IPL 2025: ಅತ್ಯಂತ ವೇಗವಾಗಿ 5000 ಐಪಿಎಲ್ ರನ್ ಪೂರ್ಣಗೊಳಿಸಿದ ಕೆಎಲ್ ರಾಹುಲ್!
KL Rahul Scored 5000 IPL Runs: ಲಖನೌ ಸೂಪರ್ ಜಯಂಟ್ಸ್ ವಿರುದ್ದದ 2025 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಜೇಯ 57 ರನ್ಗಳನ್ನು ಕಲೆ ಹಾಕಿದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ 8 ವಿಕೆಟ್ಗಳ ಗೆಲುವಿಗೆ ನೆರವು ನೀಡಿದರು. ತಮ್ಮ ಈ ಇನಿಂಗ್ಸ್ ಮೂಲಕ ಅವರು ಐಪಿಎಲ್ ಟೂರ್ನಿಯಲ್ಲಿ ವೇಗವಾಗಿ 5000 ರನ್ಗಳನ್ನು ಪೂರ್ಣಗೊಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.



ಡೆಲ್ಲಿ ಕ್ಯಾಪಿಟಲ್ಸ್ಗೆ 8 ವಿಕೆಟ್ ಭರ್ಜರಿ
ಲಖನೌದ ಏಕನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 40ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಆರನೇ ಗೆಲುವು ದಾಖಲಿಸಿತು.

ಡೆಲ್ಲಿಗೆ 160 ರನ್ ನೀಡಿದ್ದ ಲಖನೌ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್, ಏಡೆನ್ ಮಾರ್ಕ್ರಮ್ ಅರ್ಧಶತಕದ ಬಲದಿಂದ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 159 ರನ್ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ 17.5 ಓವರ್ಗಳಿಗೆ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವು ಪಡೆಯಿತು.

ಕೆಎಲ್ ರಾಹುಲ್ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೇಸಿಂಗ್ನಲ್ಲಿ ಕೆಎಲ್ ರಾಹುಲ್ ಹಾಗೂ ಅಭಿಷೇಕ್ ಪೊರೆಲ್ ಅರ್ಧಶತಕಗಳನ್ನು ಸಿಡಿಸಿದರು. ಈ ಇನಿಂಗ್ಸ್ನಲ್ಲಿ ಆಂಕರ್ ಪಾತ್ರವನ್ನು ನಿರ್ವಹಿಸಿದ ಕೆಎಲ್ ರಾಹುಲ್, 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ57 ರನ್ ಸಿಡಿಸಿದರು.

ವೇಗವಾಗಿ 5000 ರನ್ ಪೂರ್ಣಗೊಳಿಸಿದ ರಾಹುಲ್
ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 5000 ರನ್ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಬರೆದಿದ್ದಾರೆ. ಐಪಿಎಲ್ ವೃತ್ತಿ ಜೀವನದ 130ನೇ ಇನಿಂಗ್ಸ್ನಲ್ಲಿ ಅವರು ಈ ಮೈಲುಗಲ್ಲು ತಲುಪಿದ್ದಾರೆ.

ಕೆಎಲ್ ರಾಹುಲ್ 8ನೇ ಬ್ಯಾಟರ್
ಐಪಿಎಲ್ ಟೂರ್ನಿಯಲ್ಲಿ 5000 ರನ್ಗಳನ್ನು ಪೂರ್ಣಗೊಳಿಸಿದ ಎಂಟನೇ ಬ್ಯಾಟ್ಸ್ಮನ್ ಕೆಎಲ್ ರಾಹುಲ್. ಇದಕ್ಕೂ ಮುನ್ನ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಎಂಎಸ್ ಧೋನಿ, ಶಿಖರ್ ಧವನ್ ಹಾಗೂ ಎಬಿ ಡಿವಿಲಿಯರ್ಸ್ ಈ ಸಾಧನೆ ಮಾಡಿದ ಇನ್ನುಳಿದ ಏಳು ಬ್ಯಾಟ್ಸ್ಮನ್ಗಳು.

ಭರ್ಜರಿ ಫಾರ್ಮ್ನಲ್ಲಿ ಕೆಎಲ್ ರಾಹುಲ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅವರು ಆಡಿದ 7 ಪಂದ್ಯಗಳಿಂದ 64.60ರ ಸರಾಸರಿಯಲ್ಲಿ 323 ರನ್ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ.