Nikki Tamboli: ಬಾಯ್ಫ್ರೆಂಡ್ ಜೊತೆ ಬಿಗ್ಬಾಸ್ ಬೆಡಗಿಯ ಹಾಟ್ ಫೋಟೋಶೂಟ್; ಪಡ್ಡೆ ಹುಡುಗರ ಹಾರ್ಟ್ಬೀಟ್ ಜಾಸ್ತಿ ಮಾಡಿದ ಫೋಟೋಗಳು ಇಲ್ಲಿವೆ
Nikki Tamboli: ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ‘ಬಿಗ್ ಬಾಸ್’ ಖ್ಯಾತಿಯ ನಿಕ್ಕಿ ತಂಬೋಲಿ ಇದೀಗ ಪ್ರಿಯಕರ ಅರ್ಬಾಜ್ ಪಟೇಲ್ ಜೊತೆ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದು, ಅವರ ಲವರ್ ಒಟ್ಟಿಗೆ ಮಾಡಿಸಿದ ಫೋಟೋಶೂಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಿಕ್ಕಿ ತಂಬೋಲಿ ಅವತಾರ ನೋಡಿ ‘ಬೆಂಕಿ ಲುಕ್’ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ನಿಕ್ಕಿ ತಂಬೋಲಿ - ಅರ್ಬಾಜ್ ಪಟೇಲ್


ಬಿಗ್ ಬಾಸ್ ಮರಾಠಿ ಸೀಸನ್ 5ರ ಜನಪ್ರಿಯ ಜೋಡಿ ನಿಕ್ಕಿ ತಂಬೋಲಿ ಮತ್ತು ಅರ್ಬಾಜ್ ಪಟೇಲ್ ತಮ್ಮ ರೋಮ್ಯಾಂಟಿಕ್ ಫೋಟೋಶೂಟ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ನಿಕ್ಕಿ ತಂಬೋಲಿ ಮತ್ತು ಅರ್ಬಾಜ್ ಪಟೇಲ್ ಅವರ ಆಕರ್ಷಕ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಣ್ಣು ಕುಕ್ಕುವ ಪೋಸ್ನಲ್ಲಿ ನಿಕ್ಕಿ ಮತ್ತು ಅರ್ಬಾಜ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು, ಈ ಫೋಟೋಗಳಲ್ಲಿನ ಅವರ ಕೆಮಿಸ್ಟ್ರಿ ಎಲ್ಲರ ಗಮನ ಸೆಳೆದಿದೆ.

ನಿಕ್ಕಿ ಕಪ್ಪು ಡ್ರೆಸ್ನಲ್ಲಿ ಸೊಗಸಾಗಿ ಕಾಣಿಸಿದರೆ, ಅರ್ಬಾಜ್ ಕಪ್ಪು ಶರ್ಟ್ನಲ್ಲಿ ಆಕರ್ಷಕವಾಗಿ ಕಂಗೊಳಿಸಿದರು. ಈ ಜೋಡಿಯ ಒಡನಾಟ ಅಭಿಮಾನಿಗಳಿಗೆ ಕಣ್ಣಿಗೆ ಹಬ್ಬವಾಗಿದೆ.

ನಿಕ್ಕಿ ತಂಬೋಲಿ ಮತ್ತು ಅರ್ಬಾಜ್ ಪಟೇಲ್ರ ಸಂಬಂಧ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಎಲ್ಲರ ಗಮನ ಸೆಳೆದಿತ್ತು. ಶೋನಲ್ಲಿ ಆರಂಭವಾದ ಈ ಪ್ರೇಮಕಥೆ ಇಂದಿಗೂ ಮುಂದುವರೆದಿದೆ. ಈ ಜೋಡಿ ಆಗಾಗ ನಗರದಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಒಬ್ಬರಿಗೊಬ್ಬರು ಸಾತ್ ನೀಡುವ ಮೂಲಕ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ನಿಕ್ಕಿ ತಾನು ಅರ್ಬಾಜ್ ಜೊತೆ ಡೇಟಿಂಗ್ನಲ್ಲಿರುವುದಾಗಿ ಖಚಿತಪಡಿಸಿದ್ದರು. ಕೆಲಸದ ವಿಷಯದಲ್ಲಿ, ನಿಕ್ಕಿ ಇತ್ತೀಚೆಗೆ ಸೋನಿ ಟಿವಿಯ ‘ಸೆಲೆಬ್ರಿಟಿ ಮಾಸ್ಟರ್ಶೆಫ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.