ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ceasefire Violations: ಭಾರತದ ಪ್ರತೀಕಾರ ತಡೆದುಕೊಳ್ಳುತ್ತಾ ಪಾಕಿಸ್ತಾನ? ಕದನ ವಿರಾಮ ಉಲ್ಲಂಘನೆಗೆ ಬೆಲೆ ತೆರಲಿದೆ ಪಾಕ್‌

ಕದನ ವಿರಾಮ ಒಪ್ಪಂದ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಅದನ್ನು ಮುರಿದು ಕತ್ತಲಾಗುತ್ತಿದ್ದಂತೆ ಭಾರತದ ಮೇಲೆ ದಾಳಿ ನಡೆಸಿದೆ. ಭಾರತೀಯ ಸೇನೆ ಈ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದು, ನುಗ್ಗಿ ಬಂದ ಡ್ರೋನ್‌ಗಳನ್ನು ಆಗಸದಲ್ಲೇ ಪುಡಿಗೈದಿದೆ. ಜತೆಗೆ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದೆ.

ಕದನ ವಿರಾಮ ಉಲ್ಲಂಘನೆಗೆ ಬೆಲೆ ತೆರಲಿದೆ ಪಾಕ್‌

Profile Ramesh B May 11, 2025 12:48 AM

ಹೊಸದಿಲ್ಲಿ: ಪಾಕಿಸ್ತಾನ ಕೊನೆಗೂ ತನ್ನ ನೀಚ ಬುದ್ಧಿಯನ್ನು ತೋರಿಸಿದೆ. ಮೇ 10ರಂದು ಭಾರತದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಂಡ ಅದು ಕೆಲವೇ ಕ್ಷಣಗಳಲ್ಲಿ ಅದನ್ನು ಮುರಿದು ಕತ್ತಲಾಗುತ್ತಿದ್ದಂತೆ ಭಾರತದ ಮೇಲೆ ದಾಳಿ ನಡೆಸಿದೆ (Ceasefire Violations). ಭಾರತೀಯ ಸೇನೆ ಈ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದು, ನುಗ್ಗಿ ಬಂದ ಡ್ರೋನ್‌ಗಳನ್ನು ಆಗಸದಲ್ಲೇ ಪುಡಿಗೈದಿದೆ. ಜತೆಗೆ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದೆ. ಪಾಕ್‌ನ ಕದನ ವಿರಾಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ (Vikram Misri), ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟದ ಸದ್ದು ಕೇಳಿದ್ದು, ಗಡಿ ರಾಜ್ಯಗಳಲ್ಲಿ ಪಾಕ್‌ ಡ್ರೋನ್‌ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಸೇನೆಗೆ ಪೂರ್ಣ ಅಧಿಕಾರ ಒದಗಿಸಲಾಗಿದ್ದು, ಇದೀಗ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಿದ್ದಾರೆ. ನುಗ್ಗಿ ಬಂದ ಡ್ರೋನ್‌ಗಳೆಲ್ಲವನ್ನೂ ಹೊಡೆದುರುಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: India Pakistan news live Update: ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮ: ವಿಕ್ರಮ್‌ ಮಿಸ್ರಿ

ವಿಕ್ರಮ್‌ ಮಿಸ್ರಿ ಹೇಳಿದ್ದೇನು?

ʼʼಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ಮೇ 10ರ ಸಂಜೆ ನಡೆದ ಕದನ ವಿರಾಮದ ಉಲ್ಲಂಘನೆ ಕಳೆದ ಕೆಲವು ಗಂಟೆಗಳಿಂದ ಪದೇ ಪದೆ ನಡೆಯುತ್ತಿದೆ. ಈ ಉಲ್ಲಂಘನೆಗಳಿಗೆ ಭಾರತೀಯ ಸಶಸ್ತ್ರ ಪಡೆಗಳು ಸಮರ್ಪಕ ಮತ್ತು ಸೂಕ್ತ ಪ್ರತಿಕ್ರಿಯೆಯನ್ನು ನೀಡುತ್ತಿವೆ ಮತ್ತು ಈ ಉಲ್ಲಂಘನೆಗಳನ್ನು ನಾವು ಬಹಳ ಗಂಭೀರವಾಗಿ ಗಮನಿಸುತ್ತೇವೆ. ಈ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಪಾಕಿಸ್ತಾನಕ್ಕೆ ಸೂಚನೆ ನೀಡಿದ್ದೇವೆ. ಸಶಸ್ತ್ರ ಪಡೆಗಳು ಗಡಿಯುದ್ದಕ್ಕೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿವೆ. ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುವ ಕದನ ವಿರಾಮ ಉಲ್ಲಂಘನೆಗಳ ಬಲವಾಗಿ ಎದುರಿಸಲು ಅವರಿಗೆ ಸೂಚನೆಗಳನ್ನು ನೀಡಲಾಗಿದೆʼʼ ಎಂದು ಹೇಳಿದ್ದಾರೆ.



ಸೆಂಟ್ರಿಗೆ ಗಾಯ

ಜಮ್ಮುವಿನ ನಾಗ್ರೋಟಾ ಸೇನಾ ಶಿಬಿರದ ಬಳಿ ಶನಿವಾರ ಶಂಕಿತ ವ್ಯಕ್ತಿಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಸೆಂಟ್ರಿಯೊಬ್ಬರು ಗಾಯಗೊಂಡಿದ್ದಾರೆ. ಈ ಮಧ್ಯೆ ‍‍ಶ್ರೀನಗರದಾದ್ಯಂತ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ.