Pak - Turkey : ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಟರ್ಕಿ; ಯುದ್ಧನೌಕೆ, ಸೇನಾ ಸಾಮಗ್ರಿಗಳ ರವಾನೆ
ಭಾರತ ಹಾಗೂ ಪಾಕಿಸ್ತಾನದ ( India -Pak ) ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧೋನ್ಮಾದಲ್ಲಿದ್ದು, LOC ಯಲ್ಲಿ ಪಾಕ್ ಸೈನಿಕರು ಸತತ 11 ನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ನಡುವೆ ಪಾಕಿಸ್ತಾನಕ್ಕೆ ಬೆಂಬಲಿತವಾಗಿ ಚೀನಾ ಹಾಗೂ ಟರ್ಕಿ ದೇಶಗಳು ನಿಂತಿವೆ. ಈಗಾಗಲೇ ಟರ್ಕಿ ತನ್ನ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ.


ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧೋನ್ಮಾದಲ್ಲಿದ್ದು, LOC ಯಲ್ಲಿ ಪಾಕ್ ಸೈನಿಕರು ಸತತ 11 ನೇ ದಿನವೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ನಡುವೆ ಪಾಕಿಸ್ತಾನಕ್ಕೆ ಬೆಂಬಲಿತವಾಗಿ ಚೀನಾ ಹಾಗೂ ಟರ್ಕಿ ದೇಶಗಳು ನಿಂತಿವೆ. ಈಗಾಗಲೇ ಟರ್ಕಿ ತನ್ನ ಯುದ್ಧ (Pak -Turkey) ವಿಮಾನಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಟರ್ಕಿಯ ಸಿ -130 ಮಿಲಿಟರಿ ಸಾರಿಗೆ ವಿಮಾನಗಳು ಇಸ್ಲಾಮಾಬಾದ್‌ನಲ್ಲಿ ಲ್ಯಾಂಡ್ ಆಗಿದ್ದವು. ಇದೀಗ ಟರ್ಕಿಯ ನೌಕಾ ಹಡಗು ಟಿಸಿಜಿ ಬುಯುಕಾಡಾ ಪಾಕಿಸ್ತಾನವನ್ನು ತಲುಪಿದೆ. ಗಮನಾರ್ಹವಾಗಿ, ಪಾಕಿಸ್ತಾನವು ಇದನ್ನು 'ಸದ್ಭಾವನಾ ಭೇಟಿ' ಎಂದು ಕರೆದಿದೆ.
ಟರ್ಕಿಶ್ ನೌಕಾಪಡೆಯ ಹಡಗು ಟಿಸಿಜಿ ಬುಯುಕಾಡಾ ಬಂದರಿಗೆ ಸೌಹಾರ್ದ ಭೇಟಿಗಾಗಿ ಆಗಮಿಸಿದೆ. ಹಡಗನ್ನು ಟರ್ಕಿಶ್ ಮತ್ತು ಪಾಕಿಸ್ತಾನ ನೌಕಾಪಡೆಯ ಅಧಿಕಾರಿಗಳು ಸ್ವಾಗತಿಸಿದರು. . ಈ ಭೇಟಿಯು ಎರಡು ನೌಕಾಪಡೆಗಳ ನಡುವಿನ ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ" ಎಂದು ಪಾಕಿಸ್ತಾನಿ ನೌಕಾಪಡೆ ತಿಳಿಸಿದೆ. ಪಾಕಿಸ್ತಾನ ನೌಕಾಪಡೆ ಟರ್ಕಿಯ ನೌಕೆಯ ಚಿತ್ರವನ್ನು ಹಂಚಿಕೊಂಡಿದೆ. ಅದರಲ್ಲಿ ಜಂಟಿ ತಾಲೀಮವನ್ನು ನಡೆಸಿವೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಬೆಳವಣಿಗೆ ನಡಿದಿದೆ. ಸಿಂಧೂ ನದಿ ಒಪ್ಪಂದವನ್ನು ಕೈಬಿಟ್ಟಿರುವುದಕ್ಕೆ ಪಾಕಿಸ್ತಾನ ಭಾರತಕ್ಕೆ ಗೊಡ್ಡು ಬೆದರಿಕೆಯನ್ನು ಹಾಕಿದೆ. ಪಾಕಿಸ್ತಾನದ ರಕ್ಷಣಾ ಮಂತ್ರಿ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತವು ಸಿಂಧೂ ಒಪ್ಪಂದದಡಿಯಲ್ಲಿ ದೇಶದ ಪಾಲಿನ ನೀರನ್ನು ಬೇರೆಡೆಗೆ ತಿರುಗಿಸಲು ಬೇರೆ ಯಾವುದೇ ರೀತಿಯ ಪ್ರಯತ್ನವನ್ನು ಮಾಡಿದರೆ ಅದನ್ನು ಧ್ವಂಸಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಸಿಂಧೂ ಜಲ ಒಪ್ಪಂದ ರದ್ದಾದ ನಂತರ ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಹೇಳಿತ್ತು.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೊ ವೈರಲ್-ಏನಿದೆ ಅದ್ರಲ್ಲಿ?
ಮತ್ತೊಬ್ಬ ಪಾಕ್ ಸಚಿವ ನಮ್ಮ ಬಳಿ 130 ಅಣ್ವಸ್ತ್ರಗಳಿವೆ. ಅದನ್ನು ಭಾರತಕ್ಕಾಗಿಯೇ ಮೀಸಲಾಗಿಡಲಾಗಿದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿ ಛೀಮಾರಿ ಹಾಕಿಸಿಕೊಂಡಿದ್ದರು. ಭಾರತದ ರಾಜತಾಂತ್ರಿಕ ನಡೆಗೆ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ನೀರಿಗಾಗಿ ಅಂಗಲಾಚುತ್ತಿದೆ. 1960 ರಲ್ಲಿ ಸಹಿ ಹಾಕಲ್ಪಟ್ಟ ಮತ್ತು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಆರು ನದಿಗಳ ವಿಭಜನೆಯನ್ನು ನಿಯಂತ್ರಿಸುತ್ತದೆ. ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲುಜ್‌ಗಳ ನೀರು ಸರಬರಾಜು ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು ಇದರಿಂದ ಪಾಕಿಸ್ತಾನದ ಲಕ್ಷಾಂತರ ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ.