team india test captain: ಭಾರತ ಟೆಸ್ಟ್ ತಂಡದ ನಾಯಕನ ಆಯ್ಕೆಗೆ ಬಿಸಿಸಿಐಗೆ ಶ್ರೀಕಾಂತ್ ಸಲಹೆ
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಕಾಂತ್, ಬಿಸಿಸಿಐ ಟೆಸ್ಟ್‌ಗೆ ನಾಯಕನ್ನು ಆಯ್ಕೆ ಮಾಡುವಾಗ ದೀರ್ಘಾವಧಿ ನಾಯಕತ್ವವನ್ನು ಗುರಿಯಾಗಿಸಿಕೊಂಡು ಆಯ್ಕೆ ಮಾಡಬೇಕು. ಶುಭಮನ್ ಗಿಲ್‌ಗೆ ನಾಯಕತ್ವ ನೀಡುವುದು ಅಷ್ಟು ಸೂಕ್ತವಲ್ಲ ಎಂದು ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಸಲಹೆ ನೀಡಿದ್ದಾರೆ.


ಚನ್ನೈ: ರೋಹಿತ್ ಶರ್ಮಾ(Rohith Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಭಾರತ ತಂಡ ಟೆಸ್ಟ್ ಕ್ರಿಕೆಟ್‌ಗೆ(team india test captain) ಹೊಸ ನಾಯಕನ್ನು ಆಯ್ಕೆ ಮಾಡುವುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(BCCI) ಕಠಿಣ ಸವಾಲಾಗಿದೆ. ಈ ಕುರಿತು ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್(Kris Srikkanth) ಉಪಯುಕ್ತ ಸಲಹೆಯೊಂದನ್ನು ನೀಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಕಾಂತ್, ಬಿಸಿಸಿಐ ಟೆಸ್ಟ್‌ಗೆ ನಾಯಕನ್ನು ಆಯ್ಕೆ ಮಾಡುವಾಗ ದೀರ್ಘಾವಧಿ ನಾಯಕತ್ವವನ್ನು ಗುರಿಯಾಗಿಸಿಕೊಂಡು ಆಯ್ಕೆ ಮಾಡಬೇಕು. ಶುಭಮನ್ ಗಿಲ್‌ಗೆ ನಾಯಕತ್ವ ನೀಡುವುದು ಅಷ್ಟು ಸೂಕ್ತವಲ್ಲ. ಕಾರಣ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ. ಹೀಗಿರುವಾಗ ನಾಯಕತ್ವ ನೀಡಿದರೆ ತಂಡಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಅನುಭವಿ ವೇಗಿ ಜಸ್‌ಪ್ರೀತ್ ಬುಮ್ರಾಗೆ ನಾಯಕತ್ವ ನೀಡಿದರೆ ಸೂಕ್ತʼ ಎಂದಿದ್ದಾರೆ.
'ಬುಮ್ರಾ ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಇಂಗ್ಲೆಂಡ್ ಸರಣಿಗೂ ಅವರೇ ನಾಯಕನಾದರೆ ಉತ್ತಮ. ಬುಮ್ರಾ ಅಲಭ್ಯರಾದ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್ ಎಲ್ ರಾಹುಲ್ ಅಥವಾ ರಿಷಭ್ ಪಂತ್ ತಂಡ ಮುನ್ನಡೆಸಬಹುದು' ಎಂದು ಶ್ರೀಕಾಂತ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ IPL 2025: ಕೆಕೆಆರ್ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಔಟ್?
ಬಿಸಿಸಿಐ ಒಲವು ಗಿಲ್ ಮೇಲೆ
ಯಾರು ಏನೇ ಸಲಹೆಯನ್ನು ನೀಡಿದರೂ ಕೂಡ ಬಿಸಿಸಿಐ ಶುಭಮನ್ ಗಿಲ್ ಅವರನ್ನು ಭಾರತದ ಮುಂದಿನ ನಾಯಕನನ್ನಾಗಿ ಮಾಡುವ ಒಲುವು ಹೊಂದಿದೆ. ಬುಮ್ರಾ ಮೇಲಿನ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬುಮ್ರಾಗೆ ಲೀಡರ್ಶಿಪ್ ಪಾತ್ರ ನೀಡಲು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ. ನಾಯಕ ಮತ್ತು ಉಪನಾಯಕ ಎಲ್ಲ 5 ಪಂದ್ಯಗಳಲ್ಲೂ ಆಡಬೇಕು ಎಂಬುದು ಬಿಸಿಸಿಐ ಬಯಕೆಯಾಗಿದೆ. ಆಸ್ಟ್ರೇಲಿಯಾ ಪ್ರವಾಸದ 5 ಪಂದ್ಯಗಳಲ್ಲಿ ಆಡಿದ್ದ ಬುಮ್ರಾ ಅತಿಯಾದ ಕ್ರಿಕೆಟ್‌ನಿಂದ ಗಾಯಗೊಂಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಿದ್ದರು.
ಮೇ 23 ಅಥವಾ 24ರಂದು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡ ಆಯ್ಕೆ ಕುರಿತು ಸಭೆ ನಡೆಸಲಿದೆ. ಇದೇ ವೇಳೆ ನೂತನ ನಾಯಕ ಹೆಸರನ್ನು ಕೂಡ ಪ್ರಕಟಿಸುವ ಸಾಧ್ಯತೆ ಇದೆ.