ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಸ್ಟೇಟ್ ಗೇಮ್ಸ್ ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

ಸ್ಟೇಟ್ ಗೇಮ್ಸ್ ತೀರ್ಪುಗಾರರಾಗಿ ಮಂಚನಬಲೆ ಶ್ರೀನಿವಾಸ್ ಆಯ್ಕೆ

ತುಮಕೂರಿನ ನೂತನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜ19ರಿಂದ 23ರವರೆಗೆ ಸ್ಟೇಟ್ ಗೇಮ್ಸ್ (ಎಲ್ಲಾ ತರಹದ ಗುಂಪು ಆಟಗಳು) ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿವೆ. ಈ ಕ್ರೀಡಾಕೂಟದ ಉದ್ಘಾಟಕರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ಗೃಹ ಸಚಿವ ಡಾ|| ಜಿ.ಪರಮೇಶ್ವರ್, ರಾಜ್ಯ ಒಲಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಗೋವಿಂದರಾಜು ಆಗಮಿಸು ತ್ತಿದ್ದಾರೆ.

MP Dr. K. Sudhakar: ನಂಬಿಕೆ ವಿಶ್ವಾಸ ಮತ್ತು ಸ್ವಾವಲಂಬಿ ಬದುಕು ಮೈಗೂಡಿಸಿಕೊಂಡಿರುವ ಏಕೈಕ ಸಮುದಾಯ ಸಾದರ ಸಮುದಾಯ: ಸಂಸದ ಡಾ.ಕೆ.ಸುಧಾಕರ್

ಸಾದರ ಸಮಯದಾಯ ಭವನ ನಿರ್ಮಾಣಕ್ಕೆ ಗಣ್ಯರಿಂದ ಶಂಕುಸ್ಥಾಪನೆ

ಸಾದರ ಸಮುದಾಯದ ಹಿರಿಯ ಡಾ.ಮುಖ್ಯಮಂತ್ರಿ ಚಂದ್ರು ಈ ಸಮುದಾಯಕ್ಕೆ ದೊಡ್ಡ ನಕ್ಷತ್ರ ವಿದ್ದಂತೆ. ಸಮುದಾಯವು ಮೂಲತಃ ಕೃಷಿ ಚಟುವಟಿಕೆಯನ್ನು ನಂಬಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಸಂತಸದ ವಿಚಾರವಾಗಿದೆ. ನೂತನ ಸಮುದಾಯ ಭವನ ನಿರ್ಮಾಣಕ್ಕಾಗಿ ಸ್ಥಳೀಯ ಸಂಸದರ ನಿಧಿಯಿಂದ ಎರಡು ಕಂತು ಗಳಲ್ಲಿ 50 ಲಕ್ಷ ನೀಡಲು ಬದ್ಧನಾಗಿದ್ದು, ನಂತರ ವೈಯಕ್ತಿಕ ಸಹಾಯ ಮಾಡುವ ಭರವಸೆ ನೀಡುತ್ತೇನೆ

Shidlaghatta News: ಕ್ಷೇತ್ರಕ್ಕೆ ನಾವೇ ಅವರನ್ನ ಆಯ್ಕೆ ಮಾಡಿದ್ದೇವೆ: ಕ್ಷಮೆಯಾಚಿಸಿದ ಶಶಿಧರ್ ಮುನಿಯಪ್ಪ

ಕ್ಷೇತ್ರಕ್ಕೆ ನಾವೇ ಅವರನ್ನ ಆಯ್ಕೆ ಮಾಡಿದ್ದೇವೆ

ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ್ ಗೌಡ ಈ ರೀತಿ ಮಾತನಾಡಬಾರದಾಗಿತ್ತು. ಕ್ಷೇತ್ರಕ್ಕೆ ನಾವೇ ಅವರನ್ನ ಆಯ್ಕೆ ಮಾಡಿದ್ದೇವೆ. ಅವರು ಈ ರೀತಿ ಮಾತನಾಡಿರೋದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ ಎಂದು ಶಶಿಧರ್ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

Kolar News: ಮಾಲೂರಿನಲ್ಲಿ ಅವಧಿ ಮುಗಿದ ಬಿಯರ್ ಕುಡಿದು ಹಲವರು ಅಸ್ವಸ್ಥ; ಬಾರ್ ಮುಚ್ಚಿಸಲು ಆಗ್ರಹ

ಮಾಲೂರಿನಲ್ಲಿ ಅವಧಿ ಮುಗಿದ ಬಿಯರ್ ಕುಡಿದು ಹಲವರು ಅಸ್ವಸ್ಥ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಅವಧಿ ಮೀರಿದ ಬೀರ್‌ ಕುಡಿದು ಅಸ್ವಸ್ಥರಾದವರನ್ನು ಮಾಲೂರಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಹೀಗಾಗಿ ಬಾರ್‌ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಸರ್ಕಾರಿ ನೌಕರರ ಸಂಘಟನೆ ಪ್ರತಿಭಟನೆ

ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹ: ಪ್ರತಿಭಟನೆ

ಮಹಿಳಾ ಅಧಿಕಾರಿಯ ವಿರುದ್ಧ ಅವಾಚ್ಯ ಶದ್ಧಗಳನ್ನು ಬಳಸಿ ನಿಂದಿಸಿರುವುದು ಖಂಡನೀಯ. ಇಂತಹ ಘಟನೆಗಳು ಸಾರ್ವಜನಿಕ ಆಡಳಿತ ವ್ಯವಸ್ಥೆಗೆ ಕಳಂಕ ತರಲಿದೆ. ರಾಜೀವ್ ಗೌಡ ಅವರನ್ನು ಕೂಡಲೇ ಬಂಧಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಜೋಯಾಲುಕ್ಕಾಸ್‌ನಿಂದ `ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ'

ಬೆಂಗಳೂರಿನಲ್ಲಿ ಜೋಯಾಲುಕ್ಕಾಸ್‌ನಿಂದ `ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ'

ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಜನವರಿ 16ರಿಂದ ಬೆಂಗಳೂರಿನ ಎಂ.ಜಿ. ರಸ್ತೆಯ ಶೋ ರೂಂನಲ್ಲಿ `ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ'ದ ಮೂಲಕ ಬೆಂಗಳೂರನ್ನು ಮಂತ್ರ ಮುಗ್ಧಗೊಳಿಸಲು ಸಜ್ಜಾಗಿದೆ. ಈ ವಿಶೇಷ ಪ್ರದರ್ಶನವು ವಜ್ರದ ಆಭರಣ ಗಳಲ್ಲಿ ಕಲಾತ್ಮಕತೆ, ಸೊಬಗು ಮತ್ತು ನಾವೀನ್ಯತೆಯ ಅಸಾಧಾರಣ ಆಚರಣೆಯ ಭರವಸೆ ನೀಡುತ್ತದೆ.

Hangal News: ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಪತಿ!

ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಪತಿ!

Hangal Murder Case: ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಮುಡೂರು ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಹಾನಗಲ್‌ ಪೊಲೀಸ್ ಠಾಣೆಯ ವಿಶೇಷ ತಂಡ ಕಾರ್ಯಾಚರಣೆ ಮುಂದುವರಿಸಿದೆ.

Bengaluru Habba: ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ದರಾಮಯ್ಯ

ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಬೆಂಗಳೂರು ಹಬ್ಬ -2026ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದ್ದಾರೆ.

ಐಟಿ ಸೇವೆಯ ವಲಯದ ಆದಾಯ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ1.4%, ನಿವ್ವಳ ಆದಾಯ ₹3120 ಕೋಟಿ

ವಿಪ್ರೊದಿಂದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ವಿಪ್ರೊ ಇಂದು ಡಿಸೆಂಬರ್ 31, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ರೂ. 23560 ಕೋಟಿ ಆದಾಯ ಗಳಿಸಿದೆ ಮತ್ತು ರೂ.3,120 ಕೋಟಿ ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ 17.6% ಇದ್ದು ಇದನ್ನು ತ್ರೈಮಾಸಿಕದಂದ ತ್ರೈಮಾಸಿಕಕ್ಕೆ 0.9% ವಿಸ್ತರಿಸಿದೆ.

ಗ್ರೇಟರ್ ಬೆಂಗಳೂರು ಎಲೆಕ್ಷನ್; ಮೈತ್ರಿ ಬಗ್ಗೆ ಗೊಂದಲವೇ ಇಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ

ಗ್ರೇಟರ್ ಬೆಂಗಳೂರು ಎಲೆಕ್ಷನ್; ಮೈತ್ರಿ ಬಗ್ಗೆ ಗೊಂದಲ ಇಲ್ಲ ಎಂದ ಎಚ್‌ಡಿಕೆ

HD Kumaraswamy: ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಮೂಲಸೌಕರ್ಯವನ್ನು ಸರ್ವನಾಶ ಮಾಡಿದ್ದಾರೆ. ಕಾಲಿಟ್ಟ ಕಡೆಯಲ್ಲೆಲ್ಲಾ ಗುಂಡಿಗಳು ಕಾಣುತ್ತವೆ. ತೆರಿಗೆ, ಬೆಲೆ ಹೇರಿಕೆಯಿಂದ ಜನರನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆಲ್ಲ ತಕ್ಕ ಪಾಠ ಕಲಿಸಲು ಜನರು ಸಿದ್ಧರಾಗಿದ್ದಾರೆ. ಹೀಗಾಗಿ ನಾವು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಎಲೆಕ್ಷನ್‌ನಲ್ಲಿ ಮೈತ್ರಿ ಬಗ್ಗೆ ಗೊಂದಲ ಇಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ

Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿ ಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಜ.29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರುಗಲಿದೆ ಇದರ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿ ದ್ದರು.

Adigas Yatra: ಜ.18ಕ್ಕೆ ಅಡಿಗಾಸ್‌ ಯಾತ್ರಾ 32ನೇ ವಾರ್ಷಿಕೋತ್ಸವ; ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ

Adigas Yatra: ಜ.18ಕ್ಕೆ ಅಡಿಗಾಸ್‌ ಯಾತ್ರಾ 32ನೇ ವಾರ್ಷಿಕೋತ್ಸವ

ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಜ.18ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಅಡಿಗಾಸ್ ಯಾತ್ರಾ ಸಂಸ್ಥೆಯ 32ನೇ ವಾರ್ಷಿಕೋತ್ಸವ ಆಯೋಜಿಸಲಾಗಿದೆ. ಕಳೆದ 31 ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸಿ ತಾಣಗಳಿಗೆ ಆರಾಮದಾಯಕ, ಸುವ್ಯವಸ್ಥಿತ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಅಡಿಗಾಸ್‌ ಯಾತ್ರಾಗೆ ಈಗ 32ನೇ ವರ್ಷದ ಸಂಭ್ರಮ.

ಬೆಂಗಳೂರಿನಲ್ಲಿ ಡಿಜಿಟಲ್ ಮತ್ತು ಸ್ಟಾರ್ಟ್ಅಪ್ ಬ್ಯಾಂಕಿಂಗ್ ಉಪಸ್ಥಿತಿ ವಿಸ್ತರಿಸುವ ಯೋಜನೆ ಪ್ರಕಟಿಸಿದ ಪಿಎನ್ಬಿ ವ್ಯವಸ್ಥಾಪಕ ನಿರ್ದೇಶಕ, ಸಿಇಒ

