ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ವ್ಯವಸ್ಥೆಯನ್ನು ಯಾವತ್ತೂ ಸ್ವಚ್ಛವಾಗಿಡಿ

ಲೀ ಶಿಯೆನ್ ಲೂಂಗ್ ಅವರ ಮಾತುಗಳನ್ನು ಕೇಳೋಣ- “ಯಾವ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಸಣ್ಣ ಆಲೋಚನೆಯನ್ನೂ ಮಾಡಬಾರದು. ಭ್ರಷ್ಟಾಚಾರ ಮಾಡಿ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಎಂದೆಂದೂ ಹೇಳಬೇಡಿ. ಆ ನಿಟ್ಟಿನಲ್ಲಿ ಯೋಚಿಸಲೂಬೇಡಿ. ನಮ್ಮ ವ್ಯವಸ್ಥೆಯನ್ನು ಸ್ವಚ್ಛವಾಗಿಡಿ. ನಾವು ಅದೆಷ್ಟೇ ರಾಜಕಾರಣವನ್ನು ಮಾಡಲಿ, ಪ್ರಪ್ರಥಮವಾಗಿ ಅದು ಪ್ರಾಮಾಣಿಕತೆಯಿಂದ ಕೂಡಿರಬೇಕು.

ವ್ಯವಸ್ಥೆಯನ್ನು ಯಾವತ್ತೂ ಸ್ವಚ್ಛವಾಗಿಡಿ

ಸಂಪಾದಕರ ಸದ್ಯಶೋಧನೆ

ಸಿಂಗಾಪುರ ಪ್ರಧಾನಿ ಲೀ ಶಿಯೆನ್ ಲೂಂಗ್ ಅವರು ಮಾಡಿದ ಭಾಷಣದ ವಿಡಿಯೋವನ್ನು ಕೆಲ ತಿಂಗಳ ನೋಡುತ್ತಿದ್ದೆ. ಅದು ಕೇವಲ ನಾಲ್ಕು ನಿಮಿಷ ಎರಡು ಸೆಕೆಂಡುಗಳ ಭಾಷಣ. ಅದರಲ್ಲಿ ಒಂದು ನಿಮಿಷ ಅವರ ಮಾತುಗಳಿಗೆ ದೊರೆತ ಕರತಾಡನದ ಸದ್ದು. ಆ ಮೂರು ನಿಮಿಷಗಳಲ್ಲಿ ಅವರು ಸಿಂಗಾಪುರವೆಂಬ, ಒಂದು ಕಾಲಕ್ಕೆ ಮೀನುಗಾರರನ್ನೊಳಗೊಂಡ ಸಣ್ಣ ಹಳ್ಳಿಯಾಗಿದ್ದ, ಈಗ ಜಗತ್ತಿನ ಆಧುನಿಕ ದೇಶ ಎಂದು ಕರೆಯಿಸಿಕೊಂಡು ಉಳಿದೆಲ್ಲ ದೇಶಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿರುವ ಆ ಪುಟ್ಟ ದೇಶದ ಅಂತಃ ಸತ್ವವನ್ನು ಹೇಳಿದ್ದರು.

ಲೀ ಶಿಯೆನ್ ಲೂಂಗ್ ಅವರ ಮಾತುಗಳನ್ನು ಕೇಳೋಣ- “ಯಾವ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಸಣ್ಣ ಆಲೋಚನೆಯನ್ನೂ ಮಾಡಬಾರದು. ಭ್ರಷ್ಟಾಚಾರ ಮಾಡಿ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಎಂದೆಂದೂ ಹೇಳಬೇಡಿ. ಆ ನಿಟ್ಟಿನಲ್ಲಿ ಯೋಚಿಸಲೂಬೇಡಿ. ನಮ್ಮ ವ್ಯವಸ್ಥೆಯನ್ನು ಸ್ವಚ್ಛವಾಗಿಡಿ. ನಾವು ಅದೆಷ್ಟೇ ರಾಜಕಾರಣವನ್ನು ಮಾಡಲಿ, ಪ್ರಪ್ರಥಮವಾಗಿ ಅದು ಪ್ರಾಮಾಣಿಕತೆಯಿಂದ ಕೂಡಿರಬೇಕು.

ಇದನ್ನೂ ಓದಿ: Vishweshwar Bhat Column: ಕೊನೆಗೂ ಮಣಿದ ಜತ್ತಿ

ರಾಜಕಾರಣಿಗಳು ಪ್ರಾಮಾಣಿಕರಾಗಿರಬೇಕು ಮತ್ತು ಜನರೂ ಪ್ರಾಮಾಣಿಕರಾಗಿರಬೇಕು. ಒಂದು ವೇಳೆ ನೀವು ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣಿ ಆಗಿರದಿದ್ದರೆ, ನೀವು ಕಪ್ಪುಚುಕ್ಕೆ ಹೊಂದಿ ದ್ದರೆ, ದಯವಿಟ್ಟು ರಾಜಕಾರಣದಿಂದ, ಸಾರ್ವಜನಿಕ ಜೀವನದಿಂದ ದೂರ ಇರಿ. ಇಂದು ನಮಗೆ ಬೇಕಿರುವವರು ಪ್ರಾಮಾಣಿಕ ರಾಜಕಾರಣಿಗಳು ಮತ್ತು ಅಷ್ಟೇ ಪ್ರಾಮಾಣಿಕ ಮತದಾರರು.

ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುವವರು ಮತದಾರರೇ. ಹೀಗಾಗಿ ಇಬ್ಬರೂ ಶುಭ್ರ ವ್ಯಕ್ತಿತ್ವ ವನ್ನು ಹೊಂದಿದವರಾಗಿರಬೇಕು. ನಿನ್ನೆ ಇದೇ ವೇದಿಕೆಯಲ್ಲಿ ಡಾ.ಚೀ ಸೂನ್ ಜುಆನ್ ಅವರ ಭಾಷಣವನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಅವರು ತಮ್ಮ ಮಾತಿನಲ್ಲಿ, ‘ಮನುಷ್ಯ ನಿಗೆ ಖ್ಯಾತಿ, ಪ್ರಸಿದ್ಧಿಯೆಲ್ಲವೂ ಕ್ಷಣಿಕ. ಆದರೆ ಮರ್ಯಾದೆ, ಅಂತಸ್ತು ಮಾತ್ರ ಶಾಶ್ವತ’ ಎಂದು ಹೇಳಿದರು. ಅವರ ಮಾತುಗಳನ್ನು ನಾನು ನೂರಕ್ಕೆ ನೂರು ಒಪ್ಪುತ್ತೇನೆ.

ಹೌದು, ಮನುಷ್ಯನಿಗೆ ಮರ್ಯಾದೆ ಎನ್ನುವುದು ಶಾಶ್ವತ. ಅದು ಎಂದೂ ಬದಲಾಗುವುದಿಲ್ಲ. ಸಿಂಗಾಪುರದಲ್ಲಿ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸರಕಾರದ ತಪ್ಪು ನಡೆ ಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಸಿಪಿಐಬಿ ( Corrupt Practices Investigation Bureau) ಎಂಬ ಸಂಸ್ಥೆಯಿದೆ. ಅದು ನನಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತದೆ.

ಯಾರ ವಿರುದ್ಧವಾದರೂ ತನಿಖೆಗೆ ನಾನು ಸಿಪಿಐಬಿಗೆ ಅನುಮತಿ ನೀಡದಿದ್ದರೆ, ಅದು (ಸಿಪಿಐಬಿ) ನೇರವಾಗಿ ಅಧ್ಯಕ್ಷರಿಂದ ಅನುಮತಿ ಪಡೆಯುತ್ತದೆ. ಅಧ್ಯಕ್ಷರು ಸಮ್ಮತಿಸಿದರೆ, ಸಿಪಿಐಬಿ ಪ್ರಧಾನಿ
ಯವರ ವಿರುದ್ಧವೂ ತನಿಖೆ ಮಾಡಬಹುದಾಗಿದೆ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಆಡಿಟರ್ಸ್ ಜನರಲ್ ಆಫೀಸು ಇದೆ. ಸರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾ ಎಂಬುದನ್ನು ಅದು ಕಾಲಕಾಲಕ್ಕೆ ನಿಗಾವಹಿಸುತ್ತಲೇ ಇರುತ್ತದೆ.

ಇದು ನಮ್ಮ ಪಕ್ಷದ ಗುಣಮಟ್ಟವೂ ಹೌದು, ಪ್ರತಿಪಕ್ಷಗಳ ಗುಣಮಟ್ಟವೂ ಹೌದು. ಸಿಂಗಾಪುರಕ್ಕೂ, ಬೇರೆ ರಾಷ್ಟ್ರಗಳಿಗೂ ಇರುವ ವ್ಯತ್ಯಾಸವೇ ಇದು. ನಾವು ಈ ಮೌಲ್ಯವನ್ನು ಜಗತ್ತಿಗೆ ತೋರಿಸು ತ್ತಿದ್ದೇವೆ. ಸಿಂಗಾಪುರದ ಪ್ರಥಮ ಪ್ರಧಾನಿ ಲೀ ಕುಆನ್ ಯು ಅವರಿಗೆ ತೊಂಬತ್ತು ವರ್ಷ ತುಂಬಿ ದಾಗ ನಾವು ಸಂಸತ್ತಿನಲ್ಲಿ ಒಂದು ಸಂತೋಷಕೂಟವನ್ನು ಏರ್ಪಡಿಸಿದ್ದೆವು. ಅವರಿಗೆ ಭಾಷಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು ಬರ್ಥಡೇ ಕೇಕನ್ನು ಕತ್ತರಿಸಿ, ಅಲ್ಲಿ ಸೇರಿದವರನ್ನು ದ್ದೇಶಿಸಿ ಒಂದು ವಿಷಯವನ್ನು ಹೇಳಿದರು- ‘ನೆನಪಿಡಿ, ನೀವೆಲ್ಲ ಸೇರಿ ನಮ್ಮ ವ್ಯವಸ್ಥೆಯನ್ನು ಯಾವತ್ತೂ ಸ್ವಚ್ಛವಾಗಿಡಿ’. ನಾವು ಯಾವುದೇ ಉನ್ನತ ಹುದ್ದೆಯಲ್ಲಿರಲಿ ಅಥವಾ ಕೆಳ ಹಂತದಲ್ಲಿ ರಲಿ, ನಾವೆಲ್ಲರೂ ಈ ವ್ಯವಸ್ಥೆಯನ್ನು ಸ್ವಚ್ಛವಾಗಿಡಬೇಕು".