
ಸದ್ಯ ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಕಾಶ್ಮೀರದ 87 ಪ್ರವಾಸಿ ತಾಣದಲ್ಲಿ 48 ತಾಣಗಳನ್ನು ಮುಚ್ಚಲಾಗಿದೆ. ದಾಳಿಗೆ ಸಹಕರಿದ ಉಗ್ರರ ಮನೆಗಳನ್ನು ಸೇನೆ ಧ್ವಂಸಗೊಳಿಸುತ್ತಿದೆ. ಗಡಿಯಲ್ಲಿ ಉದ್ವಗ್ನ ವಾತಾವರಣವಿದ್ದು, ಎರಡೂ ದೇಶಗಳು ಯುದ್ಧ ಸನ್ನದ್ಧವಾಗಿದೆ. ಭಾರತದ ಆಕ್ರೋಶಕ್ಕೆ ಬೆದರಿರುವ ಪಾಕ್ ದಾಳಿಯಲ್ಲಿ ತಮ್ಮ ಕೈವಾಡವಿಲ್ಲ, ತನಿಖೆ ನಡೆಸಲಿ ಎಂದು ಆಗ್ರಹಿಸುತ್ತಿದೆ.