2025ರ ಐಪಿಎಲ್ ಟೂರ್ನಿಯಿಂದ ವಿಘ್ನೇಶ್ ಪುತ್ತೂರು ಔಟ್, ಮುಂಬೈ ಸೇರಿದ ರಘು ಶರ್ಮಾ!
Vignesh Puttur Ruled out of IPL 2025: ಮುಂಬೈ ಇಂಡಿಯನ್ಸ್ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು ಅವರು ಗಾಯದ ಕಾರಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಇವರ ಸ್ಥಾನವನ್ನು ರಘು ಶರ್ಮಾ ತುಂಬಿದ್ದಾರೆ.

ಐಪಿಎಲ್ ಟೂರ್ನಿಯಿಂದ ವಿಘ್ನೇಶ್ ಪುತ್ತೂರು ಔಟ್.

ನವದೆಹಲಿ: ತಮ್ಮ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿಯೇ ತಮ್ಮ ಸ್ಪಿನ್ ಮೋಡಿಯ ಮೂಲಕ ಗಮನ ಸೆಳೆದಿದ್ದ ವಿಘ್ನೇಶ್ ಪುತ್ತೂರು (Vignesh Puttur) ಗಾಯದ ಕಾರಣ ಹದಿನೆಂಟನೇ ಆವೃತ್ತಿಯ ಇನ್ನುಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. 31ರ ಪ್ರಾಯದ ರಘು ಶರ್ಮಾ (Raghu Sharma) ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಜಲಾಂದರ್ ಮೂಲದ ರಘು ಶರ್ಮಾ ಅವರು ಪಂಜಾಬ್ ಹಾಗೂ ಪಾಂಡಿಚೇರಿ ಪರ ದೇಶಿ ಕ್ರಿಕೆಟ್ ಆಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದು, 11 ಪಂದ್ಯಗಳಿಂದ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆಡಿದ 9 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರಘು ಶರ್ಮಾ ಅವರ ಪಾಲಿಗೆ ಇದು ಚೊಚ್ಚಲ ಐಪಿಎಲ್ ಟೂರ್ನಿಯಾಗಿದೆ. 30 ಲಕ್ಷ ರೂ. ಮೂಲ ಬೆಲೆಯ ಮೂಲಕ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
IPL 2025: ಐಪಿಎಲ್ ಟೂರ್ನಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಔಟ್, ಪಂಜಾಬ್ ಕಿಂಗ್ಸ್‌ಗೆ ಭಾರಿ ಹಿನ್ನಡೆ!
ಸಿಎಸ್‌ಕೆ ಎದುರು 3 ವಿಕೆಟ್ ಕಿತ್ತಿದ್ದ ವಿಘ್ನೇಶ್
ತಮ್ಮ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಸಂದರ್ಭದಲ್ಲಿಯೇ ವಿಘ್ನೇಶ್ ಪೂತ್ತೂರು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ಬಿದ್ದಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಮಾರ್ಚ್ ತಿಂಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ವಿಘ್ನೇಶ್ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅವರು ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಇಲ್ಲಿಯ ತನಕ ಆಡಿದ ಐದು ಪಂದ್ಯಗಳಲ್ಲಿ ಅವರು ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Get well soon, Vignesh 🥹
— Mumbai Indians (@mipaltan) May 1, 2025
Your #OneFamily wishes you a speedy recovery & we can't wait to see you back on the field soon 💙#MumbaiIndians #PlayLikeMumbai pic.twitter.com/Yej0ylKT6z
ಗಾಯಕ್ಕೆ ತುತ್ತಾದ ಹೊರತಾಗಿಯೂ ವಿಘ್ನೇಶ್ ಪುತ್ತೂರು ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿಯೇ ಉಳಿಯಲಿದ್ದಾರೆ. ಇಲ್ಲಿನ ಮೆಡಿಕಲ್ ಹಾಗೂ ಸ್ಟ್ರೆನ್ತ್ ಕಂಡೀಷನಿಂಗ್ ತಂಡ ಅವರನ್ನು ನೋಡಿಕೊಳ್ಳಲಿದ್ದಾರೆ. 22ನೇ ವಯಸ್ಸಿನ ಆಟಗಾರನ ಪುನಶ್ಚೇತನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಫ್ರಾಂಚೈಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ.
IPL 2025: ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಡಂ ಗಿಲ್‌ಕ್ರಿಸ್ಟ್!
ಸತತ ಐದು ಪಂದ್ಯಗಳನ್ನು ಗೆದ್ದಿರುವ ಮುಂಬೈ
ಮುಂಬೈ ಇಂಡಿಯನ್ಸ್ ಈ ಟೂರ್ನಿಯಲ್ಲಿ ಆರಂಭಿಕ ಪಂದ್ಯಗಳನ್ನು ಸೋಲು ಅನುಭವಿಸಿ ಹಿನ್ನಡೆ ಅನುಭವಿಸಿತ್ತು. ಆರಂಭಿಕ ಐದು ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯವನ್ನು ಸೋತಿತ್ತು. ಆದರೆ, ಮುಂದಿನ ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಿತ್ತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಆದರೆ, ಬುಧವಾರ ಸಿಎಸ್‌ಕೆ ವಿರುದ್ದ ಗೆದ್ದು ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನಕ್ಕೆ ಪ್ರವೇಶಿಸಿದ ಬಳಿಕ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನಕ್ಕೆ ಇಳಿದಿದೆ.