ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Riyan Parag: ಸತತ 6 ಸಿಕ್ಸರ್‌ ಬಾರಿಸಿ ದಾಖಲೆ ಬರೆದ ರಿಯಾನ್‌ ಪರಾಗ್‌

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾರೂ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿಲ್ಲ. ಆದರೆ ಟಿ20ಯಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಸತತ 6 ಬಾಲ್‌ಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದೀಪೇಂದ್ರ ಸಿಂಗ್ ಐರಿ, ಕೀರನ್ ಪೊಲಾರ್ಡ್ ಮತ್ತು ಯುವರಾಜ್ ಸಿಂಗ್ ಈ ಸಾಧಕರು.

ಸತತ 6 ಸಿಕ್ಸರ್‌ ಬಾರಿಸಿ ದಾಖಲೆ ಬರೆದ ರಿಯಾನ್‌ ಪರಾಗ್‌

Profile Abhilash BC May 4, 2025 8:38 PM

ಕೋಲ್ಕತಾ: ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್‌(IPL 2025)ನ ಕೋಲ್ಕತ್ತಾ ನೈಟ್ ರೈಡರ್ಸ್(RR vs KKR) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್(Riyan Parag) ಆರು ಸಿಕ್ಸರ್‌ಗಳನ್ನು ಸಿಡಿಸಿ ಗಮನಸೆಳೆದರು. ಆದರೆ ಪಂದ್ಯ ಸೋತ ಕಾರಣ ಇವರ ಬ್ಯಾಟಿಂಗ್‌ ಪರಾಕ್ರಮ ವ್ಯರ್ಥವಾಯಿತು. ಕೆಕೆಆರ್‌ ಒಂದು ರನ್‌ ಅಂತರದ ರೋಚಕ ಗೆಲುವು ಸಾಧಿಸಿ ಪ್ಲೇ-ಆಪ್‌ ಆಸೆ ಜೀವಂತವಿರಿಸಿತು.

ಪಂದ್ಯದ 13ನೇ ಓವರ್‌ನಲ್ಲಿ ಮೊಯೀನ್ ಅಲಿ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿದ ಪರಾಗ್‌ ಆ ಬಳಿಕ ವರುಣ್‌ ಚಕ್ರವರ್ತಿ ಎಸೆದ ಓವರ್‌ನ ಎರಡನೇ ಎಸೆತದಲ್ಲಿಯೂ ಸಿಕ್ಸರ್‌ ಬಾರಿಸಿ ಸತತ 6 ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿ ಐಪಿಎಲ್‌ನಲ್ಲಿ ಸತತ 6 ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ ಎನಿಸಿದರು. ಇದು ಮಾತ್ರವಲ್ಲದೆ ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸಿದ 5ನೇ ಆಟಗಾರ ಎನಿಸಿಕೊಂಡರು. ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ ಮತ್ತು ರಿಂಕು ಸಿಂಗ್ ಉಳಿದ ಆಟಗಾರರು.



ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾರೂ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿಲ್ಲ. ಆದರೆ ಟಿ20ಯಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಸತತ 6 ಬಾಲ್‌ಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದೀಪೇಂದ್ರ ಸಿಂಗ್ ಐರಿ, ಕೀರನ್ ಪೊಲಾರ್ಡ್ ಮತ್ತು ಯುವರಾಜ್ ಸಿಂಗ್ ಈ ಸಾಧಕರು.

ಇದನ್ನೂ ಓದಿ IPL 2025: ವಿರಾಟ್‌ ಕೊಹ್ಲಿಗೆ ಧನ್ಯವಾದ ತಿಳಿಸಿದ ಯಶ್‌ ದಯಾಳ್‌ ತಂದೆ

ನೇಪಾಳದ ದೀಪೇಂದ್ರ ಸಿಂಗ್ ಐರಿ ಅವೃು ಕತಾರ್ ಮತ್ತು ಮಂಗೋಲಿಯಾ ವಿರುದ್ಧ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಈ ಸಾಧನೆ ಮಾಡಿದರೆ, ಪೊಲಾರ್ಡ್ 2021 ರಲ್ಲಿ ಶ್ರೀಲಂಕಾ ವಿರುದ್ಧ ಆಡುವಾಗ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಈ ಸಾಧನೆ ಮಾಡಿದ್ದರು. ಯುವರಾಜ್ ಸಿಂಗ್ 2007 ರ ಟಿ20 ವಿಶ್ವಕಪ್‌ನಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸಿಕ್ಸ್‌ ಸಿಕ್ಸರ್‌ ಬಾರಿಸಿದ್ದರು.

ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೆಕೆಆರ್‌ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಆಕ್ರಮಣಕಾರಿ ಬ್ಯಾಟಿಂಗ್‌ ನೆರವಿನಿಂದ 4 ವಿಕೆಟ್‌ಗೆ 206 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ವಿರೋಚಿತ ಸೋಲು ಕಂಡಿತು.