ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಒಂದು ಪಂದ್ಯ ಬಾಕಿ; ಆರ್‌ಸಿಬಿಗೆ ಟಾಪ್‌-2ನಲ್ಲಿ ಸ್ಥಾನ ಪಡೆಯುವ ಅವಕಾಶ ಇದೆಯೇ?

ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿದೆ. ಒಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ 19 ಅಂಕ ಆಗಲಿದೆ. ಆದರೂ ಕೂಡ ಅಗ್ರ-2ರಲ್ಲಿ ಸ್ಥಾನ ಖಚಿತವಾಗುದಿಲ್ಲ. ತಂಡಕ್ಕೆ ಮತ್ತೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ.

ಆರ್‌ಸಿಬಿಗೆ ಟಾಪ್‌-2ನಲ್ಲಿ ಸ್ಥಾನ ಪಡೆಯುವ ಅವಕಾಶ ಇದೆಯೇ?

Profile Abhilash BC May 24, 2025 8:27 AM

ಬೆಂಗಳೂರು: ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆರ್‌ಸಿಬಿ(RCB) ಕನಸಿಗೆ ಹಿನ್ನಡೆಯುಂಟಾಗಿದೆ. ಶುಕ್ರವಾರದ ಮಹತ್ವದ ಪಂದ್ಯದಲ್ಲಿ(IPL 2025) ಸನ್‌ರೈಸರ್ಸ್ ಹೈದರಾಬಾದ್(RCB vs SRH) ವಿರುದ್ಧ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಿತು. ಈ ಪಂದ್ಯ ಗೆದ್ದಿದ್ದರೆ ಅಗ್ರಸ್ಥಾನಕ್ಕೇರುವುದರ ಜೊತೆಗೆ, ಲೀಗ್ ಹಂತದ ಕೊನೆಗೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವಿತ್ತು.

ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿದೆ. ಒಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ 19 ಅಂಕ ಆಗಲಿದೆ. ಆದರೂ ಕೂಡ ಅಗ್ರ-2ರಲ್ಲಿ ಸ್ಥಾನ ಖಚಿತವಾಗುದಿಲ್ಲ. ತಂಡಕ್ಕೆ ಮತ್ತೆ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ. ಪಂಜಾಬ್‌ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋಲಬೇಕು. ಪಂಜಾಬ್‌ ಎರಡು ಪಂದ್ಯ ಗೆದ್ದರೆ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಗೆದ್ದರೂ ಮೂರನೇ ಸ್ಥಾನದಲ್ಲಿಯೇ ಉಳಿಯಲಿದೆ.

ಗುಜರಾತ್‌ ಸೋತರೂ ಅವಕಾಶ

ಇನ್ನೊಂದು ಲೆಕ್ಕಾಚಾರದ ಪ್ರಕಾರ ಸದ್ಯ 18 ಅಂಕ ಗಳಿಸಿ ಅಗ್ರಸ್ಥಾನಿಯಾಗಿರುವ ಗುಜರಾತ್‌ ಟೈಟಾನ್ಸ್‌ ತಂಡ ತನ್ನ ಕೊನೆಯ ಪಂದ್ಯದಲ್ಲಿ ಸೋತು, ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಗೆದ್ದರೆ 19 ಅಂಕದೊಂದಿಗೆ ಅಗ್ರ-2 ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ IPL 2025: ಆರ್‌ಸಿಬಿ ಎದುರು ಅಜೇಯ 94 ರನ್‌ ಸಿಡಿಸಿ ಫಾರ್ಮ್‌ಗೆ ಮರಳಿದ ಇಶಾನ್‌ ಕಿಶನ್‌!

ತವರಿನಾಚೆ ಮೊದಲ ಸೋಲು

ಹಾಲಿ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಾಚೆ ಮೊದಲ ಸೋಲನುಭವಿಸಿತು. ಇದಕ್ಕೂ ಮುನ್ನ ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢ, ನವದೆಹಲಿ ಕ್ರೀಡಾಂಗಣಗಳಲ್ಲಿ ಗೆಲುವು ಸಾಧಿಸಿತ್ತು.