ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baba Ramdev: "ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ" ಬಾಬಾ ರಾಮ್ ದೇವ್‌ಗೆ ಮತ್ತೆ ಟಾಂಗ್‌ ಕೊಟ್ಟ ದೆಹಲಿ ಹೈಕೋರ್ಟ್‌

ಹಮ್ದರ್ದ್ ಅವರ ರೂಹ್ ಅಫ್ಜಾ ಶರಬತ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಬಂಧಪಟ್ಟಂತೆ ಆದೇಶವನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಎದುರಿಸಿದ ಯೋಗ ಗುರು ಬಾಬಾ ರಾಮ್‌ದೇವ್‌ ಅವರಿಗೆ ಹೈ ಕೋರ್ಟ್‌ ಮತ್ತೆ ಚಾಟಿ ಬೀಸಿದೆ. ರಾಮದೇವ್ ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.

ಶರ್ಬತ್ ಜಿಹಾದ್; ಬಾಬಾ ರಾಮ್ ದೇವ್‌ಗೆ ಮತ್ತೆ ಟಾಂಗ್‌ ಕೊಟ್ಟ ಹೈಕೋರ್ಟ್‌

Profile Vishakha Bhat May 1, 2025 4:39 PM

ನವದೆಹಲಿ: ಹಮ್ದರ್ದ್ ಅವರ ರೂಹ್ ಅಫ್ಜಾ ಶರಬತ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಬಂಧಪಟ್ಟಂತೆ ಆದೇಶವನ್ನು ಪಾಲಿಸದೆ ನ್ಯಾಯಾಂಗ ನಿಂದನೆ ಎದುರಿಸಿದ ಯೋಗ ಗುರು ಬಾಬಾ ರಾಮ್‌ದೇವ್‌ (Baba Ramdev) ಅವರಿಗೆ ಹೈ ಕೋರ್ಟ್‌ ಮತ್ತೆ ಚಾಟಿ ಬೀಸಿದೆ. ರಾಮದೇವ್ ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. ಕಳೆದ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಯೋಗ ಗುರುಗಳ ಅಫಿಡವಿಟ್ ಮತ್ತು ಮೇಲ್ಮೋಟಕ್ಕೆ ಈ ವೀಡಿಯೊ ನ್ಯಾಯಾಂಗ ನಿಂದನೆ ಎನಿಸಿದೆ. ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡುತ್ತೇನೆ, ಯೋಗಗುರುಗಳನ್ನು ಇಲ್ಲಿಗೆ ಕರೆಯುತ್ತೇವೆ ಎಂದು ನ್ಯಾಯಮೂರ್ತಿಗಳಾದ ಅಮಿತ್ ಬನ್ಸಾಲ್ ಹೇಳಿದ್ದಾರೆ.

'ರೂಹ್‌ ಅಫ್ಜಾ' ಹೆಸರಿನ ಪಾನೀಯವನ್ನು ಗುರಿಯಾಗಿಸಿಕೊಂಡು 'ಶರಬತ್‌ ಜಿಹಾದ್‌' ಪದವನ್ನು ಯೋಗ ಗುರು ಬಾಬಾ ರಾಮ್‌ದೇವ್‌ ಬಳಸಿದ್ದರು. ಇದರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಹಮ್‌ದರ್ದ್‌ ನ್ಯಾಷನಲ್‌ ಫೌಂಡೇಶನ್‌ ಇಂಡಿಯಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಮಿತ್‌ ಬನ್ಸಾಲ್‌ ಅವರು, ಈ ರೀತಿ ಹೇಳಿಕೆಗಳನ್ನು ನೀಡುವ ಮೊದಲು ಮಾತಿನ ಮೇಲೆ ನಿಗಾ ವಹಿಸಿಬೇಕು ಇಲ್ಲದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

ಈ ಸುದ್ದಿಯ್ನನೂ ಓದಿ: Supreme Court: "ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ"; ಪಹಲ್ಗಾಮ್ ದಾಳಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಪತಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್‌ ದೇವ್‌ ಅವರು ತನ್ನ ಗುಲಾಬ್ ಶರಬತ್ ಪ್ರಚಾರದ ವೇಳೆ, ಹಮ್‌ದರ್ದ್ ಅವರ ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡು ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ಆರೋಪಿಸಿದ್ದರು. ನಂತರ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಮದೇವ್, ತಾವು ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ ಎಂದಿದ್ದರು. ಹಮ್‌ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಈ ಪ್ರಕರಣವು ಅವಹೇಳನವನ್ನು ಮೀರಿದ್ದು, ಇದು ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ ಎಂದು ವಾದಿಸಿದ್ದರು. ನಂತರ ನ್ಯಾಯಾಲಯದ ಟೀಕೆಯ ನಂತರ, ಪತಂಜಲಿ ಸಂಸ್ಥೆ ವಿವಾದಾತ್ಮಕ ವೀಡಿಯೊಗಳನ್ನು ತೆಗೆದುಹಾಕಲು ಒಪ್ಪಿಕೊಂಡಿತ್ತು. ಇದೀಗ ರಾಮದೇವ್ ಅವರು ಮತ್ತೆ ಅಂತಹುದೇ ಹೇಳಿಕೆ ನೀಡಿದ್ದಾರೆ.