ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕ್ ಮೇಲೆ ಭಾರತ ದಾಳಿ: ಉಗ್ರರನ್ನು ಬಂದೂಕುಧಾರಿಗಳು ಎಂದಿದ್ದ ನ್ಯೂಯಾರ್ಕ್ ಟೈಮ್ಸ್ ಇದೀಗ ಉಲ್ಟಾ!

Operation Sindoor: ಭಾರತದ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆದ ಗಡಿಯಾಚೆಗಿನ ದಾಳಿಗಳ ಬಳಿಕ, ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ತನ್ನ ಸಂಪಾದಕೀಯ ಧೋರಣೆಯಲ್ಲಿ ಬದಲಾವಣೆ ತಂದಿದೆ. ಪಾಕಿಸ್ತಾನ ಮೂಲದ ದಾಳಿಕಾರರನ್ನು "ಭಯೋತ್ಪಾದಕರು" ಎಂದು ತನ್ನ ಮುಖ್ಯ ಶೀರ್ಷಿಕೆಯಲ್ಲಿ ಸಂಬೋಧಿಸಿದೆ. ತನ್ನ ವೆಬ್‌ಸೈಟ್‌ನ ಮುಖಪುಟದ ಶೀರ್ಷಿಕೆಯಲ್ಲಿ, "ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ಎರಡು ವಾರಗಳ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿತು" ಎಂದು ವರದಿಯಾಗಿದೆ.

ಬಂದೂಕುಧಾರಿಗಳನ್ನು ಭಯೋತ್ಪಾದಕರು ಎಂದು ಒಪ್ಪಿಕೊಂಡ ನ್ಯೂಯಾರ್ಕ್ ಟೈಮ್ಸ್

ನ್ಯೂಯಾರ್ಕ್ ಟೈಮ್ಸ್

Profile Sushmitha Jain May 7, 2025 11:37 AM

ನ್ಯೂಯಾರ್ಕ್: ಭಾರತದ ಆಪರೇಷನ್ ಸಿಂಧೂರ್ (Operation Sindoor) ಅಡಿಯಲ್ಲಿ ನಡೆದ ಗಡಿಯಾಚೆಗಿನ ದಾಳಿಗಳ ಬಳಿಕ, ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ (New York Times) ತನ್ನ ಸಂಪಾದಕೀಯ ಧೋರಣೆಯಲ್ಲಿ ಬದಲಾವಣೆ ತಂದಿದೆ. ಪಾಕಿಸ್ತಾನ (Pakistan) ಮೂಲದ ದಾಳಿಕಾರರನ್ನು "ಭಯೋತ್ಪಾದಕರು" (Terrorists) ಎಂದು ತನ್ನ ಮುಖ್ಯ ಶೀರ್ಷಿಕೆಯಲ್ಲಿ ಸಂಬೋಧಿಸಿದೆ. ತನ್ನ ವೆಬ್‌ಸೈಟ್‌ನ ಮುಖಪುಟದ ಶೀರ್ಷಿಕೆಯಲ್ಲಿ, "ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ಎರಡು ವಾರಗಳ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿತು" ಎಂದು ವರದಿಯಾಗಿದೆ. ಇದು NYTನ ಹಿಂದಿನ ವಿವಾದಾತ್ಮಕ ಪದ ಪ್ರಯೋಗಕ್ಕಿಂತ ಭಿನ್ನವಾಗಿದೆ.

ಈ ವರದಿಯು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ದಾಳಿಗೆ ಭಾರತದ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ಈ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. "ಪಾಕಿಸ್ತಾನ ಮೂಲದ ಭಯೋತ್ಪಾದಕರ ಬಗ್ಗೆ ಸಾಕ್ಷ್ಯಗಳನ್ನು ಕಲೆಹಾಕಿದ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿತು" ಎಂದು NYT ವರದಿಯಲ್ಲಿ ತಿಳಿಸಲಾಗಿದೆ.

ಭಾರತವು ತನ್ನ ಕಾರ್ಯಾಚರಣೆಯನ್ನು "ಸಂಯಮಿತ, ಜವಾಬ್ದಾರಿಯುತ ಮತ್ತು ಉದ್ವಿಗ್ನತೆಯನ್ನು ತಪ್ಪಿಸುವ ರೀತಿಯಲ್ಲಿ" ನಡೆಸಿತು ಎಂದು ವಿವರಿಸಿದೆ. "ಕೇವಲ ಗುರುತಿಸಲಾದ ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಲಾಯಿತು" ಎಂದು ಭಾರತದ ಹೇಳಿಕೆಯನ್ನು NYT ಉಲ್ಲೇಖಿಸಿದೆ. NYTನ ಶೀರ್ಷಿಕೆಯಲ್ಲಿ "ಭಯೋತ್ಪಾದಕ" ಎಂಬ ಪದದ ಬಳಕೆಯು ವ್ಯಾಪಕ ಗಮನ ಸೆಳೆದಿದೆ. ಕಳೆದ ತಿಂಗಳು NYTಗೆ ಎದುರಾದ ಟೀಕೆಗಳು ಇದಕ್ಕೆ ಕಾರಣವಾಗಿವೆ. ಪಹಲ್ಗಾಮ್ ದಾಳಿಯ ಆರೋಪಿಗಳನ್ನು "ಮಿಲಿಟಂಟ್‌ಗಳು" ಅಥವಾ "ಬಂದೂಕುಧಾರಿಗಳು" ಎಂದು ಕರೆದಿದ್ದಕ್ಕಾಗಿ ಯುಎಸ್‌ನ ಹೌಸ್ ಫಾರಿನ್ ಅಫೇರ್ಸ್ ಕಮಿಟಿಯಂತಹ ಟೀಕಾಕಾರರು NYTನನ್ನು ತೀವ್ರವಾಗಿ ಖಂಡಿಸಿದ್ದರು.

ಈ ಸುದ್ದಿಯನ್ನು ಓದಿ: Operation Sindoor: ದಾಳಿಯ ಇಂಚಿಂಚೂ ಮಾಹಿತಿ ಪಡೆದ ಮೋದಿ; ಬೆಳಿಗ್ಗೆ 11 ಕ್ಕೆ ಹೈವೋಲ್ಟೇಜ್‌ ಮೀಟಿಂಗ್‌

ಈ ಬಗ್ಗೆ ಎಕ್ಸ್‌ನಲ್ಲಿ ಟೀಕಿಸಿದ್ದ ಕಮಿಟಿಯು NYTನ ಮೂಲ ಶೀರ್ಷಿಕೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು. “ಕಾಶ್ಮೀರದಲ್ಲಿ ಕನಿಷ್ಠ 24 ಪ್ರವಾಸಿಗರನ್ನು ಮಿಲಿಟಂಟ್‌ಗಳು ಗುಂಡಿಟ್ಟು ಕೊಂದರು” ಎಂಬ ಹೆಡ್‌ಲೈನ್‌ನಲ್ಲಿ ಮಿಲಿಟಂಟ್‌ಗಳು ಎಂಬ ಪದದ ಬದಲಿ ಕೆಂಪು ಅಕ್ಷರಗಳಲ್ಲಿ ಭಯೋತ್ಪಾದಕರು ಎಂದು ಬರೆದು ನಾನು ನಿಮ್ಮ ಹೆಡ್‌ಲೈನ್ ಸರಿಪಡಿಸಿದದೇವೆ ಇದು ಸರಳವಾಗಿ ಭಯೋತ್ಪಾದಕ ದಾಳಿಯಾಗಿದೆ. ಭಾರತವಾಗಲಿ, ಇಸ್ರೇಲ್ ಆಗಲಿ, ಭಯೋತ್ಪಾದನೆಗೆ ಸಂಬಂಧಿಸಿದಂತೆ NYT ವಾಸ್ತವದಿಂದ ದೂರವಾಗಿದೆ" ಎಂದು ಟೀಕಿಸಲಾಗಿತ್ತು.

NYT ತನ್ನ ವರದಿಯಲ್ಲಿ ಭಯೋತ್ಪಾದಕರನ್ನು "ಮಿಲಿಟಂಟ್‌ಗಳು" ಮತ್ತು "ಬಂದೂಕುಧಾರಿಗಳು" ಎಂದು ಉಲ್ಲೇಖಿಸಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಗುಂಡಿನ ದಾಳಿಯನ್ನು “ಈ ಪ್ರದೇಶದಲ್ಲಿ ನಾಗರಿಕರ ವಿರುದ್ಧದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ" ಎಂದು ಕರೆದಿದ್ದಾರೆ ಮತ್ತು ಆರೋಪಿಗಳನ್ನು ಶಿಕ್ಷಿಸುವ ಶಪಥ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.