ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕಿಶನ್​ನ ಹುಡುಕಿಕೊಂಡು ಜಿಮ್​ಗೆ ಬಂದ ಕುಸುಮಾ: ಪ್ಲ್ಯಾನ್ ವರ್ಕ್ ಆಗುತ್ತಾ?

ಭಾಗ್ಯ ಹಾಗೂ ಕುಸುಮಾ ಅವರು ಪೂಜಾ ಪಾರ್ಕ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಯಾರು ಆತ ಒಳ್ಳೆಯವನ ಅಥವಾ ಕೆಟ್ಟವನ, ಪೂಜಾಳಿಗೆ ಸರಿಯಾದ ಜೋಡಿಯ ಎಂಬುದನ್ನು ತಿಳಿಯಲು ಇನ್ವೆಸ್ಟಿಗೇಷನ್ ಶುರುಮಾಡಿದ್ದಾರೆ. ಇದಕ್ಕಾಗಿ ಸ್ವತಃ ಕುಸುಮಾ ಅವರೇ ಅಖಾಡಕ್ಕೆ ಇಳಿದಿದ್ದಾರೆ.

ಕಿಶನ್​ನ ಹುಡುಕಿಕೊಂಡು ಜಿಮ್​ಗೆ ಬಂದ ಕುಸುಮಾ

Bhagya Lakshmi Serial

Profile Vinay Bhat May 14, 2025 12:13 PM

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯ ತನ್ನ ಸಹೋದರಿ ಪೂಜಾಳಿಗೆ ಒಳ್ಳೆಯ ಹುಡುಕುವುದಾಗಿ ದೃಢ ನಿಶ್ಚಯ ಮಾಡಿದ್ದಾಳೆ. ಅವಳ ಪ್ರಯತ್ನಗಳ ಹೊರತಾಗಿಯೂ ಈಗಾಗಲೇ ಬಂದ ಒಂದು ಸಂಬಂಧ ಮುರಿದುಹೋಗಿದೆ. ಏತನ್ಮಧ್ಯೆ, ಪೂಜಾ ಮದುವೆಯನ್ನು ತಪ್ಪಿಸಲು ತಾಂಡವ್ ಎಲ್ಲಿಲ್ಲದ ಪ್ರಯತ್ನ ಪಡುತ್ತಿದ್ದಾನೆ. ಈ ಮೂಲಕವಾದರೂ ಭಾಗ್ಯಾಗೆ ಸೋಲಿನ ರುಚಿ ತೋರಿಸಬೇಕು ಎಂಬುದು ಅವನ ಪ್ಲ್ಯಾನ್. ಪಾರ್ಕ್​ನಲ್ಲಿ ಕಿಶನ್ ಜೊತೆ ಪೂಜಾ ಮಾತನಾಡುತ್ತಿರುವುದನ್ನು ನೋಡಿದ ಬಳಿಕ ತಾಂಡವ್ ನೇರವಾಗಿ ಭಾಗ್ಯ ಮನೆಗೆ ಬಂದು ರಂಪಾಟ ಮಾಡಿದ್ದಾನೆ.

ಪೂಜಾ ನಿಮ್ಮ ಮನೆಯ ಮರಿಯಾದೆಯನ್ನು ಹರಾಜು ಹಾಕ್ತಾ ಇದ್ದಾಳೆ. ನೀವು ನೋಡಿದ್ರೆ ಪೂಜಾಗೆ ಮದುವೆ ಮಾಡಿಸಬೇಕೆಂದು ಪುರೋಹಿತರಿಗೆ, ಬ್ರೋಕರ್​ಗೆ ಕಾಲ್​ ಮೇಲೆ ಕಾಲ್ ಮಾಡ್ತಾ ಇದ್ದೀರ.. ಆದ್ರೆ ಅವಳು ಪಾರ್ಕ್​ನಲ್ಲಿ ಯಾರ ಜೊತೆನೋ ಸುತ್ತಾಡ್ತಾ ಇದ್ದಾಳೆ. ಯಾರಿಗೊತ್ತು ಭಾಗ್ಯನೇ ಪೂಜಾಳ ಬಳಿ ನಂಗೆ ಒಳ್ಳೆ ಸಂಬಂಧ ಹುಡುಕೋಕೆ ಆಗ್ತಾ ಇಲ್ಲ ಹೋಗಮ್ಮ ನೀನೇ ಯಾರ ಜೊತೆನಾದ್ರು ಸುತ್ತಾಡು ಅಂತ ಕಳಿಸಿರಬೇಕು. ನನ್ನ ಮಾತನ್ನ ತಡಿಯೋಕೆ ಬರ್ಬೇಡ, ಸಾಧ್ಯ ಆದ್ರೆ ನಿನ್ ತಂಗಿ ಯಾವನ್ ಜೊತೆನೋ ಸುತ್ತಾಡ್ತಾ ಇದ್ದಾಳೆ ಅಲ್ವಾ.. ಅವಳನ್ನು ತಡಿ ಎಂದು ಹೇಳಿದ್ದಾನೆ.

ಈ ಮಾತು ಕೇಳಿ ಭಾಗ್ಯ ಮನೆಯವರಿಗೆ ಆಘಾತ ಉಂಟಾಗಿದೆ. ಪೂಜಾ ಮನೆಗೆ ಬಂದ ಕೂಡಲೇ ಭಾಗ್ಯ ಅಮ್ಮ ಕಿರುಚಾಡಿ ಚೆನ್ನಾಗಿ ಬೈದಿದ್ದಾರೆ. ಬಳಿಕ ಪೂಜಾ ಭಾಗ್ಯ ಬಳಿ ಬಂದು, ಒಂದಂತು ನಿಜ ಅಕ್ಕ.. ನಾನು ಅಮ್ಮ ಹೇಳಿರೊ ಥರ ಏನೂ ಮಾಡಿಲ್ಲ.. ನಾನು ನಿನ್ನ ಮರಿಯಾದೆ ಅಥವಾ ಈ ಮನೆ ಮರಿಯಾದೆ ಹೋಗೋ ಥರ ಯಾವ ಕೆಲಸನೂ ಮಾಡಲ್ಲ, ನಿನ್ಗೆ ಪ್ರಾಮಿಸ್ ಮಾಡಿರೊ ಹಾಗೆ ನಾನು ನೀನು ತೋರಿಸಿದ ಹುಡುಗನನ್ನೇ ಮದುವೆ ಆಗೋದು ಎಂದು ಕಣ್ಣೀರಿಡುತ್ತಾಳೆ.

ಇದಾದ ಬಳಿಕ ಭಾಗ್ಯ ಹಾಗೂ ಕುಸುಮಾ ಅವರು ಪೂಜಾ ಪಾರ್ಕ್​ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಯಾರು ಆತ ಒಳ್ಳೆಯವನ ಅಥವಾ ಕೆಟ್ಟವನ, ಪೂಜಾಳಿಗೆ ಸರಿಯಾದ ಜೋಡಿಯ ಎಂಬುದನ್ನು ತಿಳಿಯಲು ಇನ್​ವೆಸ್ಟಿಗೇಷನ್ ಶುರುಮಾಡಿದ್ದಾರೆ. ಇದಕ್ಕಾಗಿ ಸ್ವತಃ ಕುಸುಮಾ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಭಾಗ್ಯ ಹಾಗೂ ಕುಸುಮಾ ಪ್ಲ್ಯಾನ್ ಮಾಡಿ ಆತನ ನಡವಳಿಕೆ ತಿಳಿಯಲು ಪ್ರಯತ್ನಿಸಿದ್ದಾರೆ.



ಇದಕ್ಕೊಂದು ಮಾಸ್ಟರ್ ಪ್ಲ್ಯಾನ್ ಮಾಡಿರುವ ಕುಸುಮಾ, ಕಿಶನ್ ನಡೆಸುತ್ತಿರುವ ಜಿಮ್​ಗೆ ತೆರಳಿದ್ದಾರೆ. ಇಲ್ಲಿ ಕುಸುಮಾ ನಾನು ಜಿಮ್​ಗೆ ಸೇರಬೇಕೆ ಎಂದು ಹೇಳಿದ್ದಾರೆ. ಇದನ್ನ ಕೇಳಿ ಅಲ್ಲಿದ್ದ ಲೇಡಿ ಟ್ರೈನರ್​ಗೆ ಶಾಕ್ ಆಗಿದೆ. ಸದ್ಯ ಕುಸುಮಾ ಜಿಮ್​ಗೆ ಬಂದಿರುವ ವಿಚಾರ ಪೂಜಾಳಿಗೆ ಆಗಲಿ ಅಥವಾ ಕಿಶನ್​ಗೆ ತಿಳಿದಿಲ್ಲ. ಕಿಶನ್ ಕುಸುಮಾ ಮುಂದೆ ಹೇಗೆ ವರ್ತಿಸುತ್ತಾನೆ, ಈ ಪರೀಕ್ಷೆಯಲ್ಲಿ ಕಿಶನ್ ಪಾಸ್ ಆಗುತ್ತಾನ, ಪೂಜಾಳ ಮದುವೆ ಆಗುತ್ತ ಎಂಬುದೆಲ್ಲ ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Vasuki Vaibhav: ವಾಸುಕಿ- ಚಂದನಾ ಲವ್ ಮಾಡ್ತಾ ಇದ್ದಿದ್ದು ನಿಜಾನಾ?