ಡಿಜಿಟಲ್ ಮತ್ತು ಸ್ಟಾರ್ಟ್ಅಪ್ ಬ್ಯಾಂಕಿಂಗ್: ಯೋಜನೆಗಳ ಪ್ರಕಟ

ತನ್ನ ಗ್ರಾಹಕ-ಕೇಂದ್ರಿತ ಉಪಕ್ರಮಗಳ ಭಾಗವಾಗಿ, ಪಿಎನ್ಬಿ ಸೇವಾ ಗುಣಮಟ್ಟ ಮತ್ತು ಶಾಖೆಯ ವಾತಾವರಣದಲ್ಲಿನ ಸುಧಾರಣೆಗಳಿಗೆ ಆದ್ಯತೆ ನೀಡುತ್ತಿದೆ. ಕ್ಯೂಆರ್ ಕೋಡ್ ಆಧಾರಿತ ಗ್ರಾಹಕ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಗ್ರಾಹಕರು ಶಾಖೆಯ ಸೇವೆಗಳ ಕುರಿತು ನೈಜ-ಸಮಯದ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ,

ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಹೊಡೆಯೋ ಚಪಲ; ಕೈ ಮುಖಂಡನಿಗೆ ಎಚ್‌ಡಿಕೆ ಟಾಂಗ್‌

ಕೆಲವರಿಗೆ ಜನರ ದುಡ್ಡು ಲೂಟಿ ಹೊಡೆಯೋ ಚಪಲ: ಎಚ್‌ಡಿಕೆ ತಿರುಗೇಟು

ಕುಮಾರಸ್ವಾಮಿ ಅವರಿಗೆ ಮಾತನಾಡುವ ಚಪಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿರುವ ಮಾತಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಿಮ್ಮದೊಂದು ರೀತಿ‌ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ನಮ್ಮದು ಜನರಿಗೆ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ ಎಂದು ಟೀಕಿಸಿದ್ದಾರೆ.

Haveri News: ಓಟ ನಿಲ್ಲಿಸಿದ ಕರ್ಜಗಿ ಓಂ-112; ರಾಜ್ಯಮಟ್ಟದಲ್ಲಿ ಖ್ಯಾತಿಯಾಗಿದ್ದ ಹೋರಿ ಅನಾರೋಗ್ಯದಿಂದ ಸಾವು

ಓಟ ನಿಲ್ಲಿಸಿದ ಕರ್ಜಗಿ ಓಂ-112; ಅನಾರೋಗ್ಯದಿಂದ ಹೋರಿ ಸಾವು

ಕರ್ಜಗಿಯಲ್ಲಿ ಹೋರಿ ಹಬ್ಬದ ಪೈಲ್ವಾನ್ ಆಗಿ ಮಿಂಚಿದ್ದ ಹೋರಿ ಕರ್ಜಗಿ ಓಂ ನಂಬರ್ 112, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಂಕಾಪುರದ ಹಬ್ಬ ಮುಗಿಸಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ.

ರಾಹುಲ್‌ ಗಾಂಧಿ ವೋಟ್‌ ಚೋರಿ ಆರೋಪಕ್ಕೆ ವ್ಯತಿರಿಕ್ತವಾದ ಸಮೀಕ್ಷೆ!

ರಾಹುಲ್‌ ಗಾಂಧಿ ವೋಟ್‌ ಚೋರಿ ಆರೋಪಕ್ಕೆ ವ್ಯತಿರಿಕ್ತವಾದ ಸಮೀಕ್ಷೆ!

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರ ಉಸ್ತುವಾರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯೊಂದು, ಸಾರ್ವಜನಿಕರಿಗೆ ಇವಿಎಂಗಳು, ವಿವಿಪಿಎಟಿ ಬಗ್ಗೆ ವಿಶ್ವಾಸ ಇರುವುದನ್ನು ಮತ್ತು ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿರುವ ಬಗ್ಗೆ ಇರುವ ನಂಬಿಕೆಯನ್ನು ದೃಢಪಡಿಸಿದೆ ಎಂದು ತಿಳಿದು ಬಂದಿದೆ.

ನನ್ನ ಹೆಸರಲ್ಲಿ ದುಡ್ಡು ಮಾಡ್ತೀರಿ, ನನಗೂ ಪಾಲು ಕೊಡಿ; ಜೇವರ್ಗಿ ತಹಸೀಲ್ದಾರ್ ಹಫ್ತಾ ವಸೂಲಿ?

ನನಗೂ ಪಾಲು ಕೊಡಿ; ಜೇವರ್ಗಿ ತಹಸೀಲ್ದಾರ್ ಹಫ್ತಾ ವಸೂಲಿ ಆರೋಪ

Jewargi Tahasildar: ​ಸರ್ಕಾರಿ ಕಚೇರಿಯಲ್ಲೇ ಬಹಿರಂಗವಾಗಿ ಹಫ್ತಾ ವಸೂಲಿಗೆ ಇಳಿದಿರುವ ತಹಸೀಲ್ದಾರ್, ಸಭೆಯಲ್ಲೇ ಬಿಂದಾಸ್ ಆಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಕ್ರಮಕ್ಕೆ ಆಗ್ರಹಿಸಿ ಮೇಲಧಿಕಾರಿಗೆ ಸಿಬ್ಬಂದಿಯೊಬ್ಬರು ದೂರು ಸಲ್ಲಿಸಿದ್ದಾರೆ.

ಜ.31ರಿಂದ ಮೂರು ದಿನ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ

ಜ.31ರಿಂದ ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳ

Sirsi Fruit and flower Show: ಜ.31ರಿಂದ ಮೂರು ದಿನಗಳ ಕಾಲ 2025-26ನೇ ಸಾಲಿನ ಫಲಪುಷ್ಪ ಪ್ರದರ್ಶನ, ಸಾವಯವ ಸಿರಿಧಾನ್ಯ ಮೇಳವನ್ನು ಶಿರಸಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಪಿ. ಸತೀಶ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕಂಪನಿ ಕಾರ್ಯದರ್ಶಿಗಳ ಶಾಖೆಯ ನೂತನ ಅಧ್ಯಕ್ಷರಾಗಿ ವಿಶ್ವಾಸ ಶಂಕರ ಹೆಗಡೆ ಆಯ್ಕೆ

ಕಂಪನಿ ಕಾರ್ಯದರ್ಶಿಗಳ ಶಾಖೆ ಅಧ್ಯಕ್ಷರಾಗಿ ವಿಶ್ವಾಸ ಶಂಕರ ಹೆಗಡೆ ಆಯ್ಕೆ

ವಿಶ್ವಾಸ ಶಂಕರ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನಿವಾಸಿಯಾಗಿದ್ದಾರೆ. 2015ರಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಅರ್ಹತೆ ಪಡೆದಿದ್ದಾರೆ. ಸುಮಾರು ಹತ್ತು ವರ್ಷಗಳಿಗಿಂತ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರುವ ಅವರು, ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದಲ್ಲಿ (ಬಿಐಎಎಲ್) ಡೆಪ್ಯುಟಿ ಕಂಪನಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧುಗಿರಿಯ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ; ಜ.22 ರಿಂದ ಫೆ. 4 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಮಧುಗಿರಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ; ಜ.22ರಿಂದ ವಿವಿಧ ಕಾರ್ಯಕ್ರಮ

Madhugiri News: ಮಧುಗಿರಿ ಪಟ್ಟಣದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಜ.22 ರಿಂದ ಫೆ. 4 ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕುರಿತ ವಿವರ ಇಲ್ಲಿದೆ.

Self Harming: ತಿಂಗಳುಗಟ್ಟಲೆ ಮನೆಗೆ ಬಾರದ ಪತಿ, ನೊಂದು ಬೆಂಕಿ ಹಚ್ಚಿಕೊಂಡು ತಾಯಿ- ಮಗಳು ಆತ್ಮಹತ್ಯೆ

ಮನೆಗೆ ಬಾರದ ಪತಿ, ನೊಂದು ಬೆಂಕಿ ಹಚ್ಚಿಕೊಂಡು ತಾಯಿ- ಮಗಳು ಆತ್ಮಹತ್ಯೆ

ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ ಗೋವಿಂದ್ ಪತ್ನಿ ಮತ್ತು ಮಗಳನ್ನು ಬಿಟ್ಟು ನೇಪಾಳಕ್ಕೆ ಹೋದರೆ 5-6 ತಿಂಗಳುಗಳ ಕಾಲ ಮರಳಿ ಬರುತ್ತಿರಲಿಲ್ಲ. ಇದರಿಂದ ಸೀತಾ ಮನಸ್ಸಿನಲ್ಲಿ ತುಂಬಾ ನೋವು ತುಂಬಿಕೊಂಡಿದ್ದರು. ಘಟನೆ ನಡೆದ ನಿನ್ನೆ ಸಂಜೆ ಕೂಡ ಪತಿ- ಪತ್ನಿ ಈ ವಿಚಾರದಲ್ಲಿ ಫೋನ್‌ನಲ್ಲಿ ಜಗಳವಾಡಿಕೊಂಡಿದ್ದರು.

Koratagere News: ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ

ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ

ಕೊರಟಗೆರೆ ಪಟ್ಟಣದ ಕಾವಲುಬೀಳು ಗ್ರಾಮದಲ್ಲಿ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ಚಿರತೆ ದಾಳಿ ನಡೆಸಿತ್ತು. ಇದರಿಂದ ಜನ ಭಯಭೀತರಾಗಿದ್ದರು. ಇದೀಗ ಎರಡು ವರ್ಷ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಚಿರತೆ ಸ್ಥಳಾಂತರಕ್ಕೆ ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

DK Shivakumar: ಸಿಎಂ ಸ್ಥಾನ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ: ಡಿಕೆ ಶಿವಕುಮಾರ್

ಸಿಎಂ ಸ್ಥಾನ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ: ಡಿಕೆ ಶಿವಕುಮಾರ್

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, ಈ ರೀತಿ ಉತ್ತರಿಸಿದರು. ಮೈಸೂರಿನಲ್ಲಿ ಮೊನ್ನೆ ಡಿಕೆ ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ರಾಹುಲ್‌, ದಿಲ್ಲಿಗೆ ಬರಲು ಆಹ್ವಾನಿಸಿದ್ದರು.

Theft Case: ಹುಡುಗರಂತೆ ಡ್ರೆಸ್‌ ಮಾಡಿಕೊಂಡು ಕಳವು ಮಾಡುತ್ತಿದ್ದ ಕಳ್ಳಿಯರ ಸೆರೆ

ಹುಡುಗರಂತೆ ಡ್ರೆಸ್‌ ಮಾಡಿಕೊಂಡು ಕಳವು ಮಾಡುತ್ತಿದ್ದ ಕಳ್ಳಿಯರ ಸೆರೆ

ಇಬ್ಬರೂ ಆರೋಪಿಗಳು ಟ್ಯಾನರಿ ರಸ್ತೆಯ‌ ನಿವಾಸಿಗಳಾಗಿದ್ದು ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕಿನಲ್ಲಿ ಓಡಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಕಳ್ಳತನ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ‌. ಇವರು ಇಬ್ಬರೇನಾ, ಅಥವಾ ಇವರ ಹಿಂದೆ ದೊಡ್ಡ ಗ್ಯಾಂಗ್‌ ಇದೆಯಾ ಎಂಬುದು ಪತ್ತೆ ಆಗಬೇಕಿದೆ.

Loading...