ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟ್‌, ಪಂಜಾಬ್‌ ಕಿಂಗ್ಸ್‌ಗೆ ಭಾರಿ ಹಿನ್ನಡೆ!

Glenn Maxwell out of IPL 2025: ಬೆರಳು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಂಜಾಬ್‌ ಕಿಂಗ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ವೇಳೆ ಅವರು ಬೆರಳು ಗಾಯಕ್ಕೆ ತುತ್ತಾಗಿದ್ದರು.

2025ರ ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟ್‌!

2025ರ ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟ್‌.

Profile Ramesh Kote May 1, 2025 3:56 PM

ನವದೆಹಲಿ: ಬೆರಳು ಗಾಯಕ್ಕೆ ತುತ್ತಾಗಿರುವ ಪಂಜಾಬ್‌ ಕಿಂಗ್ಸ್‌ (Punjab Kings) ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಆ ಮೂಲಕ ಟೂರ್ನಿಯ ನಿರ್ಣಾಯಕ ಘಟ್ಟದಲ್ಲಿ ಸ್ಟಾರ್‌ ಆಲ್‌ರೌಂಡರ್‌ ಅನ್ನು ಕಳೆದುಕೊಂಡಿರುವ ಪಂಜಾಬ್‌ ಕಿಂಗ್ಸ್‌ಗೆ ಭಾರಿ ಹಿನ್ನಡೆಯಾಗಿದೆ. ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ದದ ಪಂದ್ಯಕ್ಕೆ ತರಬೇತಿ ಪಡೆಯುತ್ತಿದ್ದ ವೇಳೆ ಅವರು ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ, ಮಳೆಯ ಕಾರಣ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿತ್ತು. ಆ ಮೂಲಕ ಉಭಯ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಂಡಿದ್ದವು.

ಕೆಕೆಆರ್‌ ಎದುರು ಗಾಯದ ಹೊರತಾಗಿಯೂ ಆಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಈ ಸೀಸನ್‌ನಲ್ಲಿ ಅವರು ತಮ್ಮ ಕಳಪೆ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಹಳಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಇದೀಗ ಅವರು ಟೂರ್ನಿಯಿಂದ ಇನ್ನುಳಿದ ಹೊರ ಭಾಗದಿಂದ ಹೊರ ನಡೆದಿದ್ದಾರೆ.

"ಬೆರಳು ಗಾಯದ ಕಾರಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇನ್ನುಳಿದ ಭಾಗದಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೊರ ನಡೆದಿದ್ದಾರೆ. ಅವರು ಆದಷ್ಟು ಗುಣಮುಖರಾಗಲಿ ಎಂದು ಆಶಿಸುತ್ತೇವೆ," ಎಂದು ಸೋಶಿಯಲ್‌ ಮೀಡಿಯಾದಲ್ಲಿನ ಬೆಳವಣಿಗೆಗಳನ್ನು ಪಂಜಾಬ್‌ ಕಿಂಗ್ಸ್ ಸ್ಪಷ್ಟಪಡಿಸಿದೆ.

IPL 2025: ಗೆಲುವಿನ ಖುಷಿಯಲ್ಲಿದ್ದ ಅಯ್ಯರ್‌ಗೆ ಬಿತ್ತು 12 ಲಕ್ಷ ದಂಡದ ಬರೆ

ಪಂಜಾಬ್‌ ಕಿಂಗ್ಸ್‌ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಅವರು ಕೂಡ ಬೆಳವಣಿಗಳನ್ನು ಖಚಿತಪಡಿಸಿದ್ದಾರೆ. ಗಾಯದಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಟೂರ್ನಿಯಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಶೀಘ್ರದಲ್ಲಿಯೇ ಸೇರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌, "ಯಾವುದಾದರೂ ಒಂದು ಹಂತದಲ್ಲಿ ನಾವು ಮ್ಯಾಕ್ಸ್‌ವೆಲ್‌ಗೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುತ್ತೇವೆ. ನಮ್ಮ 12ನೇ ಪಂದ್ಯದ ಒಳಗಾಗಿ ನಾವು ಯಾರಾದರೂ ಒಬ್ಬರನ್ನು ಸೇರಿಸಿಕೊಳ್ಳಲಿದ್ದೇವೆ. ಇನ್ನು ನಮಗೆ ಕೆಲ ಪಂದ್ಯಗಳನ್ನು ಆಡುವುದು ಬಾಕಿ ಇದೆ. ಈಗ ತಂಡದಲ್ಲಿ ಇರುವ ಆಟಗಾರರ ಪೈಕಿ ಒಬ್ಬರನ್ನು ಮ್ಯಾಕ್ಸವೆಲ್‌ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತೇವೆ," ಎಂದು ಹೇಳಿದ್ದಾರೆ.

IPL 2025: ಚೆನ್ನೈ ಮಣಿಸಿ ಮುಂಬೈ ತಂಡದ ದಾಖಲೆ ಸರಿಗಟ್ಟಿದ ಪಂಜಾಬ್‌

ಇದೀಗ ತಂಡದಲ್ಲಿ ಅಝ್ಮತ್‌ವುಲ್ಲಾ ಒಮರ್ಜಾಯ್‌, ಆರೋನ್‌ ಹಾರ್ಡಿ ಹಾಗೂ ಕ್ಸಿವಿಯರ್‌ ಬಾರ್ಟಲೆಟ್‌ ಅವರ ಪೈಕಿ ಒಬ್ಬರನ್ನು ಮುಂದಿನ ಪಂದ್ಯಗಳಿಗೆ ಪರಿಗಣಿಸಲಾಗುತ್ತದೆ. ಅದರಲ್ಲಿಯೇ ವಿಶೇಷವಾಗಿ ಪಂಜಾಬ್‌ ಕಿಂಗ್ಸ್‌ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಧರ್ಮಶಾಲಾದಲ್ಲಿ ಆಡಲಿದೆ. ಮೇ 4 ರಂದು ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆಡಲಿದೆ.

"ನಾವು ಈ ಸಂದರ್ಭದಲ್ಲಿ ನಾವು ಸ್ವಲ್ಪ ತಾಳ್ಮೆಯಿಂದ ಇರಬೇಕಾದ ಅಗತ್ಯವಿದೆ. ಮ್ಯಾಕ್ಸ್‌ವೆಲ್‌ ಕೇವಲ ಎರಡು ದಿನಗಳು ಮಾತ್ರ, ಆದರೆ, ಲಾಕಿ ಫರ್ಗ್ಯೂಸನ್‌ ಎರಡು ಅಥವಾ ಮೂರು ವಾರಗಳು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ ನಡೆಯುತ್ತಿದೆ. ಸಾಕಷ್ಟು ಗುಣಗಟ್ಟದ ಆಟಗಾರರು ಅಲ್ಲಿದ್ದಾರೆ. ಹಾಗಾಗಿ ನಾವು ಸ್ವಲ್ಪ ತಾಳ್ಮೆಯನ್ನು ವಹಿಸಬೇಕಾಗಿದೆ. ಭಾರತೀಯ ಪ್ರತಿಭೆಗಳನ್ನು ನಾವು ನೋಡಬೇಕಾಗಿದೆ. ಧರ್ಮಶಾಲಾದಲ್ಲಿ ಆಡಿಸಲು ಇಬ್ಬರು ಆಟಗಾರರಿಗೆ ತರಬೇತಿಯನ್ನು ನೀಡಿದ್ದೇವೆ. ಇದನ್ನು ನೋಡಿಕೊಂಡು ನಂತರ ಬೇರೆ ಆಟಗಾರರನ್ನು ಸಹಿ ಮಾಡಿಸಿಕೊಳ್ಳಬೇಕಾ? ಅಥವಾ ಬೇಡವಾ? ಎಂಬುದನ್ನು ನೋಡುತ್ತೇವೆ," ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.