Star Kids: ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಿವುಡ್ 'ಸ್ಟಾರ್' ಕಿಡ್ಸ್ ಇವರೇ ನೋಡಿ
ಸ್ಟಾರ್ ನಟರ ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಇಂದು ಸಾಮಾನ್ಯ ವಾಗಿದೆ. ಇದೀಗ ಬಾಲಿವುಡ್ ನ ಕೆಲ ಸ್ಟಾರ್ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವ ಮೂಲಕ ಭವಿಷ್ಯದ ಸೆಲೆಬ್ರೆಟಿ ಗಳಾಗುವ ಸೂಚನೆ ಕೊಟ್ಟಿದ್ದಾರೆ. ಈ ವರ್ಷ ರಿಲೀಸ್ ಆಗಲಿರುವ ಅಂಕೋನ್ ಕಿ ಗುಸ್ತಾಖಿಯಾಂ ಸಿನಿಮಾದಲ್ಲಿ ಸಂಜಯ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್, ಬಾಲಿವುಡ್ ಬಾದಶಾ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಸೇರಿದಂತೆ ಒಂದಷ್ಟು ಸ್ಟಾರ್ ಕಿಡ್ಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ..

Star Kids Set To Debut In 2025


ನಟ ಸಂಜಯ್ ಕಪೂರ್ ಮತ್ತು ಮಾಹೀಪ್ ಕಪೂರ್ ಮಗಳು ಶನಾಯಾ ಕಪೂರ್ ‘ಆಂಖೋನ್ ಕಿ ಗುಸ್ತಾಖಿಯಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರದಲ್ಲಿ ವಿಕ್ರಾಂತ್ ಮಸ್ಸಿ ಅವರ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಜುಲೈ 11ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರೊಮ್ಯಾಂಟಿಕ್ ಡ್ರಾಮಾ ಕಥೆ ಇರುವ ಈ ಚಿತ್ರವನ್ನು ಸಂತೋಷ್ ಸಿಂಗ್ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಣ್ಣದ ಲೋಕಕ್ಕೆ ಯಾವಾಗ ಕಾಲಿ ಡುತ್ತಾರೆ ಎಂಬ ಕುತೂಹಲ ಸಾಕಷ್ಟು ಜನರಲ್ಲಿ ಇತ್ತು. ಆದರೆ ನಟನೆಯಿಂದ ದೂರ ಉಳಿದಿರುವ ಆರ್ಯನ್ ಖಾನ್ ಸದ್ಯ ನಿರ್ದೇಶಕರಾಗುತ್ತಿದ್ದಾರೆ. ಅವರ ಮೊದಲ ವೆಬ್ಸಿರೀಸ್ ಅವರ ಕುಟುಂಬದ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮೂಲಕ ನಿರ್ಮಾಣವಾಗುತ್ತಿದೆ.

ನಟ ಚಂಕಿ ಪಾಂಡೆಯ ಸೋದರಳಿಯ ಅಹಾನ್ ಪಾಂಡೆ ಮುಂದಿನ ಮತ್ತೊಬ್ಬ ಬಿ-ಟೌನ್ ನಟ ನಾಗಲಿದ್ದಾರೆ. ಈಗಾಗಲೇ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ನಟಿಯಾಗಿ ಗುರುತಿಸಿ ಕೊಂಡಿದ್ದಾರೆ. ಇದೀಗ ಆಹಾನ್ ಪಾಂಡೆ, 2025ರಲ್ಲಿ ಸಯ್ಯಾರಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.ಪ್ರಸಿದ್ಧ ನಿರ್ದೇಶಕ ಮೋಹಿತ್ ಸುರಿ ನಿರ್ದೇಶನದ ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿದೆ. ರೊಮ್ಯಾನ್ಸ್ ಆ್ಯಕ್ಷನ್ ಇರುವ ಈ ಚಿತ್ರ ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಪ್ರಸಿದ್ಧಿ ಪಡೆದಿದೆ.

ಅನಿತಾ ಪಡ್ಡಾ ಸಯ್ಯಾರಾ ಚಿತ್ರದಲ್ಲಿ ಆಹಾನ್ ಪಾಂಡೆ ಅವರ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ರೆವತಿ ನಿರ್ದೇಶನದ "ಸಲಾಂ ವೆಂಕಿ" ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು .

ಸ್ಟಾರ್ ಕಿಡ್ಸ್ ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ, ರಾಜ್ವೀರ್ ಡಿಯೋಲ್, ಪಲಕ್ ತಿವಾರಿ ಮತ್ತು ಅಲಿಜೆ ಅಗ್ನಿಹೋತ್ರಿ ಈಗಾಗಲೇ ತಮ್ಮ ಸಿನಿ ಪಯಣ ಪ್ರಾರಂಭಿಸಿದ್ದಾರೆ. ಇದೀಗ ಮತ್ತೆ ಕೆಲವೊಂದು ಸ್ಟಾರ್ ಕಿಡ್ಸ್ ಪರದೆಯ ಮೇಲೆ ಮಿಂಚಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.