Pakistani crew: ಕಚ್ಚಾ ತೈಲ ಹಡಗಿನಲ್ಲಿ 21 ಪಾಕ್ ಸಿಬ್ಬಂದಿ ಪತ್ತೆ; ಹೈಅಲರ್ಟ್ ಘೋಷಣೆ
ಹಡಗಿನಲ್ಲಿ ಸುಮಾರು 11,350 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲದ ಸರಕಿದ್ದು, ಇದನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿ ಹಡಗಿನಿಂದ ಹೊರಬರುವಂತಿಲ್ಲ ಎಂದು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಡಗಿನಲ್ಲಿ ಒಟ್ಟು 25 ಸಿಬ್ಬಂದಿಗಳಿದ್ದರು. ಈ ಪೈಕಿ 21 ಮಂದಿ ಪಾಕ್ ಪ್ರಜೆಗಳಾಗಿದ್ದಾರೆ.

ಪಾರಾದೀಪ್: ಬುಧವಾರ(ಮೇ 14) ಒಡಿಶಾದ ಪಾರಾದೀಪ್(Odisha's Paradip port) ಬಂದರಿಗೆ ಬಂದ ಕಚ್ಚಾ ತೈಲ ಹಡಗಿನಲ್ಲಿ 21 ಪಾಕಿಸ್ತಾನಿ ಸಿಬ್ಬಂದಿಗಳು(21 Pakistani crew ) ಪತ್ತೆಯಾಗಿದ್ದು ಸದ್ಯ ಬಂದರಿನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ದಕ್ಷಿಣ ಕೊರಿಯಾದಿಂದ ಸಿಂಗಪುರ ಮಾರ್ಗವಾಗಿ ಒಡಿಶಾ ಬಂದ ‘MT Siren II’ ಹಡಗು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ಗಾಗಿ ಕಚ್ಚಾತೈಲ ಹೊತ್ತು ತಂದಿತ್ತು. ಇದರಲ್ಲಿರುವ 21 ಸಿಬ್ಬಂದಿ ಪಾಕಿಸ್ತಾನ ಪ್ರಜೆಗಳು ಪತ್ತೆಯಾಗಿದ್ದಾರೆ. ಸದ್ಯ ಇವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಡಿಶಾ ಕರಾವಳಿ ಪೊಲೀಸ್ ಮತ್ತು ಸಿಐಎಸ್ಎಫ್ ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದು ಪಾರಾದೀಪ್‌ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಹಡಗಿನಲ್ಲಿ ಸುಮಾರು 11,350 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲದ ಸರಕಿದ್ದು, ಇದನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿ ಹಡಗಿನಿಂದ ಹೊರಬರುವಂತಿಲ್ಲ ಎಂದು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಡಗಿನಲ್ಲಿ ಒಟ್ಟು 25 ಸಿಬ್ಬಂದಿಗಳಿದ್ದರು. ಈ ಪೈಕಿ 21 ಮಂದಿ ಪಾಕ್ ಪ್ರಜೆಗಳಾಗಿದ್ದಾರೆ.
ಇದನ್ನೂ ಓದಿ Operation Sindoor: ಆಪರೇಶನ್ ಸಿಂದೂರ್ ವೇಳೆ ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಸೆರೆ
ಈಗಾಗಲೇ ಪ್ರಧಾನಿ ಮೋದಿ ಅವರು ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಪಾಕಿಗಳು ಕೈ ಹಾಕಿದರೆ ಸರ್ವನಾಶ ಖಚಿತ ಎಂದ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಪಂಜಾಬ್‌ನ ಅದಂಪುರದ ವಾಯುನೆಲೆಯಲ್ಲಿ ಮಂಗಳವಾರ ಯೋಧರನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಆಪರೇಷನ್ ಸಿಂದೂರ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಇದ್ದಂತೆ ಇದನ್ನೂ ದಾಟಿ ಬಂದರೆ ಸರ್ವನಾಶ ಖಚಿತ ಎಂದಿದ್ದರು.