IPL 2025: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಕನ್ನಡಿಗ ಅಭಿನವ್
Abhinav Manohar: ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಅಭಿನವ್ ಮನೋಹರ್ ಅವರು ಕ್ಲಾಸೆನ್ ಜತೆಗೂಡಿ ಉತ್ತಮ ಇನಿಂಗ್ಸ್ ಒಂದನ್ನು ಆಡಿದ್ದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 3 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 40 ರನ್ ಬಾರಿಸಿದ್ದರು.


ಹೈದರಾಬಾದ್: ಬುಧವಾರ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್(SRH vs MI) ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್(IPL 2025) 2025 ಪಂದ್ಯದಲ್ಲಿ ಹಿಟ್ ವಿಕೆಟ್ ಮೂಲಕ ಔಟಾದ ಕನ್ನಡಿಗ ಅಭಿನವ್ ಮನೋಹರ್(Abhinav Manohar), ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಹಿಟ್ ವಿಕೆಟ್(hit wicket) ಮೂಲಕ ವಿಕೆಟ್ ಕಳೆದುಕೊಂಡ 16 ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಮುಸಾವಿರ್ ಕೋಟೆ ಹಿಟ್ ವಿಕೆಟ್‌ನಲ್ಲಿ ಔಟಾದ ಮೊದಲ ಬ್ಯಾಟ್ಸ್‌ಮನ್. 2008 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತುವಿನಲ್ಲಿ ಅವರು ಹಿಟ್ ವಿಕೆಟ್ ಆಗಿದ್ದರು.
ಅಭಿನವ್ ಮನೋಹರ್‌ಗೂ ಮುನ್ನ ಕೊನೆಯ ಬಾರಿಗೆ ಹಿಟ್ ವಿಕೆಟ್ ಆಗಿದ್ದು ಬಿ. ಸಾಯಿ ಸುದರ್ಶನ್. 2022 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಅವರು ಹಿಟ್ ವಿಕೆಟ್ ಆಗಿ ಔಟಾಗಿದ್ದರು.
ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಅಭಿನವ್ ಮನೋಹರ್ ಅವರು ಕ್ಲಾಸೆನ್ ಜತೆಗೂಡಿ ಉತ್ತಮ ಇನಿಂಗ್ಸ್ ಒಂದನ್ನು ಆಡಿದ್ದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 3 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 40 ರನ್ ಬಾರಿಸಿದ್ದರು. ಜಸ್‌ಪ್ರೀತ್ ಬುಮ್ರಾಗೂ ಸಿಕ್ಸರ್ ರುಚಿ ತೋರಿಸಿದ್ದರು. ಟ್ರೆಂಟ್ ಬೌಲ್ಟ್ ಎಸೆದ ಅಂತಿಮ ಓವರ್‌ನ ನಾಲ್ಕನೇ ಎಸೆತದಲ್ಲಿ ಅಭಿನವ್ ಬಲವಾಗಿ ಬೀಸುವ ಯತ್ನದಲ್ಲಿ ಹಿಟ್ ವಿಕೆಟ್ ಆದರು.
ಮನೋಹರ್ ಮತ್ತು ಕ್ಲಾಸೆನ್ ಜೋಡಿ 6ನೇ ವಿಕೆಟ್‌ಗೆ 99 ರನ್‌ಗಳ ಜತೆಯಾಟ ನಡೆಸಿದ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. 44 ಎಸೆತ ಎದುರಿಸಿದ ಕ್ಲಾಸೆನ್(9 ಬೌಂಡರಿ, 2 ಸಿಕ್ಸರ್) 71 ರನ್ ಬಾರಿಸಿದರು.
ಇದನ್ನೂ ಓದಿ IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
ಆರ್‌ಜಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್, ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ (71 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (43 ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಾಹಸದಿಂದ 8 ವಿಕೆಟ್‌ಗೆ 143 ರನ್ ಪೇರಿಸಿತು. ಜವಾಬಿತ್ತ ಮುಂಬೈ ತಂಡ ರೋಹಿತ್ ಹಾಗೂ ಸೂರ್ಯಕುಮಾರ್ ಜತೆಯಾಟದಿಂದ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 ರನ್‌ಗಳಿಸಿ ಗೆದ್ದು ಬೀಗಿತು.