IPL 2025: ಜಂಪಿಂಗ್ ಕ್ಯಾಚ್ ಹಿಡಿದು ಮಿಂಚಿದ ಜೂನಿಯರ್ ಎಬಿಡಿ
ಡೆವಾಲ್ಡ್ ಬ್ರೆವಿಸ್ ಅವರನ್ನು ಜೂನಿಯರ್ ಎಬಿಡಿ ಎಂದೇ ಕರೆಯಲಾಗುತ್ತದೆ. ಇದಕ್ಕೆ ತಕ್ಕ ಪ್ರದರ್ಶನ ಕೂಡ ಅವರು ನೀಡಿತ್ತಿದ್ದಾರೆ. ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರಬಿದ್ದ ವೇಗಿ ಗುರ್ಜಪ್ನೀತ್ ಸಿಂಗ್ ಬದಲಿಗೆ ಚೆನ್ನೈ ತಂಡ ಸೇರಿದ್ದರು. 22 ವರ್ಷದ ಈ ಆಟಗಾರ ಒಟ್ಟಾರೆಯಾಗಿ 81 ಟಿ20 ಪಂದ್ಯಗಳನ್ನು ಆಡಿದ್ದಾರೆ.


ಚೆನ್ನೈ: ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಸೋಮವಾರ ನಡೆದಿದ್ದ ಐಪಿಎಲ್(IPP 2025) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ, ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್(Dewald Brevis) ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಅತ್ಯದ್ಭುತ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಕ್ಯಾಚ್ ಎಬಿಡಿ ವಿಲಿಯರ್ಸ್ ಅವರನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಶಶಾಂಕ್ ಸಿಂಗ್ ಅವರು ರವೀಂದ್ರ ಜಡೇಜಾ ಓವರ್‌ನಲ್ಲಿ ಮೊದಲೆರಡು ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಮೂರನೇ ಎಸೆತವನ್ನು ಕೂಡ ಸಿಕ್ಸರ್‌ನತ್ತ ಬಡಿದಟ್ಟಿದರು. ಆದರೆ ಯಾರೂ ನಿರೀಕ್ಷೆ ಮಾಡದಂತೆ ಬೌಂಡರಿ ಲೈನ್‌ನಲ್ಲಿದ್ದ ಡೆವಾಲ್ಡ್ ಬ್ರೇವಿಸ್ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಈ ಕ್ಯಾಚ್ ಕಂಡ ಪ್ರೇಕ್ಷಕರು ಒಂದು ಕ್ಷಣ ನಿಬ್ಬೆರಗಾದರು.
WHAT. A. CATCH 🔥
— IndianPremierLeague (@IPL) April 30, 2025
An absolute stunner from Dewald Brevis at the boundary😍
Excellent awareness from him 🫡
Updates ▶ https://t.co/eXWTTv7Xhd #TATAIPL | #CSKvPBKS | @ChennaiIPL pic.twitter.com/CjZgjdEvUQ
ಡೆವಾಲ್ಡ್ ಬ್ರೆವಿಸ್ ಅವರನ್ನು ಜೂನಿಯರ್ ಎಬಿಡಿ ಎಂದೇ ಕರೆಯಲಾಗುತ್ತದೆ. ಇದಕ್ಕೆ ತಕ್ಕ ಪ್ರದರ್ಶನ ಕೂಡ ಅವರು ನೀಡಿತ್ತಿದ್ದಾರೆ. ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರಬಿದ್ದ ವೇಗಿ ಗುರ್ಜಪ್ನೀತ್ ಸಿಂಗ್ ಬದಲಿಗೆ ಚೆನ್ನೈ ತಂಡ ಸೇರಿದ್ದರು. 22 ವರ್ಷದ ಈ ಆಟಗಾರ ಒಟ್ಟಾರೆಯಾಗಿ 81 ಟಿ20 ಪಂದ್ಯಗಳನ್ನು ಆಡಿದ್ದಾರೆ. 145 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಥಿರವಾಗಿ ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಎಸ್‌ಎ20ಯಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದರು.
ಇದನ್ನೂ ಓದಿ IPL 2025: ಚೆನ್ನೈ ಮಣಿಸಿ ಮುಂಬೈ ತಂಡದ ದಾಖಲೆ ಸರಿಗಟ್ಟಿದ ಪಂಜಾಬ್
ಬುಧವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 190 ರನ್ನಿಗೆ ಆಲೌಟ್ ಆಯಿತು. ಅದಕ್ಕುತ್ತರವಾಗಿ ಪಂಜಾಬ್ 19.4 ಓವರುಗಳಲ್ಲಿ 6ಕ್ಕೆ ,194 ರನ್ ಗಳಿಸಿ ಗೆಲುವು ದಾಖಲಿಸಿತು. ಸೋಲಿನಿಂದಿಗೆ ಚೆನ್ನೈ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಇನ್ನುಳಿದ 4 ಪಂದ್ಯವನ್ನು ಕೇಲವ ಔಪಚಾರಿಕ ದೃಷ್ಟಿಯಲ್ಲಿ ಆಡಬೇಕಿದೆ